ರೋಟರಿ ಕ್ಲಬಿನ ನೂತನ ಅದ್ಯಕ್ಷರಾಗಿ ಸಿದ್ದಲಿಂಗಯ್ಯ ಹಿರೇಮಠ

ಕೊಪ್ಪಳ, 09-ಹಿಂದುಳಿದ ಜಿಲ್ಲೆಯಾದ ಕೊಪ್ಪಳದಲ್ಲಿ ಅಂತರಾಷ್ಟ್ರೀಯsಸಂಸ್ಥೆಯಾದ ರೋಟರಿ ಮೂಲಕ ಉತ್ತಮವಾದ ಸೇವೆ ಸಲ್ಲಿಸುವ ಕನಸು ಹೊಂದಿರುವುದಾಗಿ ರೋಟರಿ ಕ್ಲಬಿನ ನೂತನ ಅದ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.
ಅವರು ಇತೀಚಿಗೆ ನಗರದ ಹೊರವಲಯದಲ್ಲಿ ಜರುಗಿದ ರೋಟರಿ ಕ್ಲಬ್ ಅದ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವಿಕರಿಸಿ ಮಾತನಾಡುತ್ತಿದ್ದರು.
ನಮ್ಮ ಭಾಗದ ಅಭಿವೃದ್ದಿಗೆ ಶಿಕ್ಷಣವೇ ಪರಿಹಾರವಾಗಿದೆ. ಶಕ್ಷಣ ಕಲಿಕಾ ಸಾಮಾಗ್ರಿ ಹಾಗೂ ಮಾದರಿ ಶಕ್ಷಣ ಸಂಸ್ಥೆಗಳನ್ನು ಸೇರಿದಂತೆ ಅಗತ್ಯೆ ಸೇವೆಗೆ ಅಂತರಾಷ್ಟ್ರೀಯ ಸಂಸ್ಥೆ ರೋಟರಿ ಮೂಲಕ ಹೆಚ್ಚಿನ ಅನುದಾನ ತಂದು ವಿದ್ಯಾರ್ಥಿಗಳ ಬದುಕು ಹಸನಾಗಲು ಶ್ರಮಿಸುವುದಾಗಿ ತಿಳಿಸಿದರು.
ಸಮಾಜ ಸೇವೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ರೋಟರಿ ಕ್ಲ್‍ಬಿನ ಅದ್ಯಕ್ಷನಾಗಿರುವುದು ಸುವರ್ಣ ಅವಕಾಶವಾಗಿದ್ದು. ಹಿಂದುಳಿದ ಪ್ರದೇಶವಾದ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸ್ವಚ್ಚ ಭಾರತದ ಅನುಷ್ಠಾನ ಸೇರಿದಂತೆ ಸಮಾಜಿಕ ಸೇವೆಯಲ್ಲಿ ತೋಟಗಿಸಿಕೊಳ್ಳುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಜಿಲ್ಲಾ ಗವರ್ನರ ವಿ ಆನಂದರಾವ್ ಮಾತನಾಡಿ ರೋಟರಿ ಕ್ಲ್‍ಬ್‍ನಿಂದ ಶಿಕ್ಷಣ ಆರೋಗ್ಯೆ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ತೋಡಗಿಸಿ ಕೊಂಡಿದೆ ಕೊಪ್ಪಳದಲ್ಲಿ ಸಹ ರೋಟರಿ ಕ್ಲ್‍ಬ್ ಅತ್ಯಂತ ಕೀಯಾಶಿಲವಾಗಿಕೆಲಸ ನಿರ್ವಹಿಸುತ್ತಿರುವುದು ಪ್ರಶಂಶನಿಯ ಎಂದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಡಾ.ಕೆ.ಜಿ.ಕುಲಕರ್ಣಿ ಲಕ್ಷ್ಮಿಕಾಂತ ಗುಡಿ.ಮಂಜುನಾಥ ಅಂಗಡಿ ಡಾ. ಶ್ರೀನಿವಾಸ ಹ್ಯಾಟಿ. ಡಾ.ಸಿ.ಎಸ್. ಕರಮುಡಿ. ನೀಲಪ್ಪ ಬಾವಿಕಟ್ಟಿ. ಸಂತೋಷ ದೇಶಪಾಂಡೆ. ಬಸವರಡ್ಡಿ ಹಳ್ಳಿಕೆರಿ,ಹುಲಗಪ್ಪ ಕಟ್ಟಿಮನಿ ಸೇರಿದಂತೆ ಅನೇಕರು ಇದ್ದರು.