ರೈತ ಮತ್ತು ಯೋಧ ದೇಶದ ಎರಡು ಕಣ್ಣುಗಳು ಶ್ರೀಹಿರಿಶಾಂತವೀರ ಸ್ವಾಮಿಗಳು.

ಕೊಪ್ಪಳ : ೦೮ – ಕುಕನೂರು ತಾಲೂಕಿನ ಯರೆಹಂಚಿನಾಳ ಗ್ರಾಮದಲ್ಲಿ ಯುಗಾದಿ ಹಬ್ಬ ಮತ್ತು ವಿಶ್ವ ಆರೋಗ್ಯ ದಿಬಾಚರಣೆಯ ಅಂಗವಾಗಿ ಜಿಲ್ಲೆಯ ನಿವೃತ್ತ ಯೋಧರು ಮತ್ತು ರೈತ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಗ್ರಾಮದ ಯುವಬಳಗ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಡಾ. ಹಿರಿಶಾಂತವೀರ ಶ್ರೀಗಳು ಉದ್ಘಾಟಿಸಿ ಯುವ ಸಮೂಹ ಇಂದು ಚಟಕ್ಕೆ ದಾಸರಾಗಿದ್ದರೆ. ಸದೃಡ ದೇಶಕ್ಕಾಗಿ ಕೃಷಿ ಜೀವನ ಅಗತ್ಯವಿದೆ. ರೈತರು ಮತ್ತು ಯೋಧರು ದೇಶದ ಎರಡು ಕಣ್ಣುಗಳೆಂದು ಹೇಳಿದರು. ಇದೇ ವೇಳೆ ಜಿಲ್ಲೆಯ ಪ್ರಗತಿಪರ ರೈತ ರಮೇಶ ಬಳೂಟಗಿ ಮಾತನಾಡಿ ಕಲಿತವರು ಕೃಷಿಯಲ್ಲಿ ದುಡಿಯಬೇಕು ವೈಜ್ಞಾನಿಕ ವೈವಿಧ್ಯಮಯ ಕೃಷಿ ಜೀವನ ಅಗತ್ಯ ನಮ್ಮೆಲ್ಲರ ಆರ್ಥಿಕ ಭದ್ರತೆಗಾಗಿ ಎಂದು ವ್ಯಕ್ತಪಡಿಸಿ ಸಾಕಷ್ಟು ಶ್ರೀಗಂಧದ ಬೆಳೆಯ ಅನುಕೂಲತೆಯನ್ನು ತಿಳಿಸಿಕೊಟ್ಟರು. ಇದೇ ವೇಳೆ ಗ್ರಾಮದ ಜನರಿಗೆ ಆರೋಗ್ಯ ಮತ್ತು ಸ್ವಚ್ಚತ ಬಗ್ಗೆ ಶ್ರೀನಿವಾಸ ಹ್ಯಾಟಿ ಮತ್ತು ಕರಮುಡಿ ಅವರು ಉಪನ್ಯಾಸ ನೀಡಿದರು. ಹಾಗೂ ಜಿಲ್ಲೆಯ ಸಾಧಕರೆಂದು ರಮೇಶ ಬಳೂಟಗಿ, ಬಿ.ಎನ್.ಹೊರಪೇಟಿ, ಮಲ್ಲಿಕಾರ್ಜುನ ಗಡಿಗಿ, ಪ್ರಭು ತಾಳದ ಅವರನ್ನು ಸನ್ಮಾನಿಸಿದರು. ಜಿಲ್ಲೆಯ ನಿವೃತ್ತಿ ಯೋಧರಾದ ಹೇಮಂತಪ್ಪ ಆರೇರ್, ಮುದಿಯಪ್ಪ ಹನಸಿ, ಶಿವಪ್ಪ ರ್ಯಾವಣಕಿ ಹಾಗೂ ನಾಗರಾಜ ಹನಸಿ ಸನ್ಮಾನಿಸಿದರು ಇದೆ ವೇಳೆ ಜೀವನಸಾಬ ಬಿನ್ನಾಳ ಹಾಗೂ ಅವರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದೇ ವೇಳೆ ಸಮಾಜ ಸೇವಕ ಪತ್ರಕರ್ತ ಬಸವರಾಜ ಮರದೂರ, ಸುಭಾಷ್ ಮಾದಿನೂರು, ಶಿವಪ್ಪ ಆರೇರ್, ಭೀಮರೆಡ್ಡಿ ಮೇಟಿ, ಹೇಮರೆಡ್ಡಿ ಮುಂಡರಗಿ, ಮುದ್ದಣ್ಣ ಮತ್ತಿತರು ಉಪಸ್ಥಿತಿ ಇದ್ದರು. ಗವಿ ಕಮತರ, ಈರಣ್ಣ ಭಾವಿ ಹುಡೆದ, ಸಂತೋಷ ಹಾಗೂ ಊರಿನ ಯುವ ನೌಕರ ಬಳಗ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಂಜೀವರೆಡ್ಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Please follow and like us:
error