ಲಂಚ ನೀಡದ ವಿಕಲಚೇತನನ ಮಾಶಾಸನ ಮಾಯ !

ಮಾನವೀಯತೆ ಮೆರೆದ ಡಿಸಿ : ಕ್ರಮದ ಭರವಸೆ

Koppal News ಈ ವ್ಯಕ್ತಿ ಹುಟ್ಟು ವಿಕಲಚೇತನ. ಕೈಕಾಲು ಎರಡು ಸ್ವಾಧೀನವಿಲ್ಲ. ಯಾರಾದ್ರೂ ಆಸರೆ ಆಗಬೇಕು. ಕಡು ಬಡತನದ ಕುಟುಂಬ. ವಿಕಲಚೇತನ ವ್ಯಕ್ತಿಗೆ ನೆರವಾಗಿದ್ದು ಸರ್ಕಾರ ನೀಡುವ ಮಸಾಶನ. ಕಳೆದ ೧೦ ತಿಂಗಳಿಂದ ಇದು ಬಂದಿಲ್ಲ. ಕಾರಣ ಪೋಸ್ಟ್ ಮಾನ್ ಗೆ ೫೦ ರೂ ಕಮಿಷನ್ ಕೊಟ್ಟಿಲ್ಲ ಅನ್ನೋ ಆರೋಪ ಕುಟುಂಬದ್ದು. ಇದಕ್ಕಾಗಿ ಆತನ ಕುಟುಂಬಸ್ಥರು ಜಿಲ್ಲಾಧಿಕಾರಿಗಳ ಮುಂದೆ ೫೦ ರೂ. ಕೊಡ್ತಿವಿ ದಯವಿಟ್ಟು ತಿಂಗಳಿಗೆ ಬರುವ ಮಸಾಶನ ಬರುವಂತೆ ಮಾಡಿ ಸಾರ್ ಅಂತ ಕಣ್ಣೀರಿಟ್ಟರು. ಈ ಮಾತನ್ನು ಕೇಳಿದ ಜಿಲ್ಲಾಧಿಕಾರಿ ಸುನೀಲ್ ಕುಮಾರ ಒಂದು ಕ್ಷಣ ಒಳಗೆ ನೊಂದುಕೊಂಡು ಅಧಿಕಾರಿಗಳ ವಿರುದ್ಧ ಗರಂ ಆದ್ರೂ. ಹೌದು ! ಇಂಥ ಮನಕಲಕುವ ಘಟನೆ ನಡೆದಿದ್ದು, ಕೊಪ್ಪಳದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ. ಪೋಸ್ಟ್ ಮಾನ್ ಒಬ್ಬ ೫೦ ರೂ ಕಮಿಷನ್ ಕೊಟ್ಟಿಲ್ಲ ಅಂತ ಮಸಾಶನ ತಲುಪಿಸುವುದನ್ನೇ ನಿಲ್ಲಿಸಿಬಿಟ್ಟಿದ್ದಾನೆ ಅಂತ ಕುಟುಂಬಸ್ಥರು ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು. ಇದಕ್ಕಾಗಿ ಕೊಪ್ಪಳದ ಹಿರೇಬೊಮ್ಮನಾಳನಿಂದ ವಿಕಲಚೇತನ ಬಸವರಾಜ ದಲಾಲ ಅವರ ತಾಯಿ ಹನುಮಮ್ಮ ಹಾಗು ಅಳಿಯ ನೀರುಪಾದಪ್ಪ ನ್ಯಾಯಕ್ಕಾಗಿ ಡಿಸಿ ಬಳಿ ಬಂದಿದ್ದರು.
ಡಿಸಿ ಕಚೇರಿ ಒಳಗಡೆ ವಿಕಲಚೇತನ ಬಸವರಾಜರನ್ನು ಹೊತ್ತುಕೊಂಡು ಬಂದ ದೃಶ್ಯ ಅಲ್ಲಿರುವ ಎಲ್ಲರನ್ನು ಮನಕಲುಕುವಂತೆ ಮಾಡಿತು.ಮಾಸಾಶನ ಕೊಡಿಸುವಂತೆ ಡಿಸಿಗೆ ಅಂಗಲಾಚಿ ಬೇಡಿದರು. ಕುಟುಂಬದ ಸ್ಥತಿಯನ್ನು ಕಂಡು ಕೂಡಲೇ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಪೋಸ್ಟ್ ಮಾನ್ ವಿರುದ್ಧ ಕ್ರಮಕೈಗೊಳ್ಳುವುದಾಗಿ ಡಿಸಿ ಭರವಸೆ ನೀಡಿದ್ದಾರೆ. ಮಸಾಶನ ನಿಂತಿರುವುದಕ್ಕೆ ಅಧಿಕಾರಿಗಳಿಗೆ ಮಾಹಿತಿ ಕೇಳಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ವಿಕಲಚೇತನರ ತ್ರೀಚಕ್ರ ವಾಹನಕ್ಕಾಗಿ ಅಧಿಕಾರಿಯೊಬ್ಬ ೫೦೦೦ ಬೇಡಿಕೆಯಿಟ್ಟು ಅಮಾನತ್ತು ಆಗಿದ್ದಾನೆ. ಈಗ ಅಂಚೆ ಕಚೇರಿ ಪೋಸ್ಟ್ ಮಾನ್ ವಿಕಲಚೇತನ ಬಸವರಾಜಗೆ ಮಸಾಶನ ತಲುಪಿಸಲು ೫೦ ರೂ ಬೇಡಿಕೆಯಿಟ್ಟಿರುವುದು ಎಷ್ಟು ಸರಿ? ಸರ್ಕಾರಿ ಉದ್ಯೋಗದಲ್ಲಿದ್ದುಕೊಂಡು ವಿಕಲಚೇತನರ ಹಣದಲ್ಲಿಯೂ ಕಮಿಷನ್ ಕೇಳುವ ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ.

Please follow and like us:
error