You are here
Home > Koppal News > ಲಿಂಗಾಯತ ಧರ್ಮ ಇಬ್ಬಾಗವಾದ್ರೆ ರಾಜ್ಯದಲ್ಲಿ ಧರ್ಮಯುದ್ದ ಸಾರುತ್ತೇವೆ – ದಿಂಗಾಲೇಶ್ವರ ಸ್ವಾಮೀಜಿ

ಲಿಂಗಾಯತ ಧರ್ಮ ಇಬ್ಬಾಗವಾದ್ರೆ ರಾಜ್ಯದಲ್ಲಿ ಧರ್ಮಯುದ್ದ ಸಾರುತ್ತೇವೆ – ದಿಂಗಾಲೇಶ್ವರ ಸ್ವಾಮೀಜಿ

ವೀರಶೈವ ಮತ್ತು ಲಿಂಗಾಯತ ಧರ್ಮ ಇಬ್ಬಾಗವಾದ್ರೆ ರಾಜ್ಯದಲ್ಲಿ ಧರ್ಮಯುದ್ದ ಸಾರುತ್ತೇವೆ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿಗಳು ಕೊಪ್ಪಳದಲ್ಲಿ ಎಚ್ಚರಿಕೆ ನೀಡಿದ್ದಾರೆ.ಇಂದು ಕೊಪ್ಪಳದಲ್ಲಿ

ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿಗಳು, ವೀರಶೈವ ಮತ್ತು ಲಿಂಗಾಯತ್ ಧರ್ಮ ಇಬ್ಬಾಗ ಮಾಡೋ ವಿಚಾರದಲ್ಲಿ ಕೆಲ ಪ್ರಭಾವಿ ರಾಜಕಾರಣಿಗಳು ಮತ್ತು ಮಠಾಧೀಶರು ಆಮೀಶಕ್ಕೆ ಒಳಗಾಗಿದ್ದಾರೆ.ನಾವು ಯಾವುದೇ ಕಾರಣಕ್ಕು ಇಬ್ಬಾಗವಾಗಲು ಬಿಡುವುದಿಲ್ಲ ಎಂದು ಹೇಳಿದ್ರು.ಇನ್ನೂ ನಾಗಮೋಹನ್ ದಾಸ್ ವರದಿಯನ್ನು ತರಾತುರಿಯಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಇದು ಸರ್ಕಾರದ ದಾಸರ ವರದಿಯಾಗಿದೆ ಎಂದು ವ್ಯಂಗ್ಯವಾಡಿದ್ರು. ಇನ್ನು ಧರ್ಮ ಇಬ್ಬಾಗ ಮಾಡೋದ್ರಲ್ಲಿ ಕೆಲ ರಾಜಕಾರಣಿಗಳು ಮತ್ತು ಮಠಾಧೀಶರು ಕುತಂತ್ರಿಗಳಾಗಿದ್ದಾರೆ,ಒಂದು ವೇಳೆ ಸರ್ಕಾರ ವರದಿಯನ್ನ ಜಾರಿ ಮಾಡಿದ್ರೆ ಅದರ ಕಹಿ ಸರ್ಕಾರ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ

Top