ವಿಕಲಚೇತನರ ಒಕ್ಕೂಟದಿಂದ ಸದಸ್ಯತ್ವ ಅಭಿಯಾನ ಚಾಲನೆ


ದಿನಾಂಕ :   ಕೊಪ್ಪಳ ತಾಲೂಕಿನ ವಿಕಲಚೇತನರ ಸಮುದಾಯ ಭವನದಲ್ಲಿ ಕರ್ನಾಟಕ ವಿಕಲಚೇತನರ ರಾಜ್ಯ ಒಕ್ಕೂಟ ಕೊಪ್ಪಳ ಜಿಲ್ಲಾ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು ಸುಮಾರು ೧೦ ವರ್ಷಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ವಿಕಲಚೇತನರ ಒಕ್ಕೂಟದ ವಿಕಲಚೇತನರ ಅಭಿವೃದ್ದಿಗೆ ಶ್ರಮೀಸುತ್ತಾ ಬಂದಿದೆ ಹಾಗೂ ಹಲವಾರು ಸಮಸ್ಯೆಗಳನ್ನು ಪರಿಹಾರ ಹುಡುಕುತ್ತಾ ಸಹಕರಿಸಿದೆ ಹಾಗೂ ಸರ್ಕಾರದ ಸೇವಾ ಸೌಲಭ್ಯಗಳನ್ನು ವದಗಿಸುವ ಕಾರ್ಯದಲ್ಲಿ ಸಕ್ರೀಯವಾಗಿ ಶ್ರಮೀಸುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಒಕ್ಕೂಟದ ಬಲವರ್ಧನೆ & ಸಂಘಟನೆ ಒಗ್ಗೂಡುವಿಕೆ ಅವಶ್ಯಕತೆ ಇದ್ದು ಆದ್ದರಿಂದ ನಗರ, ಗ್ರಾಮೀಣ ತಾಲೂಕ, ಜಿಲ್ಲಾ ಮಟ್ಟದಲ್ಲಿ ಇರುವ ಎಲ್ಲಾ ರೀತಯ ವಿಕಲಚೇತನರು ಸದಸ್ಯತ್ವವನ್ನು ಪಡೆದು ಒಕ್ಕೂಟದ ಅಭಿವೃದ್ದಿಗೆ ಸಹಕರಿಸಬೇಕಾಗಿದೆ.
ಈ ಸಂದರ್ಬದಲ್ಲಿ ಕರ್ನಾಟಕ ವಿಕಲಚೇತನರ ರಾಜ್ಯ ಒಕ್ಕೂಟ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಹೊಸಕೆರಾ, ಗೌರವ ಅಧ್ಯಕ್ಷರಾದ ಮಲ್ಲಿಕಾರ್ಜುನ ಪೂಜಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ವಿರೇಶ ಹಾಲಗುಂದಿ, ಖಜಾಂಚಿಯಾದ ಶಿದ್ದಲಿಂಗಯ್ಯ ಗೊರ್ಲೆಕೊಪ್ಪ, ಪದಾಧಿಕಾರಿಗಳಾದ ಆದಪ್ಪ ಮಾಲಿಪಾಟೀಲ, ಶರಣಪ್ಪ ವಡ್ಡರ, ವೆಂಕಟೇಶ ಇಂಗಳಗಿ, ಮಂಜುಳಾ ಬೆಟಗೇರಿ, ಗಂಗಮ್ಮ ಮೈನಹಳ್ಳಿ, ಮಂಜುಳಾ ಭಾಗ್ಯನಗರ, ಶರಣಪ್ಪ ಬುದಗುಂಪಾ, ವಿರೇಶ ಬುದಗುಂಪಾ, ಶಿದ್ದಲಿಂಗಮ್ಮ ಹಾಲಗುಂದಿ, ಅನ್ವರ ಪಟೇಲ್, ತಿಮ್ಮಣ್ಣ ಮುಂಡರಗಿ ತಾಲೂಕ ಅಧ್ಯಕ್ಷರಾದ ಅಂದಪ್ಪ ಎಸ್.ಎನ್, ಜಿಲ್ಲಾ ಒಕ್ಕೂಟದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

Please follow and like us:
error