ವಾಜಪೇಯಿ ಸಾರಥ್ಯದಲ್ಲಿ ಜಾಗತೀಕವಾಗಿ ಬೆಳದ ಭಾರತ: ಸಂಸದ ಸಂಗಣ್ಣ ಕರಡಿ


ಕೊಪ್ಪಳ, ಡಿ.೨೫: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಿಂದ ದೇಶದ ಪ್ರತಿ ಗ್ರಾಮಗಳಿಗೆ ಸಂಪರ್ಕದ ವ್ಯವಸ್ಥೆ ಮತ್ತು ಆಗಿನ ಸಂದರ್ಭದಲ್ಲಿ ನದಿಗಳ ಜೋಡಣೆಯ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ದೀಮಂತ ನಾಯಕ ಮಾಜಿ ಪ್ರಧಾನಿ ವಾಜಪೇಯಿರವರು ಭಾರತ ಮತ್ತು ಪಾಕಿಸ್ತಾನ ದೇಶಗಳ ಸ್ನೇಹ ಸಂಬಂಧ ವೃದ್ಧಿಗಾಗಿ ಸಂಜೋತ ಬಸ್ ಸೇವೆ ಆರಂಭಿಸಿದರು. ಮತ್ತು ಯುದ್ಧದಲ್ಲಿ ವೀರ ಮರಣ ಹೊಂದಿದ ಯೋಧರ ಕುಟುಂಬಗಳಿಗೆ ನೆರವು ನೀಡಲು ಪೆಟ್ರೋಲ್ ಬಂಕ್ ನೀಡುವ ಯೋಜನೆ ಜಾರಿ ಮಾಡಿದ ಕೀರ್ತಿ ಅಟಲ್ ಬಿಹಾರಿ ವಾಜಪೇಯಿರವರಿಗೆ ಸಲ್ಲುತ್ತದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದ ಭಾಜಪ ಜಿಲ್ಲಾ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ ೯೪ನೇ ಜನ್ಮದಿನವನ್ನು ಸುಶಾಸನ ದಿವನ್ನಾಗಿ ಆಚರಿಸುವ ಸಂದರ್ಭದಲ್ಲಿ ಮಾತನಾಡಿದ ಅವರು ಉತ್ತಮ ಸಂಸದಿಯ ಪಟುಗಳಾಗಿದ್ದ ಅವರು ಯಾರನ್ನು ಶತ್ರುಗಳಾಗಿ ನೋಡದೇ ಮಿತ್ರತ್ವವನ್ನು ಸಾಧಿಸಿ ಅಜಾತಶತ್ರುವಾಗಿದ್ದಾರೆ. ಅವರ ಹೆಸರಿನಲ್ಲಿ ಅಟಲ್ ಪೇನಷನ್ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ ಇನ್ನೂ ಹಲವು ಯೋಜನೆಗಳು ಬಡವರ ಪರ ಜಾರಿಯಾಗಿವೆ. ಅಟಲಜೀಯವರು ವಿದೇಶಾಂಗ ನೀತಿಯಲ್ಲಿ ತಮ್ಮದೇಯಾದ ಪ್ರಭಾವ ಬೀರಿದ್ದರು. ಸರ್ವ ಶಿಕ್ಷಣ ಅಭಿಯಾನವನ್ನು ಜಾರಿ ಮಾಡಿ ಜನರನ್ನೊಳಗೊಂಡ ಆಡಳಿತ ಪಾರದರ್ಶಕವಾಗಿ ಸುಶಾಸನದಿಂದ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರು ವಾಜಪೇಯಿ ಹಾಕಿ ಕೊಟ್ಟ ದಾರಿಯಲ್ಲಿಯೇ ಅನೇಕ ಜನಪರ ಯೋಜನೆಗಳನ್ನು ಜಾರಿ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂದಿಯವರು ಕೂಡಾ ಇವರ ವಾಕಚಾತುರ್ಯಕ್ಕೆ ತಲೆಬಾಗಿದ್ದರು. ಕೇಲವೊಂದು ಕಟ್ಟಿತನದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂದಿರಾ ಮತ್ತು ಮೋದಿಯವರಿಂದ ಮಾತ್ರ ಸಾಧ್ಯವಾಗಿದೆ. ವಾಜಪೇಯಿಯವರ ಸಾರಥ್ಯದಲ್ಲಿ ಜಾಗತೀಕವಾಗಿ ಭಾರತವು ಬಲಿಷ್ಟವಾಗಿ ಬೆಳೆಯಲಾರಂಭಿಸಿತು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಪೀರಾಹುಸೇನ ಹೊಸಳ್ಳಿ, ಡಿ.ಮಲ್ಲಣ್ಣ ಶಿವಕುಮಾರ ಹಕ್ಕಾಪಕ್ಕಿ, ಹಾಲೇಶ ಕಂದಾರಿ, ರಾಜು ಬಾಕಳೆ, ಹೇಮಲತಾ ನಾಯಕ, ಪ್ರಾಣೇಶ ಮಹೇಂದ್ರಕರ್, ಗವಿಸಿದ್ದಪ್ಪ ಕಂದಾರಿ, ಬಸವರಾಜ ಈಶ್ವರಗೌಡರ, ಚನ್ನಬಸಪ್ಪ ಹೊಳಯಪ್ಪನವರ, ಮಹೇಶ ಹಾದಿಮನಿ, ಉಮೇಶ ಕುರುಡೇಕರ, ಶ್ರವಣಕುಮಾರ ಬಂಡಾನವರ, ಗವಿಸಿದ್ದಪ್ಪ ಗೀಣಗೇರಿ, ಬಿ.ಜಿ.ಗದುಗಿನಮಠ, ಕನಕಮೂರ್ತಿ, ಶ್ರೀನಿವಾಸ ಪೂಜಾರ, ಮಹೇಶ ಅಂಗಡಿ, ಪುಟ್ಟರಾಜ ಚಕ್ಕಿ, ಚಂದ್ರುಸ್ವಾಮಿ, ಗವಿಸಿದ್ದಪ್ಪ ಬೆಲ್ಲದ, ಗಣೇಶ, ಅರವಿಂದ ಜೈನ್, ಭಾಜಪ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಅನೇಕರು ಉಪಸ್ಥಿತರಿದ್ದರು.

Please follow and like us:
error