ವಿರ್ದ್ಯಾರ್ಥಿ ದಿಸೆಯಿಂದಲೇ ಸಹಕಾರ ಪ್ರವೃತ್ತಿ ಬೆಳೆಸಿಕೊಳ್ಳಿ : ಹಿರೇಮಠ

ಕುಷ್ಟಗಿ : ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತದ ವತಿಯಿಂದ ಶ್ರೀ ಮರಿಶಾಂತವೀರ ಮಹಾಸ್ವಾಮಿ ಮಹಿಳಾ ಸ್ವತಂತ್ರ ಪದವಿ ಪೂರ್ವ ಕಾಲೇಜ ಕುಷ್ಟಗಿಯಲ್ಲಿ ಆಯೋಜಿಸಿದ ಯುವಜನ ತರಬೇತಿಯನ್ನು ಉಧ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಎಸ್.ಬಿ.ಹಿರೇಮಠರು ಸಹಕಾರ ಪ್ರತಿಯೊಬ್ಬರ ಜೀವನದಲ್ಲಿ ಅವಶ್ಯ, ಆದ್ದರಿಂದ ವಿದ್ಯಾರ್ಥಿ ದಿಸೆಯಿಂದಲೇ ಸಹಕಾರ ಮನೋಭಾವನೆ ಬೆಳೆಸಿಕೊಂಡು ಸಮಾಜದ ಪ್ರಗತಿಗೆ ನಿಮ್ಮ ಪಾತ್ರ ಹಿರಿದು ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಸಹಕಾರದ ಉಗಮ, ಚಳುವಳಿಯ ಜೊತೆಗೆ ಪ್ರಸ್ತುತ ದಿನಗಳಲ್ಲಿ ಮಹಿಳೆಯ ಕಾರ್ಯಚರಣೆ, ಸಬಲೀಕರಣದ ಕುರಿತು ಕೊಪ್ಪಳ ಸಹಕಾರ ಯೂನಿಯನ ಪ್ರಭಾರ ಮುಖ್ಯ ಕಾರ್ಯನಿರ್ವಣಾಧಿಕಾರಿ ರಾಜ್ಮಾ ಮುಲ್ಲಾರವರು ಪ್ರಸ್ತಾವಿಕವಾಗಿ ಮಾತನಾಡಿದರು.
ಸಹಕಾರ ಸಂಘಗಳ ರಚನೆ, ಕಾರ್ಯವೈಖರಿ,ಲಾಭ ನಷ್ಟಗಳ, ಸಹಕಾರ ಇಲಾಖೆಯ ಯೋಜನೆಗಳ ಸದುಪಯೋಗವನ್ನು ಪಡೆಯುವಲ್ಲಿ ಮಹಿಳೆಯರು ಮುಂದಾಗಲು ಯುವಕರ ಪಾತ್ರ ಹಿರಿದಾಗಿದೆ ಎಂದು ರಾಯಚೂರ ಸಹಕಾರ ಯೂನಿಯನ ಮುಖ್ಯ ಕಾರ್ಯನಿರ್ವಣಾಧಿಕಾರಿ ಅನ್ನಪೂರ್ಣ ಹೇಮವಾಡಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಚಾರ್ಯ ಎಂ.ಕೆ.ಹಿರೇಮಠ, ಮುಖ್ಯ ಅತಿಥಿಯಾಗಿ ಕೆ.ಬಿ.ಸ್ಥಾವರಮಠ, ಹೊಸಪೇಟೆ ಸಹಕಾರ ಯೂನಿಯನ ಪ್ರಭಾರ ಮುಖ್ಯ ಕಾರ್ಯನಿರ್ವಣಾಧಿಕಾರಿ ನಾಗರಾಜ, ಸಹಕಾರ ಶಿಕ್ಷಕರಾದ ಅಕ್ಷಯ, ಅಶ್ವಿನಿ, ಗಾಯತ್ರಿ, ಉಪನ್ಯಾಸಕರಾದ ವಿಜಯಲಕ್ಷ್ಮೀ, ಶಿವಪುತ್ರಪ್ಪ, ವಿ.ಬಿ.ಹಾವರಗಿ, ಯಮನೂರಪ್ಪ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಾಗರಾಜ ನಿರೂಪಿಸಿದರು. ಯೂನಿಯನ್ ಸಿಬ್ಬಂದಿ ಹನುಮೇಶ ಲೈನದ ವಂದಿಸಿದರು.

Please follow and like us:
error