ಲಾಕ್‌ಡೌನ್ ಸಡಿಲು, ಕೆಲವು ಅಂಗಡಿ-ಮುಗ್ಗಟ್ಟು ಓಪನ್

ಹೊಸದಿಲ್ಲಿ, ಮೇ 4: ದೇಶದ ಕೆಲವು ರಾಜ್ಯಗಳಲ್ಲಿ ಸುರಕ್ಷಿತ ಅಂತರ ಹಾಗೂ ಎಲ್ಲ ಸುರಕ್ಷತಾ ಮಾರ್ಗಸೂಚಿ ಪಾಲಿಸುವುದರೊಂದಿಗೆ ಲಾಕ್‌ಡೌನ್ ಸಡಿಸಲಾಗಿದ್ದು, ಸ್ವತಂತ್ರ ಮದ್ಯದಂಗಡಿಯನ್ನು ತೆರೆಯಲು ಅವಕಾಶ ನೀಡಲಾಗಿದೆ. ಮಾರುಕಟ್ಟೆ ಪ್ರದೇಶದಲ್ಲಿರುವ ಮದ್ಯದಂಗಡಿಗೆ ಅವಕಾಶ ನೀಡಲಾಗಿಲ್ಲ.

ಕೋವಿಡ್-19 ಪ್ರಕರಣವಿಲ್ಲದ ಹಸಿರು ವಲಯದಲ್ಲಿ ಬೆಳಗ್ಗೆ 7ರಿಂದ ಸಂಜೆ 7ರ ತನಕ ಕಾರು ಅಥವಾ ದ್ವಿಚಕ್ರ ವಾಹನ ಸಂಚಾರಕ್ಕೆ ಅನುವು ನೀಡಲಾಗಿದೆ. ಅಗತ್ಯ ಸೇವೆಗಳು ರಾತ್ರಿ 7ರ ಬಳಿಕವೂ ಲಭ್ಯವಿರಲಿದೆ.

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸ್ಟೇಶನರಿ ಶಾಪ್‌ಗಳು, ಸ್ವತಂತ್ರ ಅಂಗಡಿಗಳು ಹಾಗೂ ನೆರೆಯ ಅಂಗಡಿಗಳು ಹಾಗೂ ವಸತಿಪ್ರದೇಶದಲ್ಲಿನ ಅಂಗಡಿಗಳು ಹಾಗೂ ಅನಗತ್ಯ ಸೇವೆಗಳ ಅಂಗಡಿಗಳ ಬಾಗಿಲು ತೆರೆಯಲು ಅವಕಾಶ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಕಂಟೈನ್‌ಮೆಂಟ್ ಪ್ರದೇಶ ಹೊರತುಪಡಿಸಿ ಎಲ್ಲ ಕೊರೋನವೈರಸ್ ವಲಯದಲ್ಲಿ ಕೆಲವು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಸ್ವತಂತ್ರ ಮದ್ಯದ ಅಂಗಡಿಗಳು, ಕನಿಷ್ಠ ಇಬ್ಬರು ಪ್ರಯಾಣಿಕರಿಗೆ ಕ್ಯಾಬ್‌ಗಳು ಹಾಗೂ ಅಗತ್ಯ ವಸ್ತುಗಳಿಗೆ ಇ-ಕಾಮರ್ಸ್ ಸರಬರಾಜಿಗೆ ಅವಕಾಶ ನೀಡಲಾಗಿದೆ.

ಉತ್ತರಪ್ರದೇಶದಲ್ಲಿ ಲಿಕ್ಕರ್ ಶಾಪ್ ಹಾಗೂ ಕೈಗಾರಿಕೆಗಳ ತೆರವಿಗೆ ಅನುಮತಿ ನೀಡಲಾಗಿದೆ.ಹಸಿರುವಲಯಗಳಲ್ಲಿ ಬಸ್ ಹಾಗೂ ಕ್ಯಾಬ್‌ಗಳು ಶೇ.50ರಷ್ಟು ಸಾಮರ್ಥ್ಯದೊಂದಿಗೆ ಪ್ರಯಾಣಿಕರನ್ನು ಸಾಗಿಸಬಹುದು.

ಕೇರಳದಲ್ಲಿ ಸರಕಾರಿ ಕಚೇರಿಯ ಎ ಹಾಗೂ ಬಿ ದರ್ಜೆ ಉದ್ಯೋಗಿಗಳು ಶೇ.50ರಷ್ಟು ಹಾಗೂ ಸಿ ದರ್ಜೆ ಉದ್ಯೋಗಿಗಳು ಶೇ.33ರಷ್ಟು ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಹಸಿರು ವಲಯಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 7:30ರ ತನಕ ವಾರದ ಆರು ದಿನಗಳ ಕಾಲ ಅಂಗಡಿಗಳು ಓಪನ್ ಇರಲಿವೆ.

Please follow and like us:
error