ಕೊಪ್ಪಳ :
ವಿನಾಕಾರಣ ತೊಂದರೆ ಮಾಡುವುದರ ವಿರುದ್ದ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಲೈಂಗಿಕ ಅಲ್ಪಸಂಖ್ಯಾತ ರು ಎಸ್ಪಿಯವರಿಗೆ ಮನವಿ ಸಲ್ಲಿಸಿದರು. ಇತ್ತೀಚಿಗೆ
ಕೊಪ್ಪಳದಲ್ಲಿ ಲೈಂಗಿಕ ಅಲ್ಪಸಂಖ್ಯಾತ ರ ಮೇಲೆ
ಅನುಮಾನ ಮೂಡುವ ರೀತಿಯಲ್ಲಿ ಸುದ್ದಿಗಳು ಪ್ರಕಟವಾಗಿವೆ. ಹೀಗಾಗಿ ಜನಸಾಮಾನ್ಯರು ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ. ಇದರಿಂದ ಮೊದಲೇ ನೊಂದಿರುವ ಲೈಂಗಿಕ ಅಲ್ಪಸಂಖ್ಯಾತ ರು ತೀವ್ರವಾಗಿ ಮಾನಸಿಕ ಘಾಸಿಗೊಳಗಾಗಿದ್ದಾರೆ. ಹೊಸಪೇಟೆ ಯ ಮಗು ಕಾಣೆ ಪ್ರಕರಣದಲ್ಲಿ ವಿನಾಕಾರಣ ನಮ್ಮನ್ನು ಸಿಕ್ಕಿಸಲಾಗುತ್ತಿದೆ ರಕ್ಷಣೆ ನೀಡಿ, ತಪ್ಪು ಮಾಡಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹೊಂಗಿರಣ
ಸಂಘಟನೆಯ ಸದಸ್ಯರ ಜೊತೆ ವಿಠ್ಠಪ್ಪ ಗೋರಂಟ್ಲು, ಜೆ.ಭರದ್ವಾಜ, ಪಿಯುಸಿಎಲ್ ನ ಪ್ರದಾನ ಕಾರ್ಯದರ್ಶಿ ಎಚ್.ವಿ.ರಾಜಾಬಕ್ಷಿ ಉಪಸ್ಥಿತಿ ತರಿದ್ದರು.
Please follow and like us: