ಲಕ್ಕಿ ಮನೆಯಲ್ಲಿ ಕರಡಿ ಸಂಗಣ್ಣ : ಅದೃಷ್ಟ ಕೈ ಹಿಡಿಯುತ್ತಾ?

ಕೊಪ್ಪಳ : ಅಂತೂ ಇಂತು ಎಲ್ಲ ಗೊಂದಲಗಳನ್ನು ಮೀರಿ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೇಟ್ ಪಡೆಯುವಲ್ಲಿ ಕರಡಿ ಸಂಗಣ್ಣ ಯಶಸ್ವಿಯಾಗಿದ್ದಾರೆ. ಟಿಕೇಟ್ ಪಡೆದಕೊಂಡ ಕರಡಿ ಸಂಗಣ್ಣ ವಾಪಸ್ ಕೊಪ್ಪಳಕ್ಕೆ ಬಂದಿದ್ದು ಕಿನ್ನಾಳ ರಸ್ತೆಯ ಈ ಲಕ್ಷ್ಮೀ ನಿವಾಸ ಮನೆಗೆ. ಹೊಸಪೇಟೆ ರಸ್ತೆಯ ತಮ್ಮ ಮನೆಗೆ ಹೋಗದೇ ತಂಗಿಯ ಮನೆಗೆ ಸಂಗಣ್ಣನವರು ಬಂದಿದ್ದೇಕೆ ? ಅದಕ್ಕೂ ಕಾರಣವಿದೆ. ಈ ಮನೆಗೆ ಸಂಗಣ್ಣ ಕರಡಿಯವರ ಲಕ್ಕಿ ಮನೆ ಎನ್ನಲಾಗುತ್ತಿದೆ. ಕಳೆದ ಅಷ್ಟೂ ಎಲೆಕ್ಷನ್ ಗಳಲ್ಲಿ ಗೆಲುವು ಸಾಧಿಸಿದ್ದು ಮನೆಯಿಂದಲೇ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಟಿಕೇಟ್ ತರಲು ಬೆಂಗಳೂರಿಗೆ ಹೋಗುವ ದಿನ ಸಹ ಸಂಗಣ್ಣನವರು ಇದ್ದಿದ್ದು ಇದೇ ಮನೆಯಲ್ಲಿಯೇ. ಟಿಕೇಟ್ ತಂದ ಮೇಲೆ ನೇರವಾಗಿಯೇ ಈ ಮನೆಗೆ ಬಂದಿದ್ದಾರೆ ಎಲ್ಲ ಅಭಿಮಾನಿಗಳನ್ನು ಭೇಟಿಯಾಗಿ ಗವಿಮಠಕ್ಕೆ ತೆರಳಿದರು.

ಹತ್ತಾರು ಗೊಂದಲಗಳ ನಂತರ ಟಿಕೇಟ್ ಪಡೆದು ಬಂದಿರುವ ಸಂಗಣ್ಣ ಕರಡಿಯವರಿಗೆ ಈ ಮನೆ ಮತ್ತೊಮ್ಮೆ ಲಕ್ ತರುತ್ತಾ ? ಲಕ್ಷ್ಮೀ ನಿವಾಸ ಮತ್ತೊಮ್ಮೆ ಸಂಗಣ್ಣ ಕರಡಿಗೆ ಲಕ್ಕಿಯಾಗುತ್ತಾ ? ಅದೃಷ್ಟ ಕೈ ಹಿಡಿಯುತ್ತಾ ?

Please follow and like us:
error