ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಭತ್ತದ ಕಟಾವು ಯಂತ್ರ ಹೊತ್ತು ಚಲಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿ ಇನ್ನೊಬ್ಬ ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಕೂಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ತೊಂಡಿಹಾಳ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಘಟನೆಯನ್ನು ಮೃತಪಟ್ಟ ವ್ಯಕ್ತಿಯನ್ನು ಸುರೇಶ್ (30) ಎಂದು ಗುರುತಿಸಲಾಗಿದೆ. ಇನ್ನು ಲಾರಿ ಚಾಲಕ ಜಾನು ಪ್ರಾಣಪಾಯದಿಂದ ಪಾರಾಗಿದ್ದಾನೆ. ಮೃತ ಸುರೇಶ್ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕು ಕಾಗನೂರು ಗ್ರಾಮದವನು ಎಂದು ತಿಳಿದು ಬಂದಿದೆ. ಸುರೇಶ್ ಭತ್ತ ಕಟಾವು ಯಂತ್ರದ ಆಪರೇಟರ್ ಆಗಿದ್ದ. ಭತ್ತದ ಕಟಾವು ಮುಗಿಸಿಕೊಂಡು ಕಟಾವು ಯಂತ್ರವನ್ನು ಲಾರಿಯಲ್ಲಿ ಹೇರಿಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಜೋತುಬಿದ್ದಿದ್ದ ವಿದ್ಯುತ್ ತಂತಿಗಳು ಕಟಾವು ಯಂತ್ರಕ್ಕೆ ತಗುಲಿದ ಪರಿಣಾಮ ಇಡೀ ಲಾರಿಗೆ ವಿದ್ಯುತ್ ಪ್ರವಾಹವಾಗಿದೆ. ಸುರೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಆದರೆ, ಅದೃಷ್ಟವಶಾತ್ ಎಂಬಂತೆ ಲಾರಿ ಚಾಲನೆ ಮಾಡುತ್ತಿದ್ದ ಜಾನು ಲಾರಿಯಿಂದ ಜಿಗಿದು ಪ್ರಾಣಪಾಯದಿಂದ ಪಾರಾಗಿದ್ದಾನೆ. ಈ ರಸ್ತೆಯಲ್ಲಿ ಸುಮಾರು ದಿನಗಳಿಂದ ವಿದ್ಯುತ್ ತಂತಿ ಜೋತುಬಿದ್ದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿತ್ತು. ಈ ಕುರಿತಂತೆ ಜೆಸ್ಕಾಂ ಅಧಿಕಾರಿಗಳಿಗೆ, ಲೈನ್‍ಮನ್‍ಗಳ ಗಮನಕ್ಕೆ ತಂದರೂ ಅದನ್ನು ಸರಿಪಡಿಸಿರಲಿಲ್ಲ. ಈ ದುರ್ಘಟನೆಗೆ ಜೆಸ್ಕಾಂ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಥಳಕ್ಕೆ ಬಂದ ಜೆಸ್ಕಾಂನ ಲೈನ್‍ಮನ್ ಶರೀಫ್ ಎಂಬಾತನನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ಕಾರಟಗಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Please follow and like us:
error