ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ


ಕೊಪ್ಪಳ : ನವ್ಹಂಬರ ೨೭ ರಂದು ಯಲಬುರ್ಗಾದಲ್ಲಿ ನಡೆದ ಶ್ರೀ ಸಿದ್ದರಾಮೇಶ್ವರ ಪ್ರೌಢ ಶಾಲೆಯಲ್ಲಿ ಜರುಗಿದ ಯಲಬುರ್ಗಾ ತಾಲೂಕ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸರಕಾರಿ ಪ್ರೌಢ ಶಾಲೆ ಭಾನಾಪೂರ ಶಾಲೆಯ ವಿದ್ಯಾರ್ಥಿಗಳಾದ ಕುಮಾರ ನಿಂಗಪ್ಪ ಉಳ್ಳಾಗಡ್ಡಿ, ಭೀಮಪ್ಪ ಈ ವಿದ್ಯಾರ್ಥಿಗಳು ಶ್ರೀಮತಿ ಲಕ್ಷ್ಮೀ ತಮ್ಮನಗೌಡರ ವಿಜ್ಞಾನ ಶಿಕ್ಷಕಿಯರ ಮಾರ್ಗದರ್ಶನದಲ್ಲಿ ’ರಸ್ತೆ ಅಪಘಾತ ತಡೆಯಲು ಒಂದು ಸುಲಭ ಮಾರ್ಗ’ ಮಾದರಿಯನ್ನು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ತಾಲೂಕ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಕೊಪ್ಪಳ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಪ್ರಭಾರಿ ಮುಖ್ಯೋಪಾಧ್ಯಾಯರಾದ ಎಸ್.ಬಿ.ಕುರಿ ಹಾಗೂ ಆನಂದಕುಮಾರ ಕನ್ಯಾರಿ, ಕಾಶಿವಿಶ್ವನಾಥ, ಸಂಗಪ್ಪ ಗಾಣಿಗೇರ, ಶ್ರೀಮತಿ ವೀಣಾ ಕುಲಕರ್ಣಿ ಇತರೆ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

Please follow and like us:
error