ಲಾರಿ ಡಿಕ್ಕಿ ಚಿರತೆ,ನಾಯಿ ಸಾವು

ನಾಯಿಯನ್ನು ಹೊತ್ತೊಯ್ಯುತ್ತಿದ್ದ ಚಿರತೆ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಬಳಿ ನಾಯಿ ಹೊತ್ತೊಯ್ಯುತ್ತಿದ್ದ ಚಿರತೆ ಸಾವನ್ನಪ್ಪಿದೆ. ಶುಕ್ರವಾರ ನಸುಕಿನ ವೇಳೆ ನಾಯಿ ಬೇಟೆಯಾಡಿರುವ ಚಿರತೆ ಅದನ್ನು ಹೊತ್ತು ರಸ್ತೆ ದಾಟುವಾಗ ಲಾರಿಯೊಂದು ವೇಗವಾಗಿ ಬಂದ ಪರಿಣಾಮ ಸುಮಾರು 100 ಮೀಟರ್ ದೂರದಲ್ಲಿ ನಾಯಿ ಸತ್ತು ಬಿದ್ದಿದೆ. ರಸ್ತೆ ಪಕ್ಕದಲ್ಲಿ ಚಿರತೆ ಒದ್ದಾಡಿ ಮೃತಪಟ್ಟಿದೆ. ಬೆಳಗಿನ ಜಾವ ರಸ್ತೆ ಪಕ್ಕದಲ್ಲಿ ಸತ್ತು ಬಿದ್ದ ಚಿರತೆಯನ್ನು ಕಂಡು ಬೆಚ್ಚಿ ಬಿದ್ದ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಭೇಟಿ ನೀಡಿದಾಗ ಅಪಘಾತದಿಂದ ನಡೆದ ಘಟನೆ ಎಂದು ತಿಳಿಸಿದ್ದಾರೆ. ಹೇಮಗುಡ್ಡದ ಗುಡ್ಡ ಗಾಡು ಪ್ರದೇಶದಲ್ಲಿ ಚಿರತೆಗಳು ಹೆಚ್ಚು ವಾಸವಾಗಿದ್ದು ಗ್ರಾಮದಲ್ಲಿ ಈಗ ಭಯದ ವಾತಾವರಣ ನಿರ್ಮಾಣವಾಗಿದೆ.

Please follow and like us:
error