ವಿದ್ಯಾರ್ಥಿನಿಯರು ಸ್ವಯಂ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಬೇಕು-ಪ್ರಸನ್ನ

Koppal News ಸರಕಾರಿ ನೌಕರಿ ಅಥವಾ ಖಾಸಗಿ ಕಂಪನಿಗಳಲ್ಲಿ ನೌಕರಿ ಸಿಗದಿದ್ದರೆ ವಿದ್ಯಾರ್ಥಿನಿಯರು ಸ್ವಯಂ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ಉದ್ಯಮಶೀಲತಾ ಅಭೀವೃದ್ಧಿ ಕೇಂದ್ರದ ದೀಶಾ ಯೋಜನೆಯ ಸಂಪನ್ಮೂಲ ವ್ಯಕ್ತಿ ಪ್ರಸನ್ನ ಅವರು ಹೇಳಿದರು.
ಬುಧವಾರದಂದು ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ಉದ್ಯಮಶೀಲತಾ ಅಭೀವೃದ್ಧಿ ಕೇಂದ್ರದ ದೀಶಾ ಯೋಜನೆ ಮತ್ತು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್ ಹಾಗೂ ಸ್ಕಿಲ್ ಡೌವಲಪ್‌ಮೆಂಟ್ ಸೆಲ್‌ವತಿಯಿಂದ ಹಮ್ಮಿಕೊಂಡ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಸರಕಾರವು ಸ್ವಯಂ ಉದ್ಯೋಗಳಿಗೆ ಬ್ಯಾಂಕ್‌ಗಳ ಮೂಲಕ ಸಾಲ ಕೊಡುತ್ತಿದೆ. ಸರಕಾರವು ಮುದ್ರ ಯೋಜನೆ, ಪಿಎಮ್‌ಇಜಿಪಿ ಮತ್ತು ಸಿಮ್‌ಇಜಿಪಿ ಯೋಜನೆಗಳ ಮೂಲಕ ಕೊಡುವ ಸಾಲವನ್ನು ಸದ್ಭಳಕೆ ಮಾಡಿಕೊಳ್ಳಬೇಕು.ಸ್ವಂತ ಉದ್ಯೋಗಗಳಲ್ಲಿ ಸಾಧನೆ ಮಾಡಬೇಕು ಎಂದರೆ ಮನಸ್ಸು ಇದ್ದರೆ ಸಾಕು. ಅತ್ಮವಿಶ್ವಾಸ, ಸಾಮರ್ಥ್ಯ, ಛಲ, ದೈರ್ಯ, ಕೌಶಲ್ಯ, ನಂಬಿಕೆ, ತಾಳ್ಮೆ, ಶ್ರದ್ಧೆ ಮತ್ತು ಗುರಿ ಇದ್ದರೆ ಸ್ವಯಂ ಉದ್ಯೋಗಗಳಲ್ಲಿ ಯಶಸ್ವಯಾಗಬಹುದು ಎಂದು ವಿದ್ಯಾರ್ಥಿನಿಯರಿ ಸಲಹೆ ನಿಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣಪತಿ ಕೆ ಲಮಾಣಿ, ಕರ್ನಾಟಕ ಉದ್ಯಮಶೀಲತಾ ಅಭೀವೃದ್ಧಿ ಕೇಂದ್ರದ ದೀಶಾ ಯೋಜನೆಯ ಕೇಂದ್ರ ವ್ಯವಸ್ಥಾಪಕರಾದ ದತ್ತಾತ್ರೇಯ ಸಿ.ಜೆ, ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್‌ನ ಸಂಯೋಜಕರಾದ ವಾಣಿಜ್ಯಶಾಸ್ತ್ರದ ಸಹಾಯಕ ಪ್ರಾಧ್ಯಪಕರಾದ ಮಹಾಂತೇಶ್ ಮಧೋಳ್ ಮತ್ತು ಸ್ಕಿಲ್ ಡೌವಲಪ್‌ಮೆಂಟ್ ಸೆಲ್ ಸಂಯೋಜಕರಾದ ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕರಾದ ಡಾ. ನರಸಿಂಹ ಗುಂಜಹಳ್ಳಿ ಮತ್ತು ವಾಣಿಜ್ಯಶಾಸ್ತ್ರದ ಉಪನ್ಯಾಸಕ ಮಾಳಿಕೊಪ್ಪ ಅವರು ಇದ್ದರು.

Please follow and like us:
error