ವಿಕಲಚೇತನರ ಪುನರವಸತೀಕರಣ ಎಂಬ ವಿಷಯ ಮೇಲೆ ಪ್ರಾಯೋಗಿಕ ಕಾರ್ಯಗಾರ

Koppal News

ಕೊಪ್ಪಳ ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ವಿಕಲಚೇತನರ ಪುನರವಸತೀಕರಣ ಎಂಬ ವಿಷಯದ ಮೇಲೆ ಪ್ರಾಯೋಗಿಕ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಸಮಾಜ ಕಾರ್ಯ ವಿಭಾಗದಿಂದ ಮತ್ತು ಕೊಪ್ಪಳ ಸ್ವಯಂ ಸೇವಾ ಸಂಸ್ಥೆಯಾದ ಸಮೂಹ ಸಾಮಾರ್ಥ್ಯ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿತ್ತು.
ಪ್ರಸ್ತಾವಿಕವಾಗಿ ಮಾತನಾಡಿ ಪ್ರಾಯೋಗಿಕ ಕಾರ್ಯಗಾರಗಳು ವಿದ್ಯಾರ್ಥಿಗಳಿಗೆ ಪಠ್ಯದ ವಿಷಯಗಳು ಬೋಧನೆಗೆ ಮಾತ್ರ ಸೀಮಿತವಾಗಿರದೇ ಪ್ರಾಯೋಗಿಕ ವಿಷಯಗಳನ್ನ ಮನವರಿಕೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಡುತ್ತ ಇಂತಹ ಕಾರ್ಯಕ್ರಮಗಳು ಪಠ್ಯ ವಿಷಯಕ್ಕೆ ಪೂರವಾಗಿ ಹಮ್ಮಿಕೊಂಡಿರುವದರ ಮಹತ್ವದ ಕುರಿತು ಸಮಾಜ ಕಾರ್ಯ ಪ್ರಾಧ್ಯಾಪಕರಾದ ಶಿವನಗೌಡ ಪಾಟೀಲ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಪ್ರಭಾಕರ, ಸಂಪನ್ಮೂಲ ವ್ಯಕ್ತಿಗಳು, ಸಮೂಹ ಸಂಸ್ಥೆ, ಕೊಪ್ಪಳ ಇವರು ಮಾತನಾಡಿ ಸಮಾಜದಿಂದ ದೂರಲ್ಪಟ್ಟ, ದೌರ್ಜನ್ಯಕ್ಕೆ ಒಳಗಾದ ವಿಕಲಚೇತನ ಮತ್ತು ಹಲವಾರು ನ್ಯೂನ್ಯತೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಪುನರವಸತಿಯು ಅವಶ್ಯವಾಗಿದ್ದು, ಇದು ಬರೀ ಸಲಕರಣೆಗಳನ್ನು ಮಾತ್ರ ವಿತರಿಸುವದಲ್ಲದೇ ಮಾನಸಿಕ ಸಾಮಾರ್ಥ್ಯವನ್ನ ಉತ್ತೇಜನಗೊಳಿಸುವ ಕಾರ್ಯPವಾಗಿದೆ. ಇದರಲ್ಲಿ ಸಮೂಹ ಸಾಮಾರ್ಥ್ಯ ಸಂಸ್ಥೆಯು ವಿಶೇಷವಾಗಿ ಎಲ್ಲ ತರಹದ ವಿಕಲಚೇತನ ವ್ಯಕ್ತಿಗಳಿಗೆ ಪುನರವಸತಿಯನ್ನ ಕಳೆದ ಎರಡುವರೆ ದಶಕಗಳಿಂದ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ೧೯ ವರ್ಷದ ಯುವಕ ಸ್ವಯಂಪ್ರೇರಣೆಯಿಂದ ಸಮಾಜ ಸುಧಾರಣಾ ಉದ್ದೇಶದಿಂದ ತರಬೇತಿಗಾಗಿ ಭಾರತಕ್ಕೆ ಬಂದಿರುವ ಜರ್ಮನ್ ಪ್ರಜೆ ಮ್ಯಾಕ್ಸ್ ಮಾತನಾಡಿ ಜರ್ಮನ್ ದೇಶದ ಶಿಕ್ಷಣ ವ್ಯವಸ್ಥೆ ಮತ್ತು ಭಾರತ ದೇಶದ ಶಿಕ್ಷಣ ವ್ಯವಸ್ಥೆ ಹೋಲಿಕೆ ಮಾಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಮನೋಹರ ಎಸ್.ದಾದ್ಮಿಯವರು ಮಾತನಾಡುತ್ತ ಕಾರ್ಯಕ್ರಮದ ಉಪಯುಕ್ತತೆ ಬಗ್ಗೆ ಮತ್ತು ವಿದ್ಯಾರ್ಥಿಗಳಿಗೆ ಇದರ ಅವಶ್ಯಕತೆಗಳ ಬಗ್ಗೆ ಸಂಸ್ಥೆ ಮಾಡುತ್ತಿರುವ ಕಾರ್ಯಗಳ ಬಗ್ಗೆ ಅಭಿನಂದನೆಗಳನ್ನು ಸಲ್ಲಿಸುತ್ತ ವಿಕಲಚೇತನರು ಸಾಮಾನ್ಯ ವ್ಯಕ್ತಿಗಳಂತೆ ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಲು ಇಂತಹ ಸಂಸ್ಥೆಯ ಕಾರ್ಯಕಗಳು ಅವಶ್ಯವಾಗಿದ್ದು, ಅವುಗಳನ್ನು ಗುರುತಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಕಾರ್ಯಕ್ರಮದಲ್ಲಿ ಸಮೂಹ ಸಾಮಾರ್ಥ್ಯ ಸಂಸ್ಥೆಯ ಸಿಬ್ಬಂದಿಗಳಾದ ಶ್ರೀ ಮಂಜುನಾಥ,
ಶ್ರೀಮತಿ ಕವಿತಾ ಮತ್ತು ಶ್ರೀ ಲಿಂಗಪ್ಪ ಹಾಗೂ ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ. ಬಸವರಾಜ ಪೂಜಾರ, ಡಾ. ದಯಾನಂದ ಸಾಳುಂಕೆ, ರಾಜು ಹೊಸಮನಿ ಹಾಗೂ ಇನ್ನಿತರರು ಹಾಜರಿದ್ದರು.
ಕಾರ್ಯಕ್ರಮದ ಪೂರ್ವದಲ್ಲಿ ಪ್ರಾರ್ಥನೆ ಕು. ಉಮಾ, ಸ್ವಾಗತ ಕು. ಪ್ರತಿಭಾ ಹಿರೇಮಠ ನಿರ್ವಹಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರಾಧ್ಯಾಪಕ ಅರುಣ ಎ.ಜಿ ಹಾಗೂ ವಂದನಾರ್ಪಣೆ ವಿದ್ಯಾರ್ಥಿ ಬಸವರಾಜ ನಿರ್ವಜಹಿಸಿದರು.

Please follow and like us:
error