ಕನ್ನಡ ವಿಭಾಗದ ವತಿಯಿಂದ ಮನ ಮಿಡಿಯುವ ಪದವಿ ಪೂರ್ವ ವಿದ್ಯಾರ್ಥಿಗಳ ಕವಿಗೋಷ್ಠಿ
ಕೊಪ್ಪಳ: ಅದೊಂದು ಯುವ ಭಾವ ಜೀವಿಗಳ
ಸಂಗಮ. ಕನ್ನಡ ನಾಡು, ನುಡಿ, ಸಂಸ್ಕೃತಿ, ದೇಶಭಕ್ತಿ, ನೆಲ, ಜಲ, ತಂದೆ, ತಾಯಿ, ಗುರು ಇವೆಲ್ಲವುಗಳ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಕಾವ್ಯ ರಚಿಸಿ ಓದಿ ಕಾವ್ಯಾಸಕ್ತರ ಮನಸ್ಸು ಗೆದ್ದ ಸಂದರ್ಭವದು. ಆದದ್ದಿಷ್ಟೆ ಪದವಿ ಪೂರ್ವ ವಿದ್ಯಾರ್ಥಿಗಳ ಕವಿಗೋಷ್ಠಿ. ನಗರದ ಶ್ರಿ ಗವಿಸಿದ್ಧೆÃಶ್ವರ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ
ವತಿಯಿಂದ ಮನ ಮಿಡಿಯುವ ಕವಿಗೋಷ್ಠಿ ಇಂದು ಇಲ್ಲಿನ ಸಭಾ
ಭವನದಲ್ಲಿ ಜರುಗಿತು. ವಿದ್ಯಾರ್ಥಿಗಳಾದ ಗುರುರಾಜ, ಸಂಗೀತಾ,
ಪ್ರೆÃಮ್ಕಿರಣ್, ಭೂಮಿಕಾ, ಪಾಂಡುರಂಗ, ಅಕ್ಷತಾ, ಜಗದೀಶ,
ರಕ್ಷಿತಾ, ಮಲ್ಲಿಕಾರ್ಜುನ, ಲಕ್ಮಿÃ, ನಿಂಗಜ್ಜ, ಪವಿತ್ರಾ, ಮೇಘರಾಜ, ವೀಣಾ,
ಬಸವರಾಜ, ಪಾರ್ವತಿ, ಹುಸೇನಪ್ಪ ಹಾಗು ಐಶ್ವರ್ಯ ಒಟ್ಟು ೧೮
ವಿದ್ಯಾರ್ಥಿಗಳು ಈ ಮೇಲಿನ ಅಂಶವನ್ನು ಇಟ್ಟುಕೊಂಡು ತಮ್ಮ
ಸ್ವರಚಿತ ಕವಿತೆಗಳನ್ನು ಓದಿದದರು. ಅಧ್ಯಕ್ಷತೆ ಪದವಿ
ವಿಭಾಗದ ಕನ್ನಡ ಪ್ರಾಧ್ಯಾಪಕ ಡಾ.ಬಸವರಾಜ ಪೂಜಾರ ವಹಿಸಿ
ಯುವ ಕವಿಗಳಿಗೆ ಸಾಮಾಜಿಕ ಬದ್ದತೆ ಮತ್ತು ಅರಿವು ಇರಬೇಕು.
ದೈನಂದಿನ ದುಖ ದುಮ್ಮಾನಗಳನ್ನು ಮರೆಮಾಚಲು ಕಾವ್ಯ,
ಕತೆ ಇವುಗಳನ್ನು ಬರೆಯುವಲ್ಲಿ ತಮ್ಮನ್ನು
ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾಹಿತ್ಯ ಕೃತಿಗಳ ಓದಿನ
ಗೀಳು ಅಗತ್ಯವೆಂದರು. ಅತಿಥಿಗಳು ಮತ್ತು ತೀರ್ಪುಗಾರರಾಗಿ
ಮತ್ತೊÃರ್ವ ಪದವಿ ವಿಭಾಗದ ಕನ್ನಡ ಪ್ರಾಧ್ಯಾಪಕ ಡಾ.ನಾಗರಾಜ
ದಂಡೋತಿ ಆಗಮಿಸಿ ಕಾವ್ಯ ಕಟ್ಟುವ ಬಗೆ, ಓದುವ ಶೈಲಿ ಮತ್ತು
ಕಾವ್ಯದ ಪ್ರಸ್ತುತತೆ ಕುರಿತು ಮಾತನಾಡಿದರು. ವೇದಿಕೆಯ
ಮೇಲೆ ಕನ್ನಡ ವಿಭಾಗದ ಮುಖ್ಯಸ್ಥೆ ದೀಪಾ ಬೆಟಗೇರಿ, ಇಂಗ್ಲಿÃಷ್
ಉಪನ್ಯಾಸಕ ಸಂಗಮೇಶ ಬೇವಿನಗಿಡ ಇದ್ದರು. ಉತ್ತಮವಾಗಿ ಕಾವ್ಯ
ವಾಚನ ಮಾಡಿದ ಕು.ಸಂಗೀತಾ ಶೆಟ್ಟರ್ ಪ್ರಥಮ ಸ್ಥಾನ, ಪ್ರೆÃಮ್
ಕಿರಣ್ ದ್ವಿÃತಿಯ ಸ್ಥಾನ, ಪವಿತ್ತಾ ಹೊಸಳ್ಳಿ ತೃತೀಯ ಸ್ಥಾನ
ನೀಡಲಾಗಿರುತ್ತದೆ. ಪ್ರಾಸ್ತಾವಿಕ ಮತ್ತು ಸ್ವಾಗತ ಕನ್ನಡ
ಉಪನ್ಯಾಸಕ ಡಾ.ಪ್ರಕಾಶ ಬಳ್ಳಾರಿ, ನಿರೂಪಣೆ ಕನ್ನಡ ಉಪನ್ಯಾಸಕ