ವಿದ್ಯಾರ್ಥಿ ಸಂಘ ಉದ್ಘಾಟನೆ’

‘ವಾಣಿಜ್ಯಶಾಸ್ತ್ರ ವಿಭಾಗದ ‘ಹೊಸತು ಸಂಗಮ’ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ವಿದ್ಯಾರ್ಥಿ ಸಂಘ ಉದ್ಘಾಟನೆ’
ಬಳ್ಳಾರಿಯ ಜ್ಞಾನಸಾಗರ, ನಂದಿಹಳ್ಳಿಯ ಜ್ಞಾನಸರೋವರ ದಂತೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 3ನೇ ಸ್ನಾತಕೋತ್ತರ ಕೇಂದ್ರ ಕೊಪ್ಪಳದಲ್ಲಿ ಆರಂಭವಾಗಿದ್ದು ನಮ್ಮೇಲ್ಲರ ಭಾಗ್ಯವೆಂದು ಹಿರಿಯ ನ್ಯಾಯವಾದಿಗಳಾದ ಶ್ರೀ ರಾಘವೇಂದ್ರ ಪಾನಘಂಟಿ ಹೇಳಿದರು. ಅವರು ಕೊಪ್ಪಳದ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ವಾಣಿಜ್ಯ ವಿಭಾಗದ ಕಾಮರ್ಸ ಕ್ಲಬ್ ಉದ್ಘಾಟನೆ ಮತ್ತು ಹೊಸತು ಸಂಗಮ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹೈದ್ರಾಬಾದ್ ಕರ್ನಾಟಕದ ಪ್ರಮುಖ ಜಿಲ್ಲೆಯಾಗಿರುವ ಕೊಪ್ಪಳ ಉನ್ನತ ಶಿಕ್ಷಣದಿಂದ ವಂಚಿತವಾಗಿತ್ತು, ಉನ್ನತ ವ್ಯಾಸಂಗಕ್ಕೆ ದೂರದ ಧಾರವಾಡ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಗಳಿಗೆ ತೆರಳಬೇಕಾಗಿತ್ತು, ಈ ದೂರವೇ ವಾಣಿಜ್ಯ ಪದವಿಯ ನಂತರ ನನ್ನ ಸ್ನಾತಕೋತ್ತರ ಪದವಿ ಪಡೆಯಲು ಹಿನ್ನಡೆಯಾಯಿತು ಎಂದು ತಮ್ಮ ಅನುಭವವನ್ನು ತಿಳಿಸಿದರು. ನನ್ನಂತೆಯೇ ಹಲವರಿಗೆ ಉನ್ನತ ಶಿಕ್ಷಣದ ಕೊರತೆ ಕಾಡಿತ್ತು. ಈಗ ಕೊಪ್ಪಳಕ್ಕೆ ಸ್ನಾತಕೋತ್ತರ ಕೇಂದ್ರ ಬಂದಿರುವುದು ಹರ್ಷ ತಂದಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಸ್ನಾತಕೋತ್ತರ ಕೇಂದ್ರದ ಸ್ವಂತ ಜಾಗ ಸ್ವಂತ ಕಟ್ಟಡದ ವಿಚಾರದಲ್ಲಿ ನಾನು ಕೂಡಾ ಪಾಲ್ಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿ.ಶ್ರೀ.ಕೃ.ವಿ, ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿಗಳಾದ ಡಾ. ಮನೋಜ್ ಡೊಳ್ಳಿ, ಇವರು ಮಾತನಾಡಿ ಸ್ನಾತಕೋತ್ತರ ಕೇಂದ್ರದ ಮುಖೇನ ಉನ್ನತ ಶಿಕ್ಷಣ ಪಡೆಯುವ ಮೂಲಕ ಸಂಪನ್ಮೂಲ ವ್ಯಕ್ತಿಗಳಾಗಿ ಹಿಂದುಳಿದ ಎಂಬ ಹಣೆಪಟ್ಟಿಯನ್ನು ಕಳಚುವವರೆಗು ನಿಮ್ಮ ಶ್ರಮ ಮತ್ತು ಪ್ರಯತ್ನಗಳು ನಿರಂತರವಾಗಿರಲಿ ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಕೈಗೊಂಡ ಸ್ವಚ್ಚತಾ ಕಾರ್ಯಕ್ರಮ ಯಶಸ್ವಿಯಾಗಿದ್ದನ್ನು ಶ್ಲಾಘಿಸಿ ಸಮಾಜಮುಖಿ ಕಾರ್ಯಗಳಲ್ಲಿ ಹೆಚ್ಚೇಚ್ಚು ತೊಡಗಿಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ರಾಘವೇಂದ್ರ ಪಾನಘಂಟಿಯವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅಕಾಡಮಿಕ್ ಕೌನ್ಸಿಲರ್ ಶ್ರೀ ಶಂಕರ್ ಬಿಸ್ನಳ್ಳಿ, ವಾಣಿಜ್ಯ ವಿಬಾಗದ ಉಪನ್ಯಾಸಕರಾದ ಪ್ರಸನ್ನಕುಮಾರ ಮುತ್ತಳ್ಳಿ, ಬಸವರಾಜ, ಶ್ರೀಮತಿ ವಿಜಯಲಕ್ಷ್ಮೀ, ಪಾಂಡುರಂಗನಗೌಡ ಹೊನ್ನಳ್ಳಿ, ಪತ್ರಿಕೋದ್ಯಮ ವಿಭಾUದÀ ಉಪನ್ಯಾಸಕರಾದ ಶ್ರೀ ಸಂತೋಷ್ ಕುಮಾರ ಚಿನ್ನಣ್ಣವರ್, ಶ್ರೀ ಶ್ರೀಕಾಂತ ಭದ್ರಾಪೂರ, ಅಕ್ಷಯ್ ಕುಲಕರ್ಣಿ, ಭಾಗವಹಿಸಿದ್ದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ದಿವ್ಯಾ ಮತ್ತು ಪೂಜಾ ನಿರೂಪಿಸಿದರು. ಅಶ್ವಿನಿ ಸ್ವಾಗತಿಸಿದರು, ಶೃತಿಯವರು ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Please follow and like us:
error