ವಸತಿ ಶಾಲೆಗಳ ೬ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಕೊಪ್ಪಳ ಡಿ.  ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಮೊರಾಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಇಂದಿರಾಗಾಂದಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳ ೬ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಸರ್ಕಾರವು ಗ್ರಾಮೀಣ ಪ್ರದೇಶದ ಪ.ಜಾತಿ, ಪ.ವರ್ಗ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಪ್ರತಿಭಾವಂತ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆಗಳಲ್ಲಿ ೬ನೇ ತರಗತಿಯಿಂದ ೧೦ನೇ ತರಗತಿಯವರೆಗೆ ಆಂಗ್ಲ ಮಾಧ್ಯಮಗಳಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಹಾಗೂ ಹಿಂದುಳಿದ ವರ್ಗದ ಪ್ರ.ವರ್ಗ-೧ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಮಿತಿ ರೂ. ೨.೫೦ ಲಕ್ಷ, ಪ್ರ.ವರ್ಗ ೨ಎ, ೨ಬಿ, ೩ಎ, ೩ಬಿ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಮಿತಿ ರೂ. ಒಂದು ಲಕ್ಷದೊಳಗಿರಬೇಕು.
ಅರ್ಜಿಗಳ ವಿತರಣೆ : ಕೊಪ್ಪಳ ಜಿಲ್ಲೆಯ ಎಲ್ಲಾ ವಸತಿ ಶಾಲೆಗಳಲ್ಲಿ ಅರ್ಜಿಗಳ ವಿತರಣೆಯನ್ನು ಈಗಾಲೇ ಪ್ರಾರಂಭಿಸಿದ್ದು, ೨೦೧೯ರ ಜನವರಿ. ೧೪ ರವರೆಗೆ ವಿತರಿಸಲಾಗುವುದು. ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ಸಮೀಪದ ವಸತಿ ಶಾಲೆಗಳಲ್ಲಿ ಜನವರಿ. ೧೫ರ ಸಂಜೆ ೦೫ ಗಂಟೆಯೊಳಗಾಗಿ ಸಲ್ಲಿಸಬೇಕು. ವಿದ್ಯಾರ್ಥಿಗಳ ಹಾಜರಾತಿ ಪತ್ರಗಳನ್ನು ಮಾರ್ಚ್. ೦೧ ರಿಂದ ೦೯ ರವರೆಗೆ ಅರ್ಜಿ ಸಲ್ಲಿಸಿದ ವಸತಿ ಶಾಲೆಗಳಲ್ಲಿ ಪಡೆಯಬಹುದಾಗಿದೆ. ಪ್ರವೇಶ ಪರೀಕ್ಷೆಯು ಮಾರ್ಚ್. ೧೦ರ ಭಾನುವಾರದಂದು ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೦೧ ಗಂಟೆಯ ವರೆಗೆ ನಡೆಯಲಿದೆ.
ಪ್ರವೇಶ ಪರೀಕ್ಷಾಧಿಕಾರಿಗಳ ವಿವರ : ತಾಲೂಕ ಪ್ರವೇಶ ಪರೀಕ್ಷಾಧಿಕಾರಿಗಳ ವಿವರ ಇಂತಿದೆ. ಗಂಗಾವತಿ ತಾಲೂಕಿನ ಸಿದ್ದಾಪೂರ ಮೊ.ದೇ.ಪ.ಪೂ.ವಿ.ವ.ಕಾಲೇಜ್ ಪ್ರಾಚಾರ್ಯರು ಅಮೀನಸಾಬ್ ಮೊ.ಸಂ. ೯೪೮೧೬೬೦೪೫೯, ಯಲಬುರ್ಗಾ ತಾಲೂಕಿನ ಬೇವೂರು ಮೊ.ದೇ.ವ.ಶಾ. ಪ್ರಾಚಾರ್ಯರು ಸಣ್ಣದುರಗಪ್ಪ, ಮೊ.ಸಂ. ೯೧೬೪೨೧೮೬೭೬, ಕೊಪ್ಪಳ ತಾಲೂಕಿನ ಹಿರೇಕಾಸನಕಂಡಿ ಮೊದೇವಶಾ ಪ್ರಾಚಾರ್ಯರು ಗೌರಮ್ಮ ಮೊ.ಸಂ. ೯೯೦೨೫೭೩೧೨೯, ಕುಷ್ಟಗಿ ತಾಲೂಕಿನ ಹನುಮಸಾಗರ ಇಂ.ಗಾಂ.ವ.ಶಾ. ಪ್ರಾಚಾರ್ಯರು ಶರಣಪ್ಪ ಬಡಿಗೇರ ಮೊ.ಸಂ. ೯೬೮೬೧೩೩೯೨೫.
ಅರ್ಜಿ ಹಾಗೂ ಹೆಚ್ಚಿನ ವಿವರಗಳನ್ನು ಪಡೆಯಲು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧಿಕೃತ ವೆಬ್‌ಸೈಟ್ ತಿತಿತಿ.ಞಡಿeis.ಞಚಿಡಿ.ಟಿiಛಿ.iಟಿ <hಣಣಠಿ://ತಿತಿತಿ.ಞಡಿeis.ಞಚಿಡಿ.ಟಿiಛಿ.iಟಿ> ನಲ್ಲಿ ಪಡೆಯಬಹುದಾಗಿದೆ. ಅಥವಾ ಕೊಪ್ಪಳ ಜಿಲ್ಲಾ ಸಮನ್ವಯಾಧಿಕಾರಿಗಳು ಹಾಗೂ ಆಯಾ ತಾಲೂಕಿನ ಪ್ರವೇಶ ಪರೀಕ್ಷಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error