ವಾಲ್ಮಿಕಿ ಭವನ ಕಟ್ಟಡ ಸ್ಥಳಕ್ಕೆ ಸಚಿವ ಶಾಸಕರ ಭೇಟಿ

ಕೊಪ್ಪಳ, ಜೂ.೧೦: ನಗರದ ಕಿನ್ನಾಳ ರಸ್ತೆಯ ಅಗಡಿ ಬಡಾವಣೆಯಲ್ಲಿರುವ ವಾಲ್ಮಿಕಿ ಸಮುದಾಯ ಭವನದ ಕಟ್ಟಡ ನಡೆಯುವ ಸ್ಥಳಕ್ಕೆ ಇಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ, ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ ಭೇಟಿ ನೀಡಿ ಕಟ್ಟಡದ ಮಾಹಿತಿ ಪಡೆದರು.
ಕೊಪ್ಪಳ ಶಾಸಕ ಸಂಸದೀಯ ಕಾರ್ಯದರ್ಶಿ ಕೆ. ರಾಘವೇಂದ್ರ ಹಿಟ್ನಾಳ್ ಅವರ‌ ಆಸಕ್ತಿಯಿಂದ ಅವರ ಅನುದಾನದಲ್ಲಿ ಅಂದಾಜು ೪೯ ಲಕ್ಷ ರೂ. ಹಣದಲ್ಲಿ ಸುಮಾರು ೧೧೦ ಅಡಿ ಅಗಲ

೨೦೮ ಅಡಿ ಉದ್ದ ಜಾಗದಲ್ಲಿ ನಿರ್ಮಾಣ ಮಾಡುತ್ತಿರುವ ಸುಮಾರು ೩.೫೦ ಕೋಟಿ ರೂಪಾಯಿ
ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದು, ೧.೫೦ ಕೋಟಿ ಹಣ ಬಿಡುಗಡೆ ಆಗಿದ್ದು, ಬಾಕಿ ೨ ಕೋಟಿ
ರೂಪಾಯಿ ಹಣ ಬಿಡುಗಡೆಗೆ ಸರಕಾರಕ್ಕೆ ಪತ್ರ ಬರೆಯಲಾಗಿದೆ.
ಸಮಾಜದ ಪರವಾಗಿ ಈ ವೇಳೆ ಸಚಿವರನ್ನು ಸನ್ಮಾನಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮತ್ತು
೭.೫ ಮೀಸಲಾತಿ ನೀಡುವ ಕುರಿತು ಸಂಪÅಟದಲ್ಲಿ ಚರ್ಚಿಸುವಂತೆ ಮನವಿ ಸಲ್ಲಿಸಿದರು.
ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ವಾಲ್ಮಿÃಕಿ ಸಮುದಾಯಕ್ಕೆ ಸಾಕಷ್ಟು ಅನುದಾನ
ನೀಡಿದ್ದಾರೆ. ಪ್ರತಿ ಹಳ್ಳಿಯಲ್ಲಿ ವಾಲ್ಮಿÃಕಿ ಭವನ ಕಟ್ಟುವ ಕಾರ್ಯ ಭರದಿಂದ ಸಾಗಿದೆ ಎಂಬ
ವಿಷಯವನ್ನು ಸಚಿವರ ಗಮನಕ್ಕೆ ಮುಖಂಡರು ತಂದರು. ಸಚಿವರು ಮಾತನಾಡಿ
ಸಮಾಜದ ಪ್ರತಿಯೊಬ್ಬರೂ ಭವನವನ್ನು ಮುತುವರ್ಜಿವಹಿಸಿ ಉತ್ತಮವಾಗಿ ಕಟ್ಟಿಸಬೇಕು,
ನಂತರ ಅದನ್ನು ಸಮುದಾಯ ಮತ್ತು ಸಮಾಜಕ್ಕೆ ಒಳ್ಳೆಯ ರೀತಿಯ
ಉಪಯೋಗವಾಗುವಂತೆ ನೋಡಿಕೊಳ್ಳಬೇಕು ಎಂದರು. ವಾಲ್ಮಿÃಕಿ ಸಮುದಾಯಕ್ಕೆ
ಶಾಸಕರ ಕೊಡುಗೆಯನ್ನು ಈ ವೇಳೆ ಸಚಿವರು ಕೊಂಡಾಡಿದರು ಅಲ್ಲದೆ ಸಮುದಾಯ
ಇರುವಂತೆ ಕೋರಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ವಾಲ್ಮಿÃಕಿ ಮಹಾಸಭಾ ಅಧ್ಯಕ್ಷ ಟಿ. ರತ್ನಾಕರ, ಜಿಲ್ಲಾ ವಾಲ್ಮಿÃಕಿ ಗುರುಪೀಠ
ಧರ್ಮದರ್ಶಿ ರಾಮಣ್ಣ ಕಲ್ಲನವರ, ವಾಲ್ಮಿÃಕಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಸುರೇಶ
ಡೊಣ್ಣಿ, ತಾಲೂಕು ಮಹಾಸಭಾ ಅಧ್ಯಕ್ಷ ಶರಣಪ್ಪ ನಾಯಕ್, ಹನುಮಂತಪ್ಪ ಗುದಗಿ,
ಶಿವಮೂರ್ತಿ ಗುತ್ತೂರು, ಮಂಜುನಾಥ್ ಜಿ. ಗೊಂಡಬಾಳ, ಯಮನೂರಪ್ಪ ನಾಯಕ್,
ಅನುಸೂಯಾ ವಾಲ್ಮಿÃಕಿ, ಉಮೇಶ್ ವಾಲ್ಮಿÃಕಿ, ನೀಲಪ್ಪ ಬಾವಿಕಟ್ಟಿ, ವಿರುಪಾಕ್ಷಪ್ಪ, ಮಾರ್ಕಂಡಪ್ಪ
ಕಲ್ಲನವರ್, ನಾಗರಾಜ ಕಿಡದಾಳ್, ಮಲ್ಲಪ್ಪ ಬೇಲೇರಿ ಸೇರಿದಂತೆ ಇತರರು ಇದ್ದರು.

Please follow and like us:
error