ವಾಸವಿ ಶಾಲೆ ವಾರ್ಷಿಕೋತ್ಸವ


​ಕೊಪ್ಪಳ ನಗರದ ನೌಕರ ಭವನದ ಹತ್ತಿರ  ನೂತನ ಕಟ್ಟಡ ಆವರಣದಲ್ಲಿ ಜರುಗಿದ, ಶಾಲೆಯ 17ನೇ ವಾರ್ಷಿಕೋತ್ಸವದ ನಿಮಿತ್ಯ ಹಮ್ಮಿಕೊಂಡಿದ್ದ “ನಮ್ ಶಾಲಾ ಹಬ್ಬ” ವರ್ಣ ರಂಜಿತ ಅದ್ಧೂರಿ ಕಾರ್ಯಕ್ರಮವನ್ನು ಜಿ.ಪಂ ಸದಸ್ಯರಾದ ಕೆ. ರಾಜಶೇಖರ ಹಿಟ್ನಾಳ ರವರು ಉದ್ಘಾಟಿಸಿ ಮಾತನಾಡಿದ ಅವರು ವಾಸವಿ ಶಾಲೆಯ ಸುಸಜ್ಜಿತ ನೂತನ ಕಟ್ಟಡವು ಕಣ್ಮನ ಸೆಳೆಯುವಂತೆ ನಿರ್ಮಾಣಗೊಂಡು ಈ ಶಾಲೆಯು ಮಕ್ಕಳ ಕಲಿಕೆಗೆ ಬೇಕಾದ ಮೂಲಭೂತ ಸೌಕರ್ಯ ವಂದಿರುದರ ಜೋತೆಗೆ ಇಲ್ಲಿ ಮಕ್ಕಳ ಶೈಕ್ಷಣಿಕ, ಸಾಂಸ್ಕøತಿಕ, ಸಾಮಾಜಿಕ ಹಾಗೂ ಮೌಲ್ಯಗಳ ಬೇಳವಣಿಗೆಗೆ ಒತ್ತು ನೀಡುತ್ತಿರುವುದು ಈ ಶಾಲೆಯ ಹೆಗ್ಗಳಿಕೆ ಯಾಗಿರುವುದು, ನಮಗೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿ.ಜೆ.ಪಿ ರಾಷ್ಟ್ರಿಯ ಪರಿಷತ್ ಸದಸ್ಯರಾದ ಸಿ.ವಿ ಚಂದ್ರಶೇಖರ , ಕಾಂಗ್ರೇಸ್ ಮುಖಂಡರಾದ ಕೆ.ಎಮ್ ಸೈಯದ್ ರವರು  ಕಾಂಗ್ರೇಸ್ ಮುಖಂಡರು ಹಾಗೂ ಉಧ್ಯಮಿಗಳಾದ ಕುಮಾರ್ ಮಜ್ಜಿಗಿ ಹಾಗೂ ಸುರೇಶ ಮಜ್ಜಿಗಿ, ಹಿರಿಯ ಸಾಹಿತಿಗಳಾದ ಮಾಹಾಂತೇಶ ಮಲ್ಲನಗೌಡ, ಹಾಗೂ ಜಿ.ಎಸ್ ಗೋನಾಳ್, ಎಸ್.ಬಿ ಕುರಿ, ರುದ್ರಸ್ವಾಮಿ, ವೆಂಕನಗೌಡ ಹೊರತಟ್ನಾಳ, ಪ್ರಾಣೇಶ ಮಾದಿನೂರು, ಮಲ್ಲಾರಭಟ್ಟ ಜೋಶಿ, ಶಕುಂತಲಾ ಹುಡೇಜಾಲಿ, ಮಂಜುನಾಥ ಚಿತ್ರಗಾರ, ವೆಂಕಟೇಶ ನಾಯಕ, ರಂಗನಾಥ ಅಕ್ಕಸಾಲಿ ಭಾಗವಹಿಸಿದ್ದರು.

 ಕಾರ್ಯಕ್ರಮ ಉಸ್ತುವಾರಿಯನ್ನು ಶಾಲಾ ಮುಖ್ಯಸ್ಥರಾದ ಫಕೀರಪ್ಪ ಎಮ್ಮಿಯರ್ ವಹಿಸಿಕೊಂಡಿದ್ದರು, ಕಾರ್ಯಕ್ರಮದಲ್ಲಿ ಗಣ್ಯರನ್ನು ವೇದಿಕೆಗೆ ಶಿಕ್ಷಕಿ ತನ್‍ಜೀಮ್ ಝಯಾ ಆಹ್ವಾನಿಸಿದರು, ಶಿಕ್ಷಕಿ ಉಮಾ ಆರ್ ಸಂಗಟಿ ಸ್ವಾಗತಿಸಿದರು, ವನಿತಾ ವಾಲ್ಮೀಕಿ ವಂದಿಸಿದರು. ನಮ್ ಶಾಲಾ ಹಬ್ಬ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಕುಮಾರಿ ಅಶ್ವಿನಿ ಹಾಗೂ ಸಂಜನಾ ನಿರೂಪಿಸಿದರು.

Leave a Reply