ಲೋಕಸಭಾ ಚುನಾವಣೆಗೆ ಮಳೆಮಠಸ್ವಾಮಿ ಭರ್ಜರಿ ತಯ್ಯಾರಿ

ಕೊಪ್ಪಳ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ತೀವ್ರ ಆಕಾಂಕ್ಷಿಯಾಗಿರುವ ಬಸವರಾಜಸ್ವಾಮಿ ಮಳೇಮಠ ಭರ್ಜರಿ ತಯ್ಯಾರಿಯಲ್ಲಿ ತೊಡಗಿದ್ದಾರೆ. ಹೀಗಾಗಲೇ ಕ್ಷೇತ್ರಾದ್ಯಂತ ವಿವಿಧೆಡೆ ಪ್ರವಾಸ ಮಾಡುತ್ತಾ ಪಕ್ಷ ಸಂಘಟನೆಯ ಜೊತೆಗೆ ತಮ್ಮ ಬೆಂಬಲಿಗರನ್ನು ಭೇಟಿಯಾಗಿ ಬೆಂಬಲ ಕೋರುತ್ತಿದ್ದಾರೆ.

ಇಂದು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರು, ಬ್ಲಾಕ್ ಅಧ್ಯಕ್ಷರು, ಹಿರಿಯರು, ಮುಖಂಡರು ಮತ್ತು ಯುವ ಧುರೀಣರನ್ನು ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಬಸವರಾಜ ಸ್ವಾಮಿ ಮಳೇಮಠ ತಮ್ಮ ಹಲವಾರು ಬೆಂಬಲಿಗರೊಂದಿಗೆ ಭೇಟಿಯಾಗಿ ಮುಂದಿನ ದಿನಮಾನಗಳಲ್ಲಿ ಕೊಪ್ಪಳ ಲೋಕಸಭಾ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ತಾವು ಪ್ರಬಲವಾಗಿ ಪ್ರಯತ್ನಿಸುತ್ತಿದ್ದು ಅದಕ್ಕೆ ಸರ್ವರ ಸಹಕಾರ ಕೋರಿದರು…

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಟಿ ಎಂ ಚಂದ್ರಶೇಖರಯ್ಯ ಸ್ವಾಮಿ, ಹಿರಿಯ ಕಾಂಗ್ರೆಸ್ ಮುಖಂಡರಾದ ಪಿ ರಾಮರೆಡ್ಡಿ, ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕರಿಬಸಪ್ಪ ಮತ್ತು ಬ್ಲಾಕ್ ಪ್ರಧಾನ ಕಾರ್ಯದರ್ಶಿ ನೂರುಲ್ಲಾ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಾಗರಾಜ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪವನ್ ಕುಮಾರ್ ದೇಸಾಯಿ ಮತ್ತು ಇನ್ನಿತರ ಹಲವಾರು ಮುಖಂಡರನ್ನು ಭೇಟಿ ಮಾಡಿದರು…

ಇದರ ಜೊತೆ ಜೊತೆಗೆ ಕಾಂಗ್ರೆಸ್ ಪಕ್ಷದ ಸದೃಢ ಸಂಘಟನೆಗಳಿಗೆ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು..

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ರಮೇಶ್ ಕುಲಕರ್ಣಿ, ಹನುಮಂತ್ರಾಯ, ದ್ಯಾಮಣ್ಣ ನರಸಾಪುರ, ಶುಕ್ರ ಅಹಮ್ಮದ್, ತಿಪ್ಪಣ್ಣ ನಾಯಕ, ಯಮನೂರಪ್ಪ ನಾಯಕ ಕಲ್ಗುಡಿ, ಯಮನೂರಪ್ಪ ಮರಳಿ ಮತ್ತು ಇನ್ನಿತರರು ಉಪಸ್ಥಿತರಿದ್ದರು…

Please follow and like us:
error