ರೋಟರಿಯಿಂದ ನಗರಸಭೆ ಕಾರ್ಮಿಕರಿಗೆ ಉಚಿತ ನೇತ್ರ ತಪಾಸಣ ಶಿಬಿರ


ಸಾಮಾಜಿಕ ಕಾಳಜಿ ಹೊಂದುವದು ಪ್ರತಿಯೊಬ್ಬರ ಜವಾಬ್ದಾರಿ : ಪಾಟೀಲ

ಕೊಪ್ಪಳ, ಆ. : ನಮ್ಮ ನಗರದ ಹೊಲಸು ತೆಗೆದು ತಮ್ಮ ಆರೋಗ್ಯವನ್ನು ಗಮನಿಸದೆ ಪರಿಸರವನ್ನು ಶುಚಿಯಾಗಿ ಇಡುವ ಪೌರಕಾರ್ಮಿಕರ ಕಾಳಜಿ ಎಲ್ಲರ ಜವಾಬ್ದಾರಿ ಎಂದು ನಗರಸಭೆ ಪೌರಾಯುಕ್ತ ಸುನೀಲ್ ಪಾಟೀಲ ಹೇಳಿದರು.
ಅವರು ನಗರಸಭೆಯಲ್ಲಿ ಕೊಪ್ಪಳ ರೋಟರಿ ಕ್ಲಬ್, ವಾಸನ್ ನೇತ್ರ ಆಸ್ಪತ್ರೆ ಹುಬ್ಬಳ್ಳಿ, ವಿನೂತನ ಶಿಕ್ಷಣ ಸೇವಾ ಸಂಸ್ಥೆ ಹಾಗೂ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಆಶ್ರಯದಲ್ಲಿ ನಗರಸಭೆ ಪೌರಕಾರ್ಮಿಕರು ಮತ್ತು ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಕೊಪ್ಪಳ ರೋಟರಿ ಕ್ಲಬ್ ಮತ್ತು ಇತರ ಸಂಘಟನೆಗಳ ಸ್ವಯಂಸ್ಪೂರ್ತಿದಾಯಕ ಕೆಲಸ ಮೆಚ್ಚುವಂಥಹದು, ಇದೇ ರೀತಿ ಎಲ್ಲರೂ ನಮ್ಮ ಪೌರಸೇವಕರನ್ನು ಗೌರವದಿಂದ ಕಾಣಬೇಕು ಎಂದು ಮನವಿ ಮಾಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಸಿದ್ದಲಿಂಗಯ್ಯ ಎಸ್. ಹಿರೇಮಠ ಅವರ ಅಧ್ಯಕ್ಷತೆವಹಿಸಿ ಮಾತನಾಡಿ, ರೋಟರಿ ಮತ್ತು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬರುವ ದಿನಗಳಲ್ಲಿ ಕೊಪ್ಪಳದಲ್ಲಿ ಪೂರ್ಣ ದೇಹ ಮತ್ತು ಸಾಮಾನ್ಯ ಪರೀಕ್ಷಾ ಶಿಬಿರವನ್ನು ಹಮ್ಮಿಕೊಂಡು, ಮನುಷ್ಯನ ಎಲ್ಲಾ ರೀತಿಯ ಕಾಯಿಲೆಗಳ ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವ ವಿನೂತನ ರೀತಿಯ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗುವದು ಎಂದರು.
ಕಾರ್ಯಕ್ರಮದಲ್ಲಿ ಜೆಇ ಬಸವರಾಜ ಬಂಡಿವಡ್ಡರ್, ಪರಿಸರ ಅಧಿಕಾರಿ ಅಶೋಕ ಸಜ್ಜನ್, ಹಿರಿಯ ಆರೋಗ್ಯ ನಿರೀಕ್ಷಕಿ ಜಯಶೀಲ ಬಂಡಿಹಾಳ, ಕಿರಿಯ ಆರೋಗ್ಯ ನಿರೀಕ್ಷಕ ರಾಘವೇಂದ್ರ ಚವ್ಹಾಣ, ಕಿರಿಯ ಆರೋಗ್ಯ ನಿರೀಕ್ಷಕ ಲಾಲಸಸಾಬ ಮನಿಯಾರ ಇತರರು ಇದ್ದರು. ಮಂಜುನಾಥ ಜಿ. ಗೊಂಡಬಾಳ ಸ್ವಾಗತಿಸಿ, ನಿರೂಪಿಸಿದರು.

Please follow and like us:
error

Related posts