ರೋಟರಿ ಸದಸ್ಯರು ವಿಶ್ವದಲ್ಲಿಯೇ ವಿಶಿಷ್ಟ ಸೇವಾ ಮನೋಭಾವದವರು : ಮುನಿಗಿರೀಶ

ರೋಟರಿ ಕ್ಲಬ್ ನೂತನ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ
ಕೊಪ್ಪಳ, ಸೆ. ೨೯: ರೋಟರಿ ಸಂಸ್ಥೆಯ ಸದಸ್ಯರು ವಿಶ್ವದಲ್ಲಿಯೇ ವಿಶಿಷ್ಟ ಸೇವಾ ಮನೋಭಾವದವರು ಎಂದು ರೋಟರಿ ಜಿಲ್ಲಾ ಗರ್ವನರ್ ಕೆ. ಮುನಿ ಗಿರೀಶ ಹೇಳಿದರು. ಅವರು ನಗರದ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೊಪ್ಪಳ ರೋಟರಿ ಕ್ಲಬ್ ಅಧಿಕೃತ ಭೇಟಿ ಮತ್ತು ನೂತನ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಿ ಬ್ಯಾಡ್ಜ್ ಹಾಕುವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕೊಪ್ಪಳ ರೋಟರಿ ಕ್ಲಬ್ ಕಳೆದ ಮೂರು ತಿಂಗಳಲ್ಲಿ ಉತ್ತಮ ಸೇವೆ ಮಾಡಿದೆ, ರೋಟರಿ ಸದಸ್ಯರು ಅಂದರೆ ತನು-ಮನ-ಧನದಿಂದ ನಿಸ್ವಾರ್ಥ ಸೇವೆ ಮಾಡುವವರು ಎಂದೇ ಅರ್ಥ, ವಿಶ್ವದಲ್ಲಿಯೇ ಎಲ್ಲಿಯೂ ಇದುವರೆಗೆ ರೋಟರಿ ತಪ್ಪು ಲೆಕ್ಕನೀಡಿಲ್ಲ, ಇಲ್ಲಿರುವ ಸದಸ್ಯರು ಮನಸ್ಪೂರ್ತಿಯಿಂದ ಸೇವೆಗೆ ಬಂದವರು, ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದರೂ ಸಾಮಾಜಿಕ ಜೀವನದ ಭಾಗವಾದವರು ಅದಕ್ಕಾಗಿ ರೋಟರಿ ಪೋಲಿಯೋ ನಿರ್ಮೂಲನೆಯ ದೊಡ್ಡ ಭಾಗಿದಾರ ಸಂಸ್ಥೆಯಾಗಿ ನಿರಂತರ ಸೇವೆ ಮಾಡುತ್ತ ಬಂದಿದೆ ಎಂದರು.
೩೧೬೦ ರೋಟರಿ ಜಿಲ್ಲಾ ಅಸಿಸ್ಟಂಟ್ ಗರ್ವನರ್ ಅಶ್ವಿನ್ ಕೋತಂಬ್ರಿ ಅವರು ಮಾತನಾಡಿ, ಕೊಪ್ಪಳದ ಪ್ರಗತಿ ಇನ್ನಷ್ಟು ಹೆಚ್ಚಲಿ ಸದಸ್ಯರ ಸಂಖ್ಯೆ ನೂರಕ್ಕೆ ಬರುವ ಗುರಿ ಶ್ಲಾಘನೀಯ ಹಾಗೂ ಕೊಪ್ಪಳದಿಂದ ರೋಟರಿ ಇಂಟರ್‌ನ್ಯಾಷನಲ್ ಫೌಂಡೇಷನಗೆ ದೊಡ್ಡ ದಾನಿಗಳನ್ನು ನೀಡಬೇಕು ಎಂದು ಕೋರಿದರು.
ರೋಟರಿ ಕ್ಲಬ್ ಅಧ್ಯಕ್ಷ ಸಿದ್ದಲಿಂಗಯ್ಯ ಎಸ್. ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ|| ಚಂದ್ರಶೇಖರ್ ಕರಮುಡಿ ಸ್ವಾಗತಿಸಿದರು, ನಿವೃತ್ತ ಪ್ರಾಂಶುಪಾಲ ಶರಣಪ್ಪ ನಿರೂಪಿಸಿದರು. ಡಾ|| ಶ್ರೀನಿವಾಸ ಹ್ಯಾಟಿ ವಂದಿಸಿದರು, ವೇದಿಕೆಯಲ್ಲಿ ಮಾಜಿ ಜಿಲ್ಲಾ ಗವರ್ನರ್ ಡಾ|| ಕೆ. ಜಿ. ಕುಲಕರ್ಣಿ, ೩೧೬೦ ರೋಟರಿ ಜಿಲ್ಲಾ ಕಾರ್ಯದರ್ಶಿ ದಯಾಕರ್ ರಡ್ಡಿ ಇದ್ದರು. ನೂತನ ಸದಸ್ಯರಾಗಿ ಸಂತೋಷ ದೇಶಪಾಂಡೆ, ಮಂಜುನಾಥ ಜಿ. ಗೊಂಡಬಾಳ, ಮಂಜುನಾಥ ಸಾಲಿಮಠ ಇತರರು ಸದಸ್ಯತ್ವ ಪಡೆದರು. ಕಾರ್ಯಕ್ರಮದಲ್ಲಿ ರೋಟರಿ ಮತ್ತು ಇನ್ನರ್ ವ್ಹೀಲ್ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು.

Please follow and like us:
error