ವಾಲ್ಮೀಕಿ ಟ್ರಸ್ಟಿನಿಂದ ಸರ್ವ ಧರ್ಮ,ಜನಾಂಗದ ವಿದ್ಯಾರ್ಥಿಗಳಿಗೆ ಸ್ಕಾಲರಷಿಪ್; ಅರ್ಜಿ ಆಹ್ವಾನ


ಕೊಪ್ಪಳ :  ವಾಲ್ಮೀಕಿ ಎಜುಕೇಷನ್ ಮತ್ತು ಸ್ಕಾಲರ್‌ಶಿಪ್ ಟ್ರಸ್ಟನಿಂದ ವಾಲ್ಮೀಕಿ ನಾಯಕ ಸಮುದಾಯವೂ ಸೇರಿದಂತೆ ಸಾಮಾಜಿಕವಾಗಿ,ಆರ್ಥಿಕವಾಗಿ ಹಿಂದುಳಿದ ಎಲ್ಲ ಧರ್ಮ, ಜಾತಿ ಜನಾಂಗಗಳ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲು ಅರ್ಜಿ ಆಹ್ವಾನಿಸಿದೆ. ಕರ್ನಾಟಕದ ಡಾ.ಜಿ.ರಂಗಯ್ಯ , ನ್ಯೂಯಾರ್ಕನ ಕೆಲಿ ಹಾಗೂ ಕ್ಯಾಲಿಫೋರ್ನಿಯಾದ ಸ್ಪೋಲಾರ್ ಸಹಕಾರದೊಂದಿಗೆ ಸತತವಾಗಿ ಕಳೆದ ೧೧ ವರ್ಷಗಳಿಂದ ಈ ಕಾರ್ಯ ಮಾಡಿಕೊಂಡು ಬರಲಾಗುತ್ತಿದೆ.ಪಿಯುಸಿ ವ್ಯಾಸಂಗ ಪೂರ್ಣಗೊಳಿಸಿ ವೈದ್ಯಕೀಯ,ಇಂಜಿನಿಯರಿಂಗ್ ಹಾಗೂ ಕೃಷಿವಿಜ್ಞಾನ ಪದವಿಗಳಿಗೆ ಪ್ರವೇಶ ಪಡೆದ ಎಲ್ಲ ಜಾತಿ,ಧರ್ಮಗಳ ೨೫ ಪ್ರತಿಭಾವಂತರಿಗೆ ತಲಾ ೨೦ ಸಾವಿರ ರೂ. ಸ್ಕಾಲರ್‌ಶಿಪ್ ನೀಡಲಾಗುವದು. ಪ್ರತಿ ವಿಭಾಗದಲ್ಲಿ ಮೂರು ಜನ ವಾಲ್ಮೀಕಿ ಜನಾಂಗದ ವಿದ್ಯಾರ್ಥಿಗಳಿಗೆ ಪ್ರಾತಿನಿಧ್ಯ ನೀಡಲಾಗುವದು.ಉಳಿದಂತೆ ೧೬ ವಿದ್ಯಾರ್ಥಿಗಳನ್ನು ಮುಕ್ತವಾಗಿ ಎಲ್ಲ ಜಾತಿ,ಧರ್ಮಗಳಿಂದ ಆಯ್ಕೆ ಮಾಡಲಾಗುವದು. ಅರ್ಹ ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ ೨೭ ರೊಳಗಾಗಿ,ಅಂಕಪಟ್ಟಿ,ಪಾಲಕರ ಆದಾಯ ,ಜಾತಿ ಪ್ರಮಾಣ ಪತ್ರ ಹಾಗೂ ಭಾವಚಿತ್ರದೊಂದಿಗೆ , ಕಾರ್ಯದರ್ಶಿಗಳು,ವಾಲ್ಮೀಕಿ ಎಜುಕೇಷನ್ ಮತ್ತು ಸ್ಕಾಲರ್‌ಷಿಪ್ ಟ್ರಸ್ಟ್, ನಂ ೫೦೬, ೪ ನೇ ಕ್ರಾಸ್, ೨ನೇ ಹಂತ,೩ ನೇ ಬ್ಲಾಕ್ ,ರಾಜಮಹಲ್ ವಿಲಾಸ ಬಡಾವಣೆ,ಬೆಂಗಳೂರು-೯೪ ವಿಳಾಸಕ್ಕೆ ಅರ್ಜಿಗಳನ್ನು ಕಳಿಸಬಹುದು .