ವಿಮೋಚನಾ ದಿನಾಚರಣೆ : ವಿದ್ಯಾರ್ಥಿನಿ ಸಾವು

ಇಂದು ಕೊಪ್ಪಳ ಜಿಲ್ಲೆಯಲ್ಲಿ ಸಂಭ್ರಮದಿಂದ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ನಡೆಯುತ್ತಿದ್ರೆ. ಇತ್ತ ಯಲಬುರ್ಗಾದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ದೀಢೀರನೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಹೈ.ಕ.ವಿಮೋಚನೆ ದಿನಾಚರಣೆ ಗಾಗಿ ಸಂಭ್ರಮದಿಂದ ರಂಗೋಲಿ ಬಿಡಿಸಿದ ಹತ್ತನೇ ತರಗತಿಯ ಅಶ್ವಿನಿ ಬಂಡಿ ಆಕಸ್ಮಿಕವಾಗಿ ಕುಸಿದು ಬಿದ್ದಿದ್ದಾಳೆ. ಶಾಲೆಯಲ್ಲಿ ಧ್ವಜಾರೋಹಣ ನೆರವೇರುವ ವೇಳೆ ಈ ದುರ್ಘಟನೆ ನಡೆದಿದೆ.ಅಶ್ವಿನಿ ಕುಸಿದು ಬೀಳುತ್ತಿದ್ದಂತೆ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ರು ಪ್ರಯೋಜನವಾಗದೆ ಅಶ್ವಿನಿ ಸಾವನ್ನಪ್ಪಿದ್ದಾಳೆ.
ತಾಲೂಕಿನ ಮಂಗಳೂರು ಗ್ರಾಮದ ನಿವಾಸಿಯಾಗಿದ್ದ ಅಶ್ವಿನಿ ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು ಎನ್ನಲಾಗುತ್ತಿದೆ. ಇನ್ನು ವಿಷಯ ತಿಳಿದು ಆಸ್ಪತ್ರೆಗೆ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ ಭೇಟಿ ನೀಡಿ ಮೃತಳ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡುವಂತೆ ಮೃತ ವಿದ್ಯಾರ್ಥಿನಿ ಪೋಷಕರು ಪಟ್ಟಿ ಹಿಡಿದಿದ್ದಾರೆ.