ವಾಸವಿ ಶಾಲೆಯಲ್ಲಿ ದ್ವಜಾರೋಹಣ


ಕೊಪ್ಪಳ : ಅ.15, ಸ್ವಾತಂತ್ರ್ಯೋತ್ಸವ ನಿಮಿತ್ಯ ನಗರದ ವಾಸವಿ ಶಾಲೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಸ್ವತಂತ್ರ ಹೋರಾಟಗಾರರ ಛದ್ಮವೇಷಧಾರಿಗಳಾದ ಮಕ್ಕಳಿಂದಲೇ ಧ್ವಜಾರೋಹಣವನ್ನು ನೆರವೇರಿಸಲಾಯಿತು.
ನಂತರ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ, ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಕೀರಪ್ಪ ಎಮ್ಮಿಯಾರ ವಹಿಸಿ ಮಾತನಾಡಿ ಮಕ್ಕಳ ಹವ್ಯಾಸಗಳನ್ನು ಬದಾಲಾಯಿಸಿದರೆ ಅವರ ಹಣೆ ಬರಹವನ್ನು ಬದಲಾಯಿಸಬಹುದು ಎಂಬ ಮಾತಿನಂತೆ ಸ್ವತಂತ್ರ್ಯೋತ್ಸವಕ್ಕಾಗಿ ಹೋರಾಡಿದ ಮಹಾನ್ ನಾಯಕರನ್ನು ಸ್ಮರಿಸಿಕೊಳ್ಳುವುದು ಒಂದು ಹವ್ಯಾಸವಾಗಬೇಕು ಇದನ್ನು ಮಕ್ಕಳಲ್ಲಿ ರೂಢಿಸಬೇಕು ಹಾಗೇ ಅವರೂ ಕೂಡಾ ಮಾಹನ್ ನಾಯಕರಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲಕರು, ಮಕ್ಕಳು, ಶಿಕ್ಷಕರು, ನಗರದ ಹಿರಿಯರು ಭಾಗವಹಿಸಿದ್ದರು. ಕಾರ್ಯಕ್ರಮದ ಶಾಲಾ ಆಡಳಿತ ಅಧಿಕಾರಿ ತಂಜೀಮ್ ಜೀಯಾ ನಿರೂಪಿಸಿದರು, ಶಿಕ್ಷಕಿ ಹೇಮಾ ಸ್ವಾಗತಿಸಿದರು, ಶಿಕ್ಷಕಿಯರಾಧ ವನೀತಾ, ಅಮೃತ ಪ್ರಶಸ್ತಿ ಪತ್ರವನ್ನು ವಿತರಿಸಿದರು. ಶಿಕ್ಷಕರಾದ ಆನಂದ ಡಿ.ಯು, ಅಮೃತ, ನಮೀರ್, ದ್ಯಾಮಣ್ಣ, ಪ್ರಮೀಳಾ, ಶ್ರೀದೇವಿ, ಸಾವಿತ್ರಿ ಇತರರು ಭಾಗವಹಿಸಿದ್ದರು

Please follow and like us: