ವಿದ್ಯಾರ್ಥಿಗಳ ಸಾವಿಗೆ ಕಾರಣರಾದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲು ಪ್ರಗತಿಪರ  ವಿದ್ಯಾರ್ಥಿ ಸಂಘಟನೆಗಳಿಂದ  ಒತ್ತಾಯ

ಕೊಪ್ಪಳದ ಬನ್ನಿಕಟ್ಟಿ ಹತ್ತಿರ ಇರುವ ಮೆಟ್ರಿಕ್ ಪೂರ್ವ ಬಿಸಿಎಂ ಹಾಸ್ಟೆಲ್ ನಲ್ಲಿ ಭಾನುವಾರ ಬೆಳಗ್ಗೆ 6:15 ಗಂಟೆಗೆ ಐವರು ವಿದ್ಯಾರ್ಥಿಗಳಾದ1.ದೇವರಾಜ 2.ಗಣೇಶ  ಕುರಿ 3.ಕುಮಾರ 4.ಬಸವರಾಜ ಜಲ್ಲಿ 5.ಮಲ್ಲಿಕಾರ್ಜುನ  ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮೃತಪಟ್ಟಿದ್ದಾರೆ. ಒಬ್ಬ ವಿದ್ಯಾರ್ಥಿ ಬೆರಳಂತರದಲ್ಲಿ  ಪಾರಾಗಿ ಗಾಯಗೊಂಡಿದ್ದಾನೆ.
ಎಐಡಿಎಸ್ ಓ ( ಆಲ್ ಇಂಡಿಯಾ ಡೆಮೊಕ್ರೆಟಿಕ್ ಸ್ಟುಡೆಂಟ್ಸ್ ಆರ್ಗನೈಜೆಶನ್)ಮತ್ತು ಎಸ್ ಎಫ್ ಐ  (ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ ) ಹಾಗೂ ಎ.ಐ.ಎಸ್.ಎಪ್ ಸಂಘಟನೆಯು  ಘಟನೆಯನ್ನು ಕಂಡು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ.
ಮತ್ತು ಈ ಘಟನೆಯ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆಯಾಗಿ ಯಾವುದೇ ವ್ಯಕ್ತಿ ತಪ್ಪಿತಸ್ಥ ಎಂದು ಕಂಡುಬಂದಲ್ಲಿ ಅವರು ಎಷ್ಟೇ ಪ್ರಭಾವಿ ಗಳಿದ್ದರೂ ಸೂಕ್ತ ಕ್ರಮ ಕೈ ಗೊಳ್ಳಬೇಕು. ಸದರಿ ಹಾಸ್ಟೆಲ್ ಒಂದು ಬಾಡಿಗೆ ಹಾಸ್ಟೆಲ್ ಆಗಿದ್ದು ಸ್ವಂತ ಕಟ್ಟಡವನ್ನು ಒದಗಿಸಬೇಕು. ಅಲ್ಲಿಯವರೆಗೂ ಸುರಕ್ಷಿತವಾದ ಹಾಸ್ಟೆಲಿಗೆ ಸ್ಥಳಾಂತರ ಗೊಳಿಸಿ.
ಸರಕಾರವು  ಪ್ರತಿ  ವಿದ್ಯಾರ್ಥಿಗೂ 5 ಲಕ್ಷ ಪರಿಹಾರ ಘೋಷಿಸಿ ತನ್ನ ಜವಾಬ್ದಾರಿ ಯಿಂದ ಕೈ ತೊಳೆದು ಕೊಳ್ಳಲು ಹೊರಟಿದೆ.  ಜಿಲ್ಲೆಯಲ್ಲಿರುವ ಬಹುತೇಕ ಹಾಸ್ಟೆಲ್ ಗಳು ಬಾಡಿಗೆ ಬಿಲ್ಡಿಂಗ್ ಗಳಲ್ಲಿ ನಡೆಯುತ್ತಿವೆ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸರಿಯಾದ ಶೌಚಾಲಯಗಳು ಬಾತ್ ರೂಮ್ಸಗಳು, ಸಭಾಂಗಣ, ಗ್ರಂಥಾಲಯ, ಮುಂತಾದ ಮೂಲಭೂತ ಸೌಲಭ್ಯಗಳು ಇಲ್ಲ. ಜಿಲ್ಲಾದ್ಯಂತ ಎಲ್ಲಾ ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡವನ್ನು ಒದಗಿಸಬೇಕು.
ಕುಟುಂಬಕ್ಕೆ ಸೂಕ್ತ ಪರಿಹಾರ ಧನವನ್ನು ಸರ್ಕಾರದಿಂದ ನೀಡಬೇಕು.  ಹಾಸ್ಟೆಲ್ ನಲ್ಲಿ ಯಾವುದೇ ವಾಚ್ ಮೆನ್ ಇಲ್ಲದೆ ಇರುವುದು ಈ  ಸಂದರ್ಭದಲ್ಲಿ ಕಂಡುಬಂದಿದೆ ಈ ಕೂಡಲೇ ಎಲ್ಲಾ ಹಾಸ್ಟೆಲ್ ಗಳಲ್ಲಿ ವಾಚ್ ಮೆನ್ ಗಳನ್ನು ನೇಮಕ ಮಾಡಬೇಕು. ಮುಂದೆ ಈ ರೀತಿ ಯಾವುದೇ ಘಟನೆ ಆಗದೇ ಇರುವ ಹಾಗೆ ಸರ್ಕಾರ ನಿಗಾವಹಿಸಬೇಕು ಎಂದು ಭಾರತ ವಿಧ್ಯಾರ್ಥಿ ಪೆಡೆರೇಷನ್(SFI) ಸಂಘಟನೆ ಮತ್ತು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (AIDSO) ಹಾಗೂ AISF ಮತ್ತು  KVS  ಸಂಘಟನೆಗಳು
ಈ ಘಟನೆಯನ್ನು ಖಂಡಿಸಿ ಈಗಾಗಲೇ ಹೋರಾಟ ಮಾಡಲಾಗಿದೆ,
ಸಂದರ್ಭದಲ್ಲಿ SFIಜಿಲ್ಲಾ ಅಧ್ಯಕ್ಷ ಅಮರೇಶ ಕಡಗದ ಜಿಲ್ಲಾ ಕಾರ್ಯದರ್ಶಿ ಸುಭಾನ್ ಸೈಯದ್, AIDSO ಜಿಲ್ಲಾ ಸಂಚಾಲಕ ರಮೇಶ ವಂಕಲಕುಂಟ, AIDYO ನ ಮುಂಖಡ ಶರಣು ಪಾಟೀಲ್  AISF ನ ರಾಜ್ಯ ಕಾರ್ಯದರ್ಶಿಗಳಾದ, ರಮೇಶ ನಾಯಕ್, ಸಹ ಕಾರ್ಯದರ್ಶಿಯಾದ ಕೊಟ್ರೇಶ್, KVS ನ  ರಾಜಶೇಖರ್  ಅಂಗಡಿ   ಸೇರಿದಂತೆ ಬಂಡಾಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಪ್ರಗತಿಪರ ಹೋರಾಟಗಾರರಾದ ಬಸವರಾಜ ಶಿಲವಂತರ, ಖಾಸಿಂಸಾಬ ಸರದಾರ, D.H,  ಪೂಜಾರ, K.B,ಗೋನಾಳ,  ಹೋರಾಟಗಾರರಾದ,  ಎಚ್ಎಸ್ ಪಾಟೀಲರು, ವಿ. ಬಿ. ರಡ್ಡೇರ, Dr.K S ಜನಾರ್ಧನ್  ಇನ್ನೂ ಅನೇಕರು ಈ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ
Please follow and like us:
error