ವಾಲ್ಮೀಕಿ ಸಮುದಾಯ ಅವಹೇಳನ : ಆರೋಪಿ ಅರೆಸ್ಟ್

Koppal ಅವಾಚ್ಯ ಪದಗಳಿಂದ ಬೈದು ವಾಲ್ಮೀಕಿ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ ಕುರಿಗಾಯಿ ಕೊನೆಗೂ ಅಂದರ್ ಆಗಿದ್ದಾನೆ. ಕುರಿ ಕಾಯುವ ವೇಳೆ ಸೆಲ್ಫಿ ವಿಡಿಯೋದಲ್ಲಿ ಅವಾಚ್ಯ ಪದಗಳಿಂದ ಬೈದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿತ್ತು, ಇದರಿಂದ ಗರಂ ಆದ ವಾಲ್ಮೀಕಿ ಸಮುದಾಯ ಆರೋಪಿಯನ್ನ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ರೋಡಿಗಿಳಿದು ಪ್ರತಿಭಟನೆ ನಡೆಸಿದ್ರು. ಕೊಪ್ಪಳ ಪೊಲೀಸರು ಸ್ವಯಂ ಪ್ರರಣೆ ದೂರು ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ರು, ಬೆಳಗಾವಿ ಜಿಲ್ಲೆಯ ಗ್ರಾಮಹೊಂದರಲ್ಲಿ ಆರೋಪಿ ವಿಠಲ್ ಸಹದೇವ ಗಾವಡೆಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ವೈರಲ್ ವಿಡಿಯೋದ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿತ್ತು ಡಿಎಸ್ಪಿ ಎಸ್.ಎಂ. ಸಂದಿಗವಾಡ ನೇತೃತ್ವದ ತಂಡದಿಂದ ಆರೋಪಿಯನ್ನು ಬಂಧಿಸಲಾಗಿದೆ. ಕಲಂ ೧೫೩ಎ ,೫೦೪,೫೦೫(೨), ೫೦೬ ಸಹಿತ ೩೪ ಐಪಿಸಿಯಡಿ ನಗರ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ

Please follow and like us:
error