ಲಾಕ್‌ಡೌನ್ ; ಆಹಾರ ಕಿಟ್‌ಗಳ ವಿತರಣೆ ಕಾರ್ಯಕ್ಕೆ ಸಂಸದ ಹಾಗೂ ಶಾಸಕರಿಂದ ಚಾಲನೆ


ಕೊಪ್ಪಳ ಮೇ.30: ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾದ ವಿವಿಧ ಕಂಪನಿಗಳು ನೀಡಿರುವ ಆಹಾರ ಕಿಟ್‌ಗಳನ್ನು ವಿತರಣೆ ಮಾಡುವ ಕಾರ್ಯಕ್ಕೆ ಸಂಸದ ಕರಡಿ ಸಂಗಣ್ಣ ಹಾಗೂ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಕೋವಿಡ್-19ರ ಸಂಬAಧ ದೇಣಿಗೆ ರೂಪದಲ್ಲಿ ಸ್ವೀಕೃತವಾಗಿರುವ ಆಹಾರ ಕಿಟ್‌ಗಳನ್ನು ನಿರ್ಗತಿಕರು/ ಕಡುಬಡವರಿಗೆ ಪೂರೈಸುವ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಮ್ಮಿಕೊಂಡಿದ್ದು, ವಾಹನದ ಮೂಲಕ ಇಂದಿನಿAದ (ಮೇ.01ರಿಂದ) ಕಿಟ್‌ಗಳನ್ನು ಹಂಚಿಕೆ ಮಾಡಲಾಗುವುದು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ದರಾಮೇಶ್ವರ, ಕೊಪ್ಪಳ ತಹಶೀಲ್ದಾರ ಜೆ.ಬಿ. ಮಜ್ಜಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾದರಿ ಹ್ಯಾಂಡ್‌ವಾಷ್;
ಸೊಂಕು ನಿರೋಧಕ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕೊಪ್ಪಳ ನಗರಸಭೆ ವತಿಯಿಂದ ತಯಾರಿಸಲಾದ “ಮಾದರಿ ಹ್ಯಾಂಡ್‌ವಾಷ್” ಘಟಕದಲ್ಲಿ ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಸ್ಯಾನಿಟೈಸರ್‌ದಿಂದ ತಮ್ಮ ಕೈಗಳನ್ನು ತೊಳೆದುಕೊಂಡರು. ಇಂತಹ ಮಾದರಿ ಘಟಕಗಳ ವ್ಯವಸ್ಥೆಯನ್ನು ಪ್ರತಿಯೊಂದು ಕಚೇರಿಗಳಲ್ಲಿ ಮಾಡುವಂತೆ ತಿಳಿಸಿದರು.
ಕೋವಿಡ್-19 ಸೊಂಕು ಹರಡದಂತೆ ಮುಂಜಾಗೃತಾ ಕ್ರಮವಾಗಿ ಮೇ. 03 ರವರೆಗೆ ರಾಜ್ಯಾದ್ಯಂತ ಲಾಕ್‌ಡೌನ್ ಆದೇಶ ಹೊರಡಿಸಲಾಗಿರುತ್ತದೆ. ಈ ಸಮಯದಲ್ಲಿ ದಿನಗೂಲಿ ಆಧಾರದ ಮೇರೆಗೆ ದುಡಿಯುತ್ತಿರುವ ಕಡುಬಡವರು ಹಾಗೂ ನಿರ್ಗತಿಕರಿಗೆ ಆಹಾರದ ಕೊರತೆ ಉಂಟಾಗಿದೆ. ಈಗಾಗಲೇ ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಕರಿಗೆ, ಅಧಿಸೂಚಿತ ಸಂಸ್ಥೆಗಳ ದೇವಸ್ಥಾನದ ಅರ್ಚಕರುಗಳಿಗೆ ಭಾರತ ಆಹಾರ ನಿಗಮದ ಹಮಾಲರಿಗೆ, ಮಂಗಳ ಮುಖಿಯರಿಗೆ, ದೇವದಾಸಿ ಕುಟುಂಬಗಳಿಗೆ, ಲೈಂಗಿಕ ಕಾರ್ಯಕರ್ತೆಯರಿಗೆ ನೀಡಲಾಗಿರುತ್ತದೆ. ಅಂತಹ ವ್ಯಕ್ತಿಗಳು ಮತ್ತು ಕುಟುಂಬಗಳನ್ನು ತಾಲ್ಲೂಕುವಾರು ಗುರುತಿಸಿದ್ದು, ಜಿಲ್ಲಾ ಮಟ್ಟದಲ್ಲಿ ವಿವಿಧ ಕಂಪನಿಗಳು ದೇಣಿಗೆ ರೂಪದಲ್ಲಿ ಒಟ್ಟು 6000 ಆಹಾರ ಕಿಟ್‌ಗಳನ್ನು ನೀಡಿರುತ್ತಾರೆ. ಈ ಪೈಕಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ತಲಾ 1000 ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ 1000 ಕಿಟ್‌ಗಳನ್ನು ಜಿಲ್ಲಾಡಳಿತದ ವತಿಯಿಂದ ಹಂಚಿಕೆಯನ್ನು ಮಾಡಲಾಗುವುದು.

ಕಿಟ್‌ಗಳನ್ನು ಹಂಚಿಕೆ ಮಾಡಲು ಸೂಕ್ತ ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾದ ಕಿಟ್‌ಗಳ ಬಗ್ಗೆ ಸಂಬAಧಪಟ್ಟ ಶಾಸಕರ ಗಮನಕ್ಕೆ ತಂದು ಅವರ ಸಕ್ಷಮದಲ್ಲಿ ಅರ್ಹ ವ್ಯಕ್ತಿಗಳಿಗೆ ವಿತರಿಸುವ ವ್ಯವಸ್ಥೆಯನ್ನು ಆಯಾ ತಹಶೀಲ್ದಾರರು ಅಗತ್ಯ ಕ್ರಮ ಕೈಗೊಳ್ಳಬೇಕು. ಆಹಾರ ಕಿಟ್‌ಗಳನ್ನು ವಿತರಿಸುವಾಗ ಸೊಂಕು ನಿರೋಧಕ ಕ್ರಮಗಳನ್ನು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು. ಸಾಂಕೇತಿಕವಾಗಿ ಶಾಸಕರ ಸಮಕ್ಷಮದಲ್ಲಿ ವಿತರಿಸಿ ಉಳಿದ ಕಿಟ್‌ಗಳನ್ನು ವ್ಯವಸ್ಥಿತವಾಗಿ ದೂರುಗಳಿಗೆ ಅವಕಾಶ ಇರದಂತೆ ಸ್ವೀಕೃತಿಯನ್ನು ಪಡೆಯಬೇಕು. ಈ ಸಮಯದಲ್ಲಿ ಯಾವುದಾದರೂ ಉಲ್ಲಂಘನೆಗಳು ಕಂಡುಬAದಲ್ಲಿ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

Please follow and like us:
error