ವಿದ್ಯಾರ್ಥಿವೇತನ ಅರ್ಜಿಯನ್ನು ಪರಿಶೀಲಿಸಿ, ಪಾರ್ವಡ್ ಮಾಡಲು ಸೂಚನೆ

ಕೊಪ್ಪಳ ಸೆ. 28 ): ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ವಿವಿಧ ವಿದ್ಯಾರ್ಥಿವೇತನದ ಅರ್ಜಿಗಳನ್ನು ಸಂಬಂಧಿಸಿದ ಶಾಲಾ/ ಕಾಲೇಜುಗಳು ಆನ್‍ಲೈನ್‍ನಲ್ಲಿ ಪರಿಶೀಲಿಸಿ, ಮುಂದಿನ ಹಂತಕ್ಕೆ ಪಾರ್ವರ್ಡ್ ಮಾಡುವಂತೆ ಇಲಾಖೆಯ ಜಿಲ್ಲಾ ಅಧಿಕಾರಿ ಮಹಿಮೂದ್ ಅವರು ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಸಕ್ತ ಸಾಲಿನ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಫ್ರೀ ಮೆಟ್ರಿಕ್, ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಮತ್ತು ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿವೇತನ, ಎನ್.ಎಸ್.ಪಿ ವಿದ್ಯಾರ್ಥಿವೇತನದ ಅರ್ಜಿಗಳನ್ನು ಸಂಬಂಧಿಸಿದ ಶಾಲಾ/ ಕಾಲೇಜಿನ ಲಾಗಿನ್ ಬಳಸಿಕೊಂಡು ಶೀಘ್ರವಾಗಿ ಪರಿಶೀಲಿಸಿ ಮುಂದಿನ ಹಂತಕ್ಕೆ ಪಾರ್ವರ್ಡ್ ಮಾಡಬೇಕಾಗಿದ್ದು, ಅಲ್ಪಸಂಖ್ಯಾತರ ವಿದ್ಯಾರ್ಥಿವೇತನದ ಅರ್ಜಿಗಳನ್ನು ಶಾಲಾ/ ಕಾಲೇಜು ಹಂತದಲ್ಲಿ ಪರಿಶೀಲಿಸಿದರೆ ಮಾತ್ರ ಮುಂದಿನ ಹಂತಕ್ಕೆ ಅರ್ಜಿಗಳು ತಲುಪುತ್ತವೆ. ಆದ್ದರಿಂದ ವಿದ್ಯಾರ್ಥಿವೇತನದ ಅರ್ಜಿಗಳನ್ನು ಅಕ್ಟೋಬರ್. 31 ರೊಳಗಾಗಿ ಪರಿಶೀಲಿಸಿ, ಮುಂದಿನ ಹಂತಕ್ಕೆ ಕಳುಹಿಸಲು ಸಂಬಂದಿಸಿದ ಶಾಲಾ/ ಕಾಲೇಜುಗಳು ಮುಖ್ಯೋಪಾಧ್ಯಯರು/ ಪ್ರಾಚಾರ್ಯರು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸಕಾಲದಲ್ಲಿ ಈ ಕ್ರಮವನ್ನು ಕೈಗೊಳ್ಳದೇ ಇದ್ದಲ್ಲಿ ಸಂಬಂಧಿಸಿದ ಶಾಲಾ/ ಕಾಲೇಜಿನ ಪ್ರಾಂಶುಪಾಲರೇ ನೇರ ಹೊಣೆಗಾರರಾಗಿರುತ್ತಾರೆ .

Please follow and like us:
error