ವಿಜಯೋತ್ಸವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಲ್ಲು ತೂರಾಟ

ಕೊಪ್ಪಳ: ಯಡಿಯೂರಪ್ಪ ರಾಜೀನಾಮೆ ಹಿನ್ನೆಲೆ. ಜೆಡಿಎಸ್- ಕಾಂಗ್ರೆಸ್ ವಿಜಯೋತ್ಸವದ ವೇಳೆ ಬಿಜೆಪಿ ಕಾರ್ಯಕರ್ತರು ಗಲಾಟ ಮಾಡಿದ ಘಟನೆ ಗಂಗಾವತಿಯಲ್ಲಿ ನಡೆದಿದೆ. ಬೈಕ್ ರ್ಯಾಲಿ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಕಲ್ಲು ತೂರಾಟ ಮಾಡಿದ್ದಾರೆ.

ಗಲಾಟೆ ಯಲ್ಲಿ ಯುಸೂಫ್, ರಾಜವಲಿ ತಲೆಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಂಗಡಿಗಳು ಬಂದ್ ಮಾಡಿಸುತ್ತಿರುವ ಎಸ್ಪಿ ಡಾ.ಅನುಪಶೆಟ್ಟಿಯಿಂದ ಅಂಗಡಿ ಮುಂಗಟ್ಟುಗಳು ಬಲವಂತವಾಗಿ ಬಂದಾಗಿವೆ. ಲಾಠಿ ಹಿಡಿದು ರಸ್ತೆಗಿಳಿದ ಎಸ್ಪಿ ಅನುಪ್ ಶೆಟ್ಟಿ ಜನರನ್ನು ಚದುರಿಸುತ್ತಿದ್ದಾರೆ.

ಗಂಗಾವತಿಯಲ್ಲಿ ಈಗ ಬೂದಿ ಮುಚ್ಚಿದ ಕೆಂಡದಂತಿರುವ ಘಟನೆ.ಗುಂಪು ಗುಂಪಾಗಿ ನಿಂತವರನ್ನು ಚದುರಿಸುತ್ತಿರುವ ಪೊಲೀಸರು. ಗಲಾಟೆ ಹಿನ್ನೆಲೆ ಗಂಗಾವತಿಯಲ್ಲಿ ವಿದ್ಯುತ್ ಸ್ಥಗಿತವಾಗಿದೆ‌. ಚುನಾವಣೆಯ ನಂತರ ಗಂಗಾವತಿಯಲ್ಲಿ ಉದ್ವಿಘ್ನ ವಾತಾವರಣ ಸೃಷ್ಠಿಯಾಗಿದೆ‌

Please follow and like us:
error