ಲಿಂಗಾಯತ ಸ್ವತಂತ್ರ ಧರ್ಮ ತಜ್ಞರ ಸಮಿತಿಗೆ ಸ್ವಾಗತ

ಕೊಪ್ಪಳ:೦೭, ಶ್ರೀ ನ್ಯಾಯಮೂರ್ತಿ ನಾಗಮೋಹನದಾಸರವರ ನೇತೃತ್ವದ ತಜ್ಞರ ಸಮಿತಿಯು ಪ್ರತ್ಯೇಕ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಅಲ್ಪಸಂಖ್ಯಾತ ಮತ್ತು ಸಂವಿಧಾನ ಮಾನ್ಯತೆಗಾಗಿ ನೀಡಿರುವ ವರದಿಯನ್ನು ಕೊಪ್ಪಳದ ಲಿಂಗಾಯತ ಸ್ವತಂತ್ರ ಧರ್ಮ ವೇದಿಕೆಯ ಸರ್ವ ಸದಸ್ಯರು ಸಭೆಯಲ್ಲಿ ಸ್ವಾಗತಿಸಿದರು. ಮತ್ತು ಈ ವರದಿಯನ್ನು ತೀವ್ರಗತಿಯಲ್ಲಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಲಾಯಿತು.
ಈ ಸಭೆಯಲ್ಲಿ ಬಸವರಾಜ ಬಳ್ಳೊಳ್ಳಿ, ಮಹೇಶ ಮಿಟ್ಟಲಕೋಡ, ಹನುಮೇಶ ಕಲ್ಮಂಗಿ, ಎಂ.ಬಸವರಾಜಪ್ಪ, ಮಂಜುನಾಥ ಹಡಪದ, ಲಿಂಗನಗೌಡ್ರ ಪಾಟೀಲ್, ಬಸಯ್ಯ ಸಸಿಮಠ, ಪಂಪಾಪತಿ ಹೊನ್ನಳ್ಳಿ, ಗುರುರಾಜ ಹಲಗೇರಿ, ಗವಿಸಿದ್ದಪ್ಪ ಕೊಪ್ಪಳ, ಶಿವಕುಮಾರ ಕುಕನೂರ, ಗವಿಸಿದ್ದಪ್ಪ ಪಲ್ಲೇದ ಮತ್ತು ಲಿಂಗಾಯತ ಸ್ವತಂತ್ರ ಧರ್ಮ ವೇದಿಕೆಯ ಸಂಘಟನೆಯ ಪ್ರಮುಖರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.