ಲೋಕಸಭಾ ಎಲೆಕ್ಷನ್ ಗೆ ಮುಂಚೆ ಸದಾಶಿವ ವರದಿ ಜಾರಿಯಾಗದಿದ್ದರೆ ಉಗ್ರ ಹೋರಾಟ

ಕೊಪ್ಪಳ : ನ್ಯಾ.ಸದಾಶಿವ ಆಯೋಗದ ವರದಿ ಶಿಪಾರಸ್ಸಿಗೆ ಮುಖ್ಯಮಂತ್ರಿಗಳು ನೀಡಿದ ಎರಡು ತಿಂಗಳ ಗಡುವಿಗೆ ಅಭಿನಂದನೆಗಳನ್ನು ಸಲ್ಲಿಸಿದ ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಮಹಾಸಭಾದ ಪದಾಧಿಕಾರಿಗಳು. ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪದಾಧಿಕಾರಿಗಳು ೨ ತಿಂಗಳ ಗಡುವಿನ ನಂತರವೂ ಯಾವುದೇ ರೀತಿಯಲ್ಲಿ ಭರವಸೆ ಇಡೇರಿಸದಿದ್ದರೆ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು. ಪ್ರಿಯಾಂಕ್ ಖರ್ಗೆಯವರಿಗೆ ಎಲ್ಲಾ ರೀತಿಯ ಪ್ರಕ್ರಿಯೆಗಳನ್ನು ಮುಂದುವರೆಸುವ ಜಬಾವ್ದಾರಿ ನೀಡಿದ್ದು ಒಳ್ಳೆಯ ಬೆಳವಣಿಗೆ. ಫ್ರಿಡಂ ಪಾರ್ಕ ನಲ್ಲಿ ನಡೆದ ಹೋರಾಟದ ನಂತರ ಮಂದಿನ ಹೋರಾಟಗಳ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮುರಳಿಧರ ಮೇಲಿನಮನಿ, ಆನಂದ ಭಂಡಾರಿ, ಮಾರುತಿ ಚಾಮ್ಲಾಪೂರ, ‌ನಾಗಲಿಂಗ ಮಾಳೇಕೊಪ್ಪ ಮಂಜುನಾಥ ತರಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error