ರೈಲ್ವೆಗೆ ಕೇಂದ್ರದ ಹೆಚ್ಚು ಅನುದಾನದಿಂದ ಅಭಿವೃದ್ಧಿ ಸಾಧ್ಯ : ಕರಡಿ ಸಂಗಣ್ಣ


ಕೊಪ್ಪಳ ಜ. 21 (ೆ): ರೈಲ್ವೆ ಇಲಾಖೆಗೆ ಕೇಂದ್ರ ಸರ್ಕಾರವು ಹೆಚ್ಚು ಅನುದಾನವನ್ನು ನೀಡಿದ್ದು, ಇದರಿಂದ ರೈಲ್ವೆಯು ಅಭಿವೃದ್ಧಿಯಾಗಲು ಸಾಧ್ಯವಾಗಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.
ತಾಲೂಕಿನ ಮುನಿರಾಬಾದ್ (ಹುಲಿಗಿ) ರೈಲು ನಿಲ್ದಾಣದಲ್ಲಿ ಆಯೋಜಿಸಲಾನೈರುತ್ಯ ರೇಲ್ವೆ ಇವರ ವತಿಯಿಂದ ಕೊಪ್ಪಳ-ಗಿಣಿಗೇರಾ-ಮುನಿರಾಬಾದ್ ಜೋಡಿ ಮಾರ್ಗದ ಲೋಕಾರ್ಪಣೆ, ಗಿಣಿಗೇರಾ ಹಾಗೂ ಮುನಿರಾಬಾದ್ ರೈಲು ನಿಲ್ದಾಣಗಳ ನೂತನ ಕಟ್ಟಡ ಉದ್ಘಾಟನೆ, ಗಿಣಿಗೇರಾ ಹಾಗೂ ಮುನಿರಾಬಾದ್ ಪಾದಚಾರಿ ಮೇಲ್ಸೇತುವೆಗಳ ಲೋಕಾರ್ಪಣೆ ಮತ್ತು ಕೊಪ್ಪಳ ರೈಲು ನಿಲ್ದಾಣದ 2ನೇ ಪಾದಚಾರಿ ಮೇಲ್ಸೇತುವೆ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಆರ್ಥಿಕ ಅಭಿವೃದ್ಧಿ ಮೂಲ ರೈಲ್ವೆಯು ಒಂದಾಗಿದ್ದು, ಕೇಂದ್ರ ಸರ್ಕಾರವು ರೈಲ್ವೆ ಇಲಾಖೆಗೆ ಅತೀ ಹೆಚ್ಚು ಅನುದಾನವನ್ನು ನೀಡಿದೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಹತ್ತು ಹಲಾವಾರು ಅಭಿವೃದ್ಧಿ ಕಾರ್ಯಗಳನ್ನು ನೀಡಿದ್ದು, ನಮ್ಮ ಜಿಲ್ಲೆಯಿಂದ ಹಾದು ಹೋದ ಚತುಸ್ಪಥ ರಸ್ತೆ ನಿರ್ಮಾಣ ಯೋಜನೆಯು ಬೃಹತ್ ಯೋಜನೆಯಾಗಿದೆ. ನಮ್ಮ ದೇಶವು ಇಂದು ಹಲವಾರು ದೇಶಗಳನ್ನು ಹಿಂದಿಕ್ಕಿ ಮುಂದೆ ಸಾಗಿದೆ ಅಂದರೆ ಅದು ಪ್ರಧಾನ ನರೇಂದ್ರ ಮೋದಿಯವರು ಕಾರಣ. ಕೇಂದ್ರವು ರೈಲ್ವೆಗೆ ಹೆಚ್ಚಿನ ಅನುದಾನ ನೀಡಿದ್ದರಿಂದ ಇಂದು ದೇಶದಲ್ಲೆಡೆ ಅಭಿವೃದ್ದಿ ಕಾಣುತ್ತೀದೆ. ಕರ್ನಾಟಕ್ಕೂ ಸಹ ಅಪಾರ ರೈಲ್ವೆ ಅನುಧಾನ ನೀಡಿದ್ದಾರೆ. ಎಲ್ಲಾ ಜಿಲ್ಲೆಗಳಿಗೂ ರೈಲ್ವೆ ಸಂಚಾರ ಸರಿಯಾಗಿ ಬಡಜನರಿಗೆ ಸಿಗುತ್ತಿದೆ. ನಮ್ಮ ಕೊಪ್ಪಳ ಜಿಲ್ಲೆಗೆ ಭಾಗ್ಯನಗರ ರೈಲ್ವೆ ಮೇಲ್ಸೆತುವೆ, ಕಿನ್ನಾಳ ರಸ್ತೆಯ ಕೆಳ ಸೇತುವೆ, ಗಿಣಗೇರಾ ಮತ್ತು ಕೊಪ್ಪಳ ನಗರದ ಸ್ವಾಮಿವಿವೇಕಾನಂದ ಶಾಲೆಯ ಹತ್ತಿರವು ರೈಲ್ವೆ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಚಾಲನೆ ನೀಡಿದ್ದು, ಕಿನ್ನಳಾ ರಸ್ತೆಯ ಕೆಳ ಸೇತುವೆ ನಿರ್ಮಾಣದಿಂದಾಗಿ ಕೊಪ್ಪಳದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ. ಅಲ್ಲದೇ ಭಾಗ್ಯನಗರ ಸೇತುವೆಯು ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಗಿಣಿಗೇರಿಯಾ ಸೇತುವೆ ಕಾಮಗಾರಿಯು ಪ್ರಗತಿಯಲ್ಲಿದೆ. ನಮ್ಮ ಜಿಲ್ಲೇಯಲ್ಲಿ ರೈಲ್ವೆ ಸಂಚಾರ ಪೂರ್ಣ ಹಂತಕ್ಕೆ ತಲುಪುತ್ತಿದೆ. ನೂತನವಾಗಿ ಪ್ರಾರಂಭಿಸುವ, ಚಿಕ್ಕಬೆಣಕಲ್ ಮಾರ್ಗದಿಂದ ಗಂಗಾವತಿಗೆ ರೈಲ್ವೇ ಸಂಚಾರ ಕೊನೆಯ ಹಂತಕ್ಕೆ ತಲುಪಿದ್ದು, ಇದೇ ಫೇಬ್ರುವರಿ ತಿಂಗಳಲ್ಲಿ ಸಂಚಾರ ಆರಂಭವಾಗುವುದು ಹಾಗೇ ಇದೇ ತಿಂಗಳ 29 ರಂದು ಜಿಲ್ಲೆಯಲ್ಲಿ ಪಾಸ್‍ಪೋರ್ಟ ಕೇಂದ್ರವನ್ನು ಜಿಲ್ಲಾಧಿಕಾರಿಗಳಿಂದ ಉದ್ಘಾಟನೆಗೊಳ್ಳಲಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.
ಕಾರ್ಯಕ್ರಮದ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಅವರು ಮಾತನಾಡಿ ಜಿಲ್ಲೇಯಲ್ಲಿ ರೈಲ್ವೆ ಅಧಿಕಾರಗಳು ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ರೈಲ್ವೆ ಸಂಪರ್ಕದಿಂದ ಬಡ ಜನರಿಗೆ ಬೇರೆಡೆ ಪ್ರಯಾಣ ಬೆಳೆಸಲು ಸಹಕಾರಿಯಾಗಲಿದೆ. ರೈಲ್ವೆ ಇಲಾಖೆಯ ಹಾಗೂ ಅಧಿಕಾರಿಗಳು ಉತ್ತಮ ಸೇವೆಯನ್ನು ಒದಗಿಸುತ್ತಿದ್ದು, ಜನರೊಂದಿಗೆ ಅಧಿಕಾರಿಗಳ ಒಡನಾಟ ನಿಜಕ್ಕೂ ಹರ್ಷ ತಂದಿದೆ ಎಂದರು.
ಆರ್.ವಿ.ಎನ್.ಎಲ್. ಸಂಸ್ಥೆಯ ಪ್ರಧಾನ ಯೋಜನಾ ವ್ಯವಸ್ಥಾಪಕ ಪಿ.ಕೆ. ಕ್ಷತ್ರೀಯ್ ಅವರು ಮಾತನಾಡಿ, ಅತಿ ಕಡಿಮೆ ಅವಧಿಯಲ್ಲಿ ಸಂಪೂರ್ಣ ಕಾಮಗಾರಿ ಮುಗಿಸಿದ್ದೆವೆ. ಜನರಿಗೆ ರೈಲ್ವೆ ವಿಭಾಗದಿಂದ ಜನರಿಗೆ ಹಲವಾರು ರೀತಿಯಲ್ಲಿ ಸಹಾಯವಾಗುತ್ತದೆ ಎಂದರು.
ಕಾರ್ಯಕ್ರಮದ ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಹುಲಿಗೇಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ, ಜಿ.ಪಂ. ಮಾಜಿ ಅಧ್ಯಕ್ಷ ಜರ್ನಾಧನ್ ಸೇರಿದಂತೆ ಹುಬ್ಬಳಿ ವಿಭಾಗದ ಉಪ ವಿಭಾಗೀಯ ವ್ಯೆವಸ್ಥಾಪಕರು ಹಾಗೂ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error