ವಿದ್ಯಾರ್ಥಿಗಳು ತಮ್ಮ ಜೀವನವನ್ನು ತಾವೇ ರೂಪಿಸಿ ಕೊಳ್ಳಬೇಕು -ರಾಜಶೇಖರ ಹಿಟ್ನಾಳ

ಸರಕಾರಿ ಮಹಿಳಾ ಕಾಲೇಜಿನಲ್ಲಿ ೨೦೧೯-೨೦ನೇ ಸಾಲಿನ ಅಂತರ  ಮಹಾವಿದ್ಯಾಲಯಗಳ ಚೆಸ್ ಪಂದ್ಯಾವಳಿ

ಮಾನ್ಯರೆ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಂತರ-ಕಾಲೇಜುಗಳ ಚೆಸ್ ಪಂದ್ಯಾವಳಿ ಹಾಗೂ ಆಯ್ಕೆಯು, ಅಗಷ್ಟ ೨೩ ಹಾಗೂ ೨೪ ರಂದು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜರುಗಿತು, ರಾಜ್ಯದ ವಿವಿಧ ಮಹಾವಿದ್ಯಾಲಯಗಳಿಂದ ಸುಮಾರು ೭೦ ಕ್ರೀಡಾ ಪಟುಗಳು ಪಂದ್ಯಾವಳಿ ಹಾಗೂ ಆಯ್ಕೆಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.   ಉದ್ಘಾಟನಾ ಸಮಾರಂಭವನ್ನು  ರಾಜಶೇಖರ ಹಿಟ್ನಾಳ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಕೊಪ್ಪಳ ಇವರು ಉದ್ಘಾಟನೆ ಮಾಡಿದರು ಹಾಗೂ ವಿದ್ಯಾರ್ಥಿಗಳು ತಮ್ಮ ಜೀವನವನ್ನು ತಾವೇ ರೂಪಿಸಿ ಕೊಳ್ಳಬೇಕು ಕ್ರೀಡೆಯಲ್ಲಿ ಸಾದನೆ ಮಾಡಿದ ಕ್ರೀಡಾಪಟುಗಳನ್ನು ಮಾದರಿಯನ್ನಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜು ಅಭಿವೃದ್ದಿ ಸಮೀತಿಯ ಸದಸ್ಯರಾದ   ಹೆಚ್.ಎಸ್.ಪಾಟೀಲ್ ಇವರು ಮಾತನಾಡುತ್ತಾ ವಿದ್ಯಾರ್ಥಿನೀಯರು ಕ್ರೀಡೆಯಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು ಕ್ರೀಡೆ ಕೇವಲ ದೈಹಿಕ ಕ್ಷಮತೆ ಮಾತ್ರವಲ್ಲ ಮಾನಸಿಕ ಸದೃಡತೆಯನ್ನು ನೀಡುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಶುಪಾಲರಾದ ಡಾ. ಗಣಪತಿ ಕೆ ಲಮಾಣಿ ಇವರು ಅಧ್ಯಕ್ಷೀಯ ನುಡಿಗಳಾಗಿ ವಿದ್ಯಾರ್ಥಿನಿಯರು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ರೂಡಿಸಿಕೊಳ್ಳಬೇಕು ಕ್ರೀಡೆಗಳನ್ನು ಆಡುವುದರಿಂದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಯಾಗುತ್ತದೆ ಎಂದರು.
ಡಾ. ಪ್ರದೀಪ್ ಕುಮಾರ್ ಯು, ದೈಹಿಕ ಶಿಕ್ಷಣ ಬೋಧಕರು, ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಅತ್ತಂತ ವೇಗವಾಗಿ ಬೆಳೆಯುತ್ತರುವ ಕಾಲೇಜು ನಮ್ಮ ಕಾಲೇಜು ಕೇವಲ ಐದು ವರ್ಷಗಳಲ್ಲಿಯೇ ೯೩೦ ವಿದ್ಯಾರ್ಥಿಗಳ ಪ್ರವೇಶ ಪಡೆದಿದ್ದಾರೆ. ವಿದ್ಯಾರ್ಥಿನೀಯರು ಕ್ರೀಡಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಕ್ರೀಡಾಕೂಟಗಲ್ಲಿ ಭಾಗವಹಿಸಬೇಕು ಗೆಲುವು ಸೋಲು ಮುಖ್ಯವಲ್ಲ ಎಂದರು.
ಕಾಲೇಜು ಅಭಿವೃದ್ದಿ ಸಮೀತಿಯ ಸದಸ್ಯರಾದ   ಬಿ.ಜಿ ಕರಿಗಾರ ಹಾಗೂ  ಶಿವಮೂರ್ತಿ ಗುತ್ತೂರು, ನಿವೃತ್ತ ಜಿಲ್ಲಾ ವಾರ್ತಾ ಅಧಿಕಾರಿಗಳಾದ  ಬಸವರಾಜ ಆಕಳವಾಡಿ, ಹಾಗೂ ಕಾಲೇಜಿನ ಎಲ್ಲಾ ಬೋಧಕ ಸಿಬ್ಬಂದಿಗಳು ಹಾಗೂ ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿನೀಯರು ಹಾಜರಿದ್ದರು.

Please follow and like us:
error