ವಿದ್ಯುತ್ ದೀಪಗಳ ಅಳವಡಿಕೆ ಈಡೇರಿದ ಕಿನ್ನಾಳ ರಸ್ತೆಯ ಜನರ ಬೇಡಿಕೆ

 

ಕೊಪ್ಪಳ ನಗರದ ಅಶೋಕ ವೃತ್ತದಿಂದ ಕಲ್ಯಾಣನಗರದ ಮೂಲಕ ಕಿನ್ನಾಳ ರಸ್ತೆಯ ಮಧ್ಯದಲ್ಲಿನ‌ ವಿಭಾಜಕಕ್ಕೆ ವಿದ್ಯುತ ದೀಪಗಳ ಪ್ರಾರಂಭೋತ್ಸವವನ್ನು ಲೋಕಸಭಾ ಸದಸ್ಯರಾದ ಕರಡಿ ಸಂಗಣ್ಣನವರು , ಶಾಸಕರಾದ ರಾಘವೇಂದ್ರ ಹಿಟ್ನಾಳರವರು ಹಾಗೂ 26 ನೇ ವಾರ್ಡನ ನಗರಸಭೆ ಸದಸ್ಯರಾದ ದೇವಕ್ಕ ಲಕ್ಷ್ಮಣ ಕಂದಾರಿಯವರು ನೇರವೆರಿಸಿದರು.
ಕಿನ್ನಾಳ ರಸ್ತೆಯಲ್ಲಿ ಕತ್ತಲು ಇದ್ದಿದ್ದರಿಂದ ಸಂಜೆ ಆದ ಮೇಲೆ ಸರಗಳ್ಳತನದ ಪ್ರಕರಣಗಳು ದಾಖಲಾಗಿದ್ದವು. ಬಹುದಿನ ಬೇಡಿಕೆ ಈಡೇರಿದ್ದಕ್ಕೆ ವಾರ್ಡನ ನಿವಾಸಿಗಳು ಪಟಾಕಿ ಸಿಡಿಸಿ ವಿತರಿಸಿ ಸಂಭ್ರಮಿಸಿದರು. 26 ನೇ ವಾರ್ಡನಲ್ಲಿನ ರಾಜಾಕಾಲುವೆ ಸಮಸ್ಯೆ, ಉದ್ಯಾನವನ ನಿರ್ಮಾಣ,  ರೈಲ್ವೆ ಕೆಳಸೇತುವೆಗೆ ಡಾಂಬರೀಕರಣ ಹಾಗೂ ಇನ್ನಿತರ ಮೂಲಭೂತ ಸಮಸ್ಯೆಗಳನ್ನು ಶೀಘ್ರವಾಗಿ ಈಡೇರಿಸುವ ಭರವಸೆಯನ್ನು ಸಂಸದರು ಮತ್ತು ಶಾಸಕರು ನೀಡಿದರು. ಅಲ್ಲದೆ ಎಫ್ ಸಿ ಐ ಗುಡೌನನಿಂದ ಉಳಿದ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚನೆಯನ್ನು ನೀಡಿದರು.
ಕೋವಿಡ್-19 ನಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಕೊಪ್ಪಳ ನಗರಸಭೆಯ ಪೌರಾಯುಕ್ತರಾದ ಟಿ. ಮಂಜುನಾಥ ಮತ್ತು ಸಿಬ್ಬಂದಿ ವರ್ಗದವರು ನಗರದಲ್ಲಿನ ಜನರಿಗೆ ಯಾವುದೇ ತೊಂದರೆಯಾಗದಂತೆ ಲಾಕಡೌನ್ ಸಂದರ್ಭದಲ್ಲಿ ಪ್ರೋರೈಡ್ ಸಿಂಪಡನೆ, ಜನರ ಮನೆ ಬಾಗಿಲಿಗೆ ಕಿರಾಣಿ,ತರಕಾರಿ, ಹಾಲು ಹಾಗೂ ಹಣ್ಣು ದೊರೆಯುವಂತೆ ಮಾಡಿ ಈಡಿ ರಾಜ್ಯಕ್ಕೆ ಮಾದರಿಯಾಗುವ ರೀತಿ ಮುಂಜಾಗ್ರತಾ ಕ್ರಮಗಳನ್ನು ಕೈಕೊಂಡಿದ್ದರಿಂದ ಲಾಕಡೌನ್-3 ರ ವರೆಗೆ ಕೋರೋನಾ ಮುಕ್ತವಾಗಿಟ್ಟಿದ್ದಕ್ಕೆ ಅವರನ್ನು ಸನ್ಮಾನಿಸಲಾಯಿತು. ಮುಂದೆ ನಗರದ ಅಭಿವೃದ್ದಿಗಾಗಿ ಹೆಚ್ಚಿಮ ಅನುದಾನ ಒದಗಿಸುವ ಭರವಸೆಯನ್ನು ಜನಪ್ರತಿನಿಧಿಗಳು ನೀಡಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಅಪ್ಪಣ್ಣ ಪದಕಿ,  ಹಿರಿಯ ಹೋರಾಟಗಾರದ ಅಲ್ಲಮಪ್ರಭು ಬೆಟ್ಟದೂರು, ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮನ್ನವರ, ನ್ಯಾಯವಾದಿಗಳಾದ ಫೀರಾಹುಸೇನ್ ಹೊಸಳ್ಳಿ, ವಿಜಯ್ ಅಮೃತರಾಜ್, ಶ್ರೀನಿವಾಸ ನರಗುಂದ, ಹನುಮಂತಪ್ಪ ನೇಲಜೇರಿ,ರಾಜೂರ, ಎಸ್ .ಎಂ.ಕಂಬಾಳಿಮಠ, ರಾಘವೇಂದ್ರ ನರಗುಂದ, ಬಸವರಾಜ ಬನ್ನಿಕೊಪ್ಪ, ಗಿರೀಶ್ ಕಣವಿ,  ಶರಣಯ್ಯಸ್ವಾಮಿ, ಹೊಸಭಾವಿ ಸರ, ನಗರಸಭೆ ಸದಸ್ಯರಾದ ಬಸಯ್ಯ ಹಿರೇಮಠ, ಅಜೀಮ್ ಅತ್ತಾರ, ಸೋಮಣ್ಣ ಹಳ್ಳಿ, ಮುತ್ತುರಾಜ ಕುಷ್ಟಗಿ, ಗವಿಸಿದ್ದಪ್ಪ ಚಿನ್ನೂರ,  ಗುತ್ತಿಗೆದಾರದ ಖಾಜವಲಿ ಬನ್ನಿಕೊಪ್ಪ, ಮೆಹಬೂಬ್, ಮಹೇಶ ಹಳ್ಳಿಗುಡಿ, ಪವರ್ ಮ್ಯಾನ್ ಶರಣಬಸವರಾಜ್ ಉಪಸ್ಥಿತರಿದ್ದರು.
Please follow and like us:
error