ವಿಜ್ಞಾನ ವಿದ್ಯಾರ್ಥಿಗಳಿಗೆ ಅಂತರ ವಿಶ್ವವಿದ್ಯಾಲಯ ಮಟ್ಟದ ಕನ್ನಡ ಉಪನ್ಯಾಸ ಸ್ಪರ್ಧೆ

Koppal News : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಇವರ ವತಿಯಿಂದ ಪದವಿ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಅಂತರ ವಿಶ್ವವಿದ್ಯಾಲಯ ಮಟ್ಟದ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಸಂಘಟನೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೆರವು ಹಾಗೂ ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆಯು ಸೆಪ್ಟೆಂಬರ್ ತಿಂಗಳಲ್ಲಿ ಮತ್ತು ರಾಜ್ಯ ಮಟ್ಟದ ಸ್ಪರ್ಧೆಯು ಅಕ್ಟೋಬರ್ ತಿಂಗಳಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಆಯೋಜಿಸಲಾಗುವುದು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಗಿರೀಶ ಕಡ್ಲೇವಾಡ ಅವರು ತಿಳಿಸಿದ್ದಾರೆ.
ಸ್ಪರ್ಧೆ ನಡೆಯುವ ಸ್ಥಳಗಳು : ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆ ಜರುಗುವ ಸ್ಥಳಗಳ ವಿವರ ಇಂತಿದೆ. ವಿಶ್ವವಿದ್ಯಾಲಯ ಹೆಸರು “ಕುವೆಂಪು ವಿಶ್ವವಿದ್ಯಾಲಯ” ಸ್ಪರ್ಧೆ ನಡೆಯುವ ಸ್ಥಳ ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ ಮೊ. 9901798999. “ಕರ್ನಾಟಕ ವಿಶ್ವವಿದ್ಯಾಲಯ” ಕೆ.ಎಲ್.ಇ ಸೊಸೈಟಿಯವರ ಕಾಡಸಿದ್ದೇಶ್ವರ ಕಲಾ ಕಾಲೇಜು ಮತ್ತು ಎಚ್.ಎಸ್.ಕೆ ವಿಜ್ಞಾನ ಇನ್ಸ್‍ಟಿಟ್ಯೂಟ್, ವಿದ್ಯಾನಗರ, ಹುಬ್ಬಳ್ಳಿ ಮೊ. 9916312171. “ಬೆಂಗಳೂರು ವಿಶ್ವವಿದ್ಯಾಲಯ” ವಿಜಯಾ ಕಾಲೇಜು, ಜಯನಗರ ಬೆಂಗಳೂರು ಮೊ. 7022176296, 9449637363. “ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ” ಎಂ.ಇ.ಎಸ್. ಪದವಿ ಕಾಲೇಜು ಮೂಡಲಗಿ ಗೋಕಾಕ್ ತಾಲೂಕು, ಬೆಳಗಾವಿ ಜಿಲ್ಲೆ ಮೊ. 8722725276, “ತುಮಕೂರು ವಿಶ್ವವಿದ್ಯಾಲಯ” ತುಮಕೂರು ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜು, ತುಕೂರು ಮೊ. 8762576187, 9844414939. “ಗುಲ್ಬರ್ಗ ವಿಶ್ವವಿದ್ಯಾಲಯ” ರೇಶ್ಮಿ ವಿಜ್ಞಾನ ಮಹಾವಿದ್ಯಾಲಯ ಸರಸ್ವತಿಪುರಂ ಕೂಸನೂರು ರಸ್ತೆ, ಕಲಬುರ್ಗಿ ಮೊ. 9880366128. “ಮೈಸೂರು ವಿಶ್ವವಿದ್ಯಾಲಯ” ಆದಿ ಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪ್ರಥಮ ದರ್ಜೆ ಕಾಲೇಜು, ನಾಗಮಂಗಲ ತಾಲೂಕ, ಮಂಡ್ಯ ಜಿಲ್ಲೆ, ಮೊ. 9844753108, 9901852150. “ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ” ಜೈವಿಕ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ಮೊ. 9535990125. “ಕೃಷ್ಣದೇವರಾಯ ವಿಶ್ವವಿದ್ಯಾಲಯ” ಡಾ. ಪಿ.ಆರ್.ಕೆ ಪ್ರಥಮ ದರ್ಜೆ ಕಾಲೇಜು, ಬಳ್ಳಾರಿ ಮೊ. 9686881377, 9480232676. “ಮಂಗಳೂರು ವಿಶ್ವವಿದ್ಯಾಲಯ” ಫೀಲ್ಡ್ ಮಾರ್ಷಲ್ ಕೆ.ಎಮ್. ಕರಿಯಪ್ಪ ಕಾಲೇಜು, ಮಡಿಕೇರಿ, ಕೊಡಗು ಜಿಲ್ಲೆ, ಮೊ. 9448903732, 9448588352. ವಿಶ್ವವಿದ್ಯಾಲಯ ಹೆಸರು “ದಾವಣಗೇರೆ ವಿಶ್ವವಿದ್ಯಾಲಯ” ಸ್ಪರ್ಧೆ ನಡೆಯುವ ಸ್ಥಳ ಜಿ.ಎಂ. ಅಕಾಡೆಮಿ ವಿಜ್ಞಾನ ಪದವಿ ಕಾಲೇಜು (ಜಿ.ಎಂ.ಐ.ಟಿ ಆವರಣ), ಹರಿಹರ ರಸ್ತೆ, ದಾವಣಗೇರೆ ಮೊ. 9901769755, 9880531823.
ಧ್ಯೆಯೋದ್ದೇಶಗಳು : ವಿಜ್ಞಾನ, ವೈಜ್ಞಾನಿಕ ಮನೋಧರ್ಮ, ಔಪಚಾರಿಕ ಹಾಗೂ ಅನೌಪಚಾರಿಕ ವಿಜ್ಞಾನ ಶಿಕ್ಷಣ, ಇವುಗಳನ್ನು ಜನರಲ್ಲಿ, ಅದರಲ್ಲಿಯೂ ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದು. ಮುಖ್ಯವಾಗಿ ಕನ್ನಡದಲ್ಲಿ ಉಪನ್ಯಾಸ, ವಿಚಾರಸಂಕೀರಣ, ಸಾರ್ವಜನಿಕ ವಿಚಾರಗೋಷ್ಠಿ, ಶೈಕ್ಷಣಿಕ ಪ್ರವಾಸ, ವಸ್ತುಪ್ರದರ್ಶನಗಳನ್ನು ಏರ್ಪಡಿಸುವುದು ಮತ್ತು ವಿಜ್ಞಾನ ಪುಸ್ತಕಗಳು ಹಾಗೂ ನಿಯತಕಾಲಿಕಗಳನ್ನು ಪ್ರಕಟಿಸಿ ವಿತರಣೆ ಮಾಡುವುದರ ಮೂಲಕ ವಿಜ್ಞಾನವನ್ನು ಜನಪ್ರಿಯಗೊಳಿಸುವುದು. ವಿಜ್ಞಾನ ಸಂಘ ಸಂಸ್ಥೆಗಳು ರೂಪುಗೊಂಡು ಅಭಿವೃದ್ಧಿಯಾಗಲು ಪ್ರೋತ್ಸಾಹ ನೀಡುವುದು ಹಾಗೂ ವಿಜ್ಞಾನ ಕೇಂದ್ರಗಳ ಸ್ಥಾಪನೆ ಮತ್ತು ನಿರ್ವಹಣೆ. ವಿಜ್ಞಾನ ಬರಹಗಾರರು, ವಿಜ್ಞಾನಿಗಳು, ವಿಜ್ಞಾನ ಶಿಕ್ಷಕರು, ಕೈಗಾರಿಕೋದ್ಯಮಿಗಳು, ಪ್ರಕಾಶಕರು ಮತ್ತು ವಿಜ್ಞಾನವನ್ನು ಜನಪ್ರಿಯಗೊಳಿಸುವುದರಲ್ಲಿ ಆಸಕ್ತರಾಗಿರುವವರ ನಡೆವೆ ಪರಸ್ಪರ ಸಂಪರ್ಕ ಬೆಳೆಯಲು ಪ್ರೋತ್ಸಾಹ ನೀಡುವುದು.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ದೂ.ಸಂ. 080-26718939, ಮೊ. 9483549159 ಹಾಗೂ ದೇವಿಕಾ ಕೀರ್ತಿ ಮೊ. 9449530245, ರಾಜಶೇಖರ ಗೌಡ ಪಾಟೀಲ ಮೊ. 9008442557 ಕ್ಕೆ ಸಂಪರ್ಕಿಸಬಹುದು ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ಗಿರೀಶ ಕಡ್ಲೇವಾಡ ತಿಳಿಸಿದ್ದಾರೆ.