ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಆಗ್ರಹಿಸಿ ದೆಹಲಿಯಲ್ಲಿ ಮಹಾಸಮಾವೇಶ

ಕೊಪ್ಪಳ : ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಆಗ್ರಹಿಸಿ ಡಿಸೆಂಬರ್ ೧೦,೧೧, ೧೨ ರಂದು ಮೂರು ದಿನಗಳ ಕಾಲ ನವದೆಹಲಿಯ ತಾಲಕಟೋರ ಇಂಡೋರ್ ಸ್ಟೆಡಿಯಂನಲ್ಲಿ ಲಿಂಗಾಯತ ಮಹಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಅಂತ ರಾಷ್ಟೀಯ ಬಸವದಳ ಹಾಗೂ ಜಿಲ್ಲಾ ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾಧ್ಯಕ್ಷರಾದ ಕೆ. ವೀರಣ್ಣ ಲಂಗಾಯತ ಹೇಳಿದರು

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಆಡಳಿತದಲ್ಲಿ ಲಿಂಗಾಯತವು ವಿಶ್ವಗುರು ಬಸವಣ್ಣರಿಂದ ಸ್ಥಾಪಿತವಾದ ಸ್ವತಂತ್ರ ಧರ್ಮ ಎಂಬುದನ್ನು ಘೋಷಿಸಲಾಗಿದೆ. ಅಲ್ಲದೆ, ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನ ನೀಡಲು ಕೇಂದ್ರದ ಮೋದಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಆದ್ರೆ ಕೇಂದ್ರ ಸರ್ಕಾರ ಈವರೆಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ಕಾರಣ ಕೇಂದ್ರ ಸರ್ಕಾರ ಶೀಘ್ರವಾಗಿ ಕ್ರಮ ಕೈಗೊಳ್ಳಲು ಒತ್ತಾಯಿಸಿ ಡಿ.೧೦, ೧೧, ೧೨ ರಂದು ಮೂರು ದಿನಗಳ ಕಾಲ ಚಿಂತನಗೋಷ್ಠಿ ಹಾಗೂ ಬೃಹತ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಅಂತ ತಿಳಿಸಿದ್ದು, ನಾಡಿನ ಬಸವತತ್ವದ ಎಲ್ಲಾ ಮಠದ ಶ್ರೀಗಳು, ದೇಶದ ಆಂಧ್ರ, ತಮಿಳನಾಡು, ತೆಲಂಗಾಣ, ಮಹಾರಾಷ್ಟ್ರ, ಕೇರಳ, ಕರ್ನಾಟಕದ ಎಲ್ಲಾ ಭಾಗಗಳಿಂದ ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಹೇಳಿದ್ದಾರೆ. ಅಲ್ಲದೇ ಇದರಲ್ಲಿ ಯಾವುದೇ ರಾಜಕೀಯವಿಲ್ಲ.‌ಎಲ್ಲಾ ಪ್ರಕ್ಷದಲ್ಲಿರುವ ಲಿಂಗಾಯತ ನಾಯಕರು ಒಕ್ಕೊರಲಿನಿಂದ ಸ್ವತಂತ್ರ ಧರ್ಮಕ್ಕೆ ಆಗ್ರಹಿಸಲು ಈ ಸಮಾವೇಶವನ್ನು ಹಮ್ಮಿ ಕೊಳ್ಳಲಾಗಿದೆ ಅಂತ ತಿಳಿಸಿದರು. ಈ ಸಂದರ್ಭದಲ್ಲಿ ಸತೀಶ್ ಮಂಗಳೂರು, ಶಾಂತಮ್ಮ ಕವಲೂರು, ಬಸವರಾಜ್ ಬಳ್ಳೊಳ್ಳಿ, ರಾಜೇಶ್ ಸಸಿಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.