ಲೋಕಸಭಾ ಚುನಾವಣೆ : ಈ.ಕ.ರ.ಸಾ. ಸಂಸ್ಥೆ ಸಾರಿಗೆಯಲ್ಲಿ ವ್ಯತ್ಯಯ

ಕೊಪ್ಪಳ ಏ. 20 ; ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ನಿಮಿತ್ತ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗದಿಂದ ಚುನಾವಣಾ ಕಾರ್ಯಕ್ಕೆ 155 ವಾಹನಗಳನ್ನು ಒದಗಿಸಲಾಗಿದ್ದು, ಏಪ್ರಿಲ್. 22 ಮತ್ತು 23 ರಂದು ಸ್ಥಳೀಯ ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಸಂಸ್ಥೆಯ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಜೆ. ಮಹಮದ್ ಫಯಾಜ್ ತಿಳಿಸಿದ್ದಾರೆ.
ಆದರೆ ದೂರದ ಮಾರ್ಗದ ಸಾರಿಗೆ ಸೇವೆ ಹಾಗೂ ರಾತ್ರಿ ಕಾರ್ಯಾಚರಣೆ ಸಾರಿಗೆ ಎಂದಿನಂತೆ ಇರಲಿದ್ದು ಯಾವುದೇ ಸಮಯದ ಬದಲಾವಣೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Please follow and like us:
error