ವಿಭಿನ್ನವಾಗಿ ಹೆಚ್ಡಿಕೆ ಹುಟ್ಟುಹಬ್ಬ ಆಚರಣೆ

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹುಟ್ಟಹಬ್ಬವನ್ನು ಕೊಪ್ಪಳದಲ್ಲಿ ಜೆಡಿಎಸ್ ಕಾರ್ಯಕರ್ತರು ವಿಭಿನ್ನವಾಗಿ ಆಚರಣೆ ಮಾಡಿದ್ರು.. ಕೊಪ್ಪಳದ ಮಳೆಮಲ್ಲೇಶ್ವರ ದೇವಸ್ಥಾನದಲ್ಲಿ

ವಿಶೇಷ ಪೂಜೆ ಸಲ್ಲಿಸಿದ ಜೆಡಿಎಸ್ ಕಾರ್ಯಕರ್ತರು ಉರಳು ಸೇವೆ ಸೇರಿದಂತೆ 101 ತೆಂಗಿನಕಾಯಿ ಹೊಡೆಯುವ ಮೂಲಕ ಕುಮಾರಣ್ಣ ನೂರ್ಕಾಲ ಬಾಳಲಿ ಎಂದು ಹಾರೈಸಿದರು.. ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಜೆಡಿಎಸ್ ಉಸ್ತುವಾರಿ ಸಿಎಂ ನಾಗರಾಜ್, ಮುಖಂಡರಾದ ಕೆಎಮ್ ಸೈಯದ್, ಜಿಲ್ಲಾಧ್ಯಕ್ಷ ಪ್ರದೀಪಗೌಡ ಮಾಲಿಪಾಟೀಲ್, ಕೆ.ಎಸ್ ಕೊಡತಗೇರಿ ಸೇರಿದಂತೆ ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು..