ವಿಕೃ ಗೋಕಾಕ ಸಮ್ಮೇಳನಕ್ಕೆ ಶಾಸಕ ರಾಘವೆಂದ್ರ ಕಾರ್ಯಾಧ್ಯಕ್ಷ

ಕೊಪ್ಪಳ, ಜ. : ಸುರ್ವೆ ಕಲ್ಚರಲ್ ಅಕಾಡೆಮಿಯ 26ನೇ ವಾರ್ಷಿಕೋತ್ಸವ ಅಂಗವಾಗಿ, ಡಾ. ವಿ. ಕೃ. ಗೋಕಾಕ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಹಾಗೂ ರಾಷ್ಟ್ರೀಯ ಚಿಣ್ಣರ ಹಬ್ಬಕ್ಕೆ ಕರ್ನಾಟಕ ಸರಕಾರದ ಸಂಸದೀಯ ಕಾರ್ಯದರ್ಶಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಸಮ್ಮೇಳನ ಸಮಿತಿ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಸಾಪ ಕೇಂದ್ರ ಸಮಿತಿ ಸದಸ್ಯ ಡಾ|| ಶೇಖರಗೌಡ ಮಾಲಿಪಾಟೀಲ ಸಮ್ಮೇಳನಾಧ್ಯಕ್ಷರಾಗಿರುವ ಈ ನಾಲ್ಕು ದಿನಗಳ ಸಮ್ಮೇಳನಕ್ಕೆ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಗೌರವ ಅಧ್ಯಕ್ಷರಾಗಿ ಮತ್ತು ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ ಅವರು ಸ್ವಾಗತ ಸಮಿತಿ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಸಮ್ಮೇಳನದ ಸಂಚಾಲಕರಾದ ರಮೇಶ ಸುರ್ವೆ ಮತ್ತು ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ನಗರದ ಸಾಹಿತ್ಯ ಭವನದಲ್ಲಿ ಜನೆವರಿ 27, 28, 29, 30 ನಾಲ್ಕು ದಿನ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಕವಿಗೋಷ್ಠಿ ಸಂಯೋಜಕರಾಗಿ ಕವಿ ಬಿ. ಎನ್. ಹೊರಪೇಟಿ, ನೃತ್ಯ ಕಾರ್ಯಕ್ರಮ ಸಂಯೋಜಕರಾಗಿ ಬಸವರಾಜ ಮಾಲಗಿತ್ತಿ, ಕ್ರೀಡಾ ಸಂಯೋಜಕರಾಗಿ ರಾಘವೇಂದ್ರ ಅರಕೇರಿ, ಆತಿಥ್ಯ ಸಂಯೋಜಕರಾಗಿ ರುದ್ರಪ್ಪ ಭಂಡಾರಿ, ಗಾಯನ ಸಂಯೋಜಕರಾಗಿ ವಿಜಯಕುಮಾರ ಜಿ. ಗೊಂಡಬಾಳ, ಸಾಹಿತ್ಯ ಗೋಷ್ಠಿಗಳ ಸಂಯೋಜಕರಾಗಿ ಶ್ರೀನಿವಾಸ ಪಂಡಿತ್ ಮತ್ತು ಕಲಾ ಪ್ರದರ್ಶನ ಸಂಯೋಜಕರಾಗಿ ಧರ್ಮಣ್ಣ ಹಟ್ಟಿ ಆಯ್ಕೆಯಾಗಿದ್ದಾರೆ.

Please follow and like us:
error