fbpx

ವಚನ ಸಾಹಿತ್ಯದ ಮೂಲಕ ನೈತಿಕತೆ ಸಾರಿದ ಮಾನವತಾ ವಾದಿ : ಮಲ್ಲನಗೌಡರ್


ಕೊಪ್ಪಳ, ಜೂ. ೧೪: ವಚನ ಸಾಹಿತ್ಯದ ಮೂಲಕ ಕರುನಾಡಿಗೆ ಮತ್ತು ಸಮಾಜಕ್ಕೆ ನೈತಿಕತೆ ಸಾರಿದ ಮಹಾನ್ ಮಾನವತಾವಾದಿ ಸಿದ್ದಯ್ಯ ಪುರಾಣಿಕ ಎಂದು ಹಿರಿಯ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ್ ಹೇಳಿದರು,
ನಗರದ ಕಾವ್ಯಾನಂದ ಉದ್ಯಾನದಲ್ಲಿ ಗುರುವಾರ ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯಿಂದ ಹಮ್ಮಿಕೊಂಡ ಸಿದ್ದಯ್ಯ ಪುರಾಣಿಕ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಶಾಲೆಗಳು ಇರದ ಪರಸ್ಥಿತಿಯಲ್ಲಿ ಸಿದ್ದಯ್ಯ ಪುರಾಣಿಕ ಅವರ ಶೈಕ್ಷಣಿಕ ಸಾಧನೆ ಆಗಾಧವಾದದ್ದು. ವಚನ ಸಾಹಿತ್ಯದ ಜೊತೆಗೆ ಅತ್ಯುತ್ತಮ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆಯನ್ನು ನೀಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ನಾಟಕ, ವಚನ, ಕಾವ್ಯಗಳ ಮೂಲಕ ಸಾಹಿತ್ಯ ಕೃಷಿ ಮಾಡಿ, ಗುಲ್ಬರ್ಗಾದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದವರು. ಇಂತಹ ಮಹಾನ್ ವ್ಯಕ್ತಿಯ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ ನಾಗರಿಕ ವೇದಿಕೆ ಕಾರ್ಯ ಶ್ಲಾಘನೀಯ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಬೇಕಾದ ಇಂತಹ ಕಾರ್ಯಗಳನ್ನು ಜಿಲ್ಲಾ ನಾಗರಿಕ ವೇದಿಕೆ ಮಾಡುತ್ತಿರುವದು ಅಭಿನಂದನಿಯ ಎಂದರು.
ಹಿರಿಯ ಪರ್ತಕರ್ತ ವೀಠ್ಠಪ ಗೋರಂಟ್ಲಿ ಮಾತನಾಡಿ, ಆಸೆ ಎಂಬ ದೀಪ ಹೊತ್ತಿ ಉರಿಯುತ್ತಿದೆ ಅದಕ್ಕೆ ಪೂರಕವೆಂಬಂತೆ ಸಾಹಿತಿಗಳ ಚಿಂತನೆ ಹಾಗೂ ಅವರ ಬರಹಗಳ ಬಗ್ಗೆ ಬೆಳಕು ಚೆಲ್ಲುವುದು ಅವಶ್ಯವೆಂದು ಹೇಳುತ್ತಾ, ಏನಾದರೂ ಆಗು ಮೋದಲು ಮಾನವನಾಗು ಎಂಬ ಕವಿತೆಯ ಸಾರ ವಿಶ್ವ ಮಾನವ ಸಂದೇಶಕ್ಕೆ ಸಾಟಿ ಎಂದರು. ಪುರಾಣಿಕರ ಜೊತೆಗೆ ತಮ್ಮ ಒಡನಾಟವನ್ನು ಸ್ಮರಿಸಿಕೊಳ್ಳುತ್ತಾ ಪುರಾಣಿಕರ ಸರಳತೆ ಆದರ್ಶ ಪ್ರಾಮಾಣಿಕತೆಯನ್ನು ಯುವ ಪೀಳಿಗೆ ಮತ್ತು ಜನತೆ ರೂಡಿಸಿಕೊಳ್ಳುವಂತೆ ಕರೆ ನೀಡಿದರು.
ಸಿದ್ದಯ್ಯ ಪುರಾಣಿಕರ ಜನ್ಮ ಶತಮಾನೋತ್ಸವದ ಭಿತ್ತಿ ಚಿತ್ರ ಬಿಡುಗಡೆಗೊಳಿಸಿ ಮಾತನಾಡಿದ ಪ್ರಗತಿಪರ ಚಿಂತಕ ಎಂ. ಬಿ. ಅಳವಂಡಿ, ಸಿದ್ದಯ್ಯ ಪುರಾಣಿಕ ಅವರ ಸಮುದಾಯ ಭವನ ಮುಖ್ಯ ರಸ್ತೆಗೆ ಸಿದ್ದಯ್ಯ ಪುರಾಣಿಕರ ಹೆಸರು ಹಾಗೂ ದ್ಯಾಂಪುರದ ಮುಖ್ಯ ರಸ್ತೆಯ ವೃತ್ತದಲ್ಲಿ ಸಿದ್ಧಯ್ಯ ಪುರಾಣಿಕರ ಪುತ್ಥಳಿ ನಿರ್ಮಿಸುವಂತೆ ಜಿಲ್ಲಾ ಆಡಳಿತಕ್ಕೆ ಆಗ್ರಹಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಗರಿಕೆ ವೇದಿಕೆಯ ರಾಜ್ಯಾಧ್ಯಕ್ಷ ಮಹೇಶ ಬಾಬು ಸುರ್ವೆ, ಸಿದ್ದಯ್ಯ ಪುರಾಣಿಕ ಜನ್ಮ ಶತಮಾನೋತ್ಸವವನ್ನು ರಾಜ್ಯಾದ್ಯಂತ ಎರಡು ಹಂತಗಳಲ್ಲಿ ಕೈಗೊಳ್ಳುವದಾಗಿ ಹೇಳುತ್ತಾ, ಎರಡನೆಯ ಕಾರ್ಯಕ್ರಮವನ್ನು ಜುಲೈ ೧ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗುವದು ಎಂದರು. ಎರಡನೆಯ ಹಂತದ ಕಾರ್ಯಕ್ರಮವನ್ನು ಶಹಪೂರ, ಯಾದಗಿರಿ, ಗುಲ್ಬುರ್ಗಾ, ಬೀದರ್, ಬಳ್ಳಾರಿ ಮತ್ತು ಕೊಪ್ಪಳದಲ್ಲಿ ಮುಂಬರುವ ದಿನಗಳಲ್ಲಿ ಮಾಡಲಾಗುವದು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆ ಕುಕನೂರು ತಾಲೂಕ ಅಧ್ಯಕ್ಷರಾಗಿ ಮಂಜುನಾಥ ಅಂಗಡಿ ಅವರನ್ನು ನೇಮಕ ಮಾಡಿ ಅವರಿಗೆ ಅಧಿಕಾರ ನೀಡಲಾಯಿತು. ಹಾಗೆಯೇ ಪತ್ರಕರ್ತರ ವೇದಿಕೆಯ ಕುಕನೂರು ತಾಲೂಕ ಅಧ್ಯಕ್ಷರಾಗಿ ಜಗದೀಶ ಸೂಡಿ ಅವರನ್ನು ನೇಮಕ ಮಾಡಿ ಅಧಿಕಾರ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಿದ್ದಯ್ಯ ಪುರಾಣಿಕರ ವಚನ ಗಾಯನವನ್ನು ಅನ್ನಪೂರ್ಣ ಮನ್ನಾಪೂರ ಹಾಗೂ ಗವಿಸಿದ್ದಯ್ಯ ಹಿರೇಮಠ ಹಾಡಿದರು.
ಬಸವರಾಜ ಆಕಳವಾಡಿ, ಶಿವಾನಂದ ಹೂದ್ಲೂರು, ಸಿದ್ದಪ್ಪ ಹಂಚಿನಾಳ, ವೀರಣ್ಣ ನಿಂಗೋಜಿ, ಶರಣಬಸಪ್ಪ ದಾನಕೈ, ಮಹೇಶ ಮನ್ನಾಪೂರ, ಶಿವಕುಮಾರ ಹಿರೇಮಠ, ಉಮೇಶ ಪೂಜಾರ, ಹನುಮಂತಪ್ಪ ಕುರಿ, ಗವಿಸಿದ್ದಪ್ಪ ಬಾರಕೇರ್, ಶ್ರೀನಿವಾಸ ಚಿತ್ರಗಾರ, ಬಿ. ಎನ್. ಹೊರಪೇಟೆ, ಕುಮಾರ ಸಮರ್ಥ ಹಿರೇಮಠ, ಅನ್ನಪೂರ್ಣ ಉಪ್ಪೀನ್, ಶ್ರೀಮತಿ ಕೋಮಲಾ ಕುದರಿಮೋತಿ, ಗೀರಿಜಕ್ಕ ಬಳ್ಳೊಳ್ಳಿ, ಮಧು ಹಡಗಲಿ, ಲಿಲತಾ ಹಿರೇಮಠ, ಗೀತಾ ಇಟಗಿ, ಇತರರು ಉಪಸ್ಥಿತರಿದ್ದರು. ಪ್ರಸ್ತಾವಿಕವಾಗಿ ಜಿ. ಎಸ್. ಗೋನಾಳ ಮಾತನಾಡಿದರು. ವೈ. ಬಿ. ಜೂಡಿ ಸ್ವಾಗತಿಸಿದರು. ಮೈಲಾರಪ್ಪ ಉಂಕಿ ವಂದಿಸಿದರು. ಕಾರ್ಯಕ್ರಮವನ್ನು ದಯಾನಂದ ಸಾಗರ ನಿರೂಪಿಸಿದರು.

Please follow and like us:
error
error: Content is protected !!