ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಇಕ್ಬಾಲ್ ಅನ್ಸಾರಿ..

ನುಡಿದಂತೆ ನಡೆ ಎನ್ನುವ ಶೀರ್ಷಿಕೆ ಯಡಿಯಲ್ಲಿ ತಮ್ಮ  
ಆಶ್ವಾಸನೆಗಳನ್ನು ಈಡೇರಿಸಿದ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ. ಸುಮಾರು ರೂ. 4.28 ಕೋಟಿ ವೆಚ್ಚದಲ್ಲಿ ಗಂಗಾವತಿ ನಗರದ ಬೈ-ಪಾಸ್ ರಸ್ತೆ ಸೇರಿದಂತೆ ಇನ್ನುಳಿದ ಪ್ರಮುಖ ರಸ್ತೆಗಳ ಅಭಿವೃಧ್ಧಿ ಕಾಮಗಾರಿಗೆ ಇಂದು ಚಾಲನೆ ನೀಡಿದರು.

ಈ ಹಿಂದೆ ಚುನಾವಣಾ ಪೂರ್ವದಲ್ಲಿ ಹಾಗೂ ಚುನಾವಣೆ ಸಂಧರ್ಭದಲ್ಲಿ ನೀಡಿದಂತಹ ಆಶ್ವಾಸನೆಗಳನ್ನು ಅಕ್ಷರಶಹ ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು , ನಗರದ ಜನತೆಗೆ ಸುಸಜ್ಜಿತ ರಸ್ತೆಗಳನ್ನು ನೀಡುವದರ ಮೂಲಕ ಭರವಸೆಗಳನ್ನು ಈಡೇರಿಸಿದ ಶಾಸಕ ಇಕ್ಬಾಲ್ ಅನ್ಸಾರಿ.

ಕರ್ನಾಟಕ ಸರಕಾರದ ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ” ಮ್ಯಾಕ್ರೋ” ಯೋಜನೆಯಡಿಯಲ್ಲಿ ಮಂಜೂರಾದ ಸುಮಾರು ರೂ. 4.28 ಕೋಟಿ ವೆಚ್ಚದಲ್ಲಿ ಗಂಗಾವತಿ ನಗರದ ವಿವಿಧ ರಸ್ತೆಗಳ ಅಭಿವೃಧ್ಧಿ ಕಾಮಗಾರಿಗಳಿಗೆ ಇಂದು ಭೂಮಿ ಪೂಜೆ ಮಾಡುವುದರ ಮೂಲಕ ಈ ಕೆಳಕಾಣಿಸಿದ ರಸ್ತೆಗಳ ಅಭಿವೃಧ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

1. ಗಂಗಾವತಿ ನಗರದ ಇಂದಿರಾ ಗಾಂಧಿ ವೃತ್ತದಿಂದ ಅಂಬೇಡ್ಕರ್ ನಗರ ಹಾಗೂ ಕನಕದಾಸ ಮಾರ್ಗವಾಗಿ ಶ್ರೀ ನೀಲಕಂಠೇಶ್ವರ ವೃತ್ತದವರೆಗೆ ರಸ್ತೆ ಅಭಿವೃಧ್ಧಿ ಹಾಗೂ ಡಾಂಬರೀಕರಣ.

2. ಗಂಗಾವತಿ ನಗರದ ಬಸವೇಶ್ವರ ವೃತ್ತದಿಂದ ವ್ಹಾಯ ಶ್ರೀಮತಿ ಲಲಿತಾರಾಣಿ ಇವರ ಮನೆಯ ಮಾರ್ಗವಾಗಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ವರೆಗೆ ರಸ್ತೆ ಅಭಿವೃಧ್ಧಿ ಹಾಗೂ ಡಾಂಬರೀಕರಣ.

3. ಗಂಗಾವತಿ ನಗರದ ಕನಕದಾಸ ವೃತ್ತದಿಂದ ಹೆಚ್.ಆರ್.ಎಸ್ ಕಾಲೋನಿ ಹಾಗೂ ಶ್ರೀ ಬಸವೇಶ್ವರ ದೇವಸ್ಥಾನ ಮಾರ್ಗವಾಗಿ ಆನೆಗೂಂದಿ ರಸ್ತೆಯವರೆಗೆ ರಸ್ತೆ ಅಭಿವೃಧ್ಧಿ ಹಾಗೂ ಡಾಂಬರೀಕರಣ.

4. ಗಂಗಾವತಿ ನಗರದ ಹಳೇ ಸಿಂಡಿಕೇಟ್ ಬ್ಯಾಂಕ್ ನಿಂದ ವಾರದ ಸಂತೆ ಬಯಲು ಹಾಗೂ ಗೌಸಿಯಾ ಕಾಲೋನಿ ಮಾರ್ಗವಾಗಿ ಜಯನಗರ ರಿಂಗ್ ರಸ್ತೆಯವರೆಗೆ ರಸ್ತೆ ಅಭಿವೃಧ್ಧಿ ಹಾಗೂ ಡಾಂಬರೀಕರಣ ಕಾರ್ಯಕ್ರಮ ಗಳಿಗೆ ಚಾಲನೆ ನೀಡಿದರು.

Please follow and like us:
error