ರೈತರ ಸಾಲ ಸಂಪೂರ್ಣ ಮನ್ನಾ ಮಾಡುತ್ತೇವೆ- ಹೆಚ್ಡಿಕೆ

ಕೊಪ್ಪಳ

ಈ ಚುನಾವಣೆಲ್ಲಿ ನೀವು ನಮ್ಮ ಪಕ್ಷ ಗೆಲ್ಲಿಸುವ ನಿರ್ಧಾರ ಮಾಡಿ, ನಾವು ರೈತರ ಸಾಲ ಸಂಪೂರ್ಣ ಮನ್ನಾ ಮಾಡಿಸುತ್ತೇನೆ

ಕೊಪ್ಪಳದ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕನೂರಿನ ಜೆಡಿಎಸ್ ಸಮಾವೇಶದಲ್ಲಿ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ

ನಮ್ಮ ಜೆಡಿಎಸ್ ಸರ್ಕಾರವನ್ನು ಬಹುಮತದಿಂದ ಈ ರಾಜ್ಯದಲ್ಲಿ ಗೆಲ್ಲಿಸಿ‌ .ಜೆಡಿಎಸ್ ಬಂದ್ರೆ ೨೪ ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುತ್ತೇನೆ

ರೈತರು ಸಾಲಮಾಡಬಾರದು ಅಂತಹ ಯೋಜನೆಗಳನ್ನು ರೂಪಿಸಲಾಗುತ್ತದೆ. ರೈತರು ಬೆಳೆದ ಬೆಳೆಗೆ ಮುನ್ನವೇ ಬೆಲೆ ನಿಗಧಿ ಮಾಡುತ್ತೇನೆ

ಜಾತಿ ವ್ಯಾಮೋಹಕ್ಕೆ ಒಳಗಾಗಿ ಮತ ನೀಡಬೇಡಿ

ಅಭಿವೃದ್ಧಿ ಪರ ಚಿಂತನೆ ಇರುವ ಸರ್ಕಾರಕ್ಕೆ ಮತ ಹಾಕಿ

ನಾನು ಅಧಿಕಾರಕ್ಕೆ ಬರಲು ನಿಮ್ಮ ಹತ್ತಿರ ಬಂದಿಲ್ಲ

ಎಲ್ಲ ಪಕ್ಷಗಳಿಗೆ ಅವಕಾಶ ನೀಡಿದ್ದೀರಿ ನಮ್ಮ ಜೆಡಿಎಸ್ ಪಕ್ಷಕ್ಕೊಮ್ಮೆ ಅವಕಾಶ ನೀಡಿ.. ನನಗೆ ಆಶೀರ್ವಾದ ಕೊಡಿ ನಿಮ್ಮ ಕಷ್ಟಕ್ಕೆ ನೆರವಾಗುತ್ತನೆ. ಕುಮಾರಸ್ವಾಮಿ ಯಾವುದೇ ದಾಖಲೆ ಇಲ್ಲದೇ ಮಾತನಾಡುವುದಿಲ್ಲ.

ಅನ್ನ ಭಾಗ್ಯ ಸಿದ್ದರಾಮಯ್ಯ ಹುಂಡಿಯಿಂದ ಬಂದಿಲ್ಲ ಸರ್ಕಾರದ ಖಜಾನೆಯಿಂದ ಬಂದಿದೆ.

ನಮ್ನ ಸರ್ಕಾರ ಬಂದ್ರೆ ರೈತರನ್ನು ವಿಧಾನಸಭಾಕ್ಕೆ ಕರೆಸುತ್ತೇನೆ

ನಮ್ಮ ನಾಡಿನ ೩೦ ಜಿಲ್ಲೆಗಳ ರೈತರನ್ನ ೧ ತಿಂಗಳದಲ್ಲಿ ಒಂದು ಬಾರಿ ವಿಧಾನಸೌದ ನನ್ನ ಮಹಡಿಗೆ ಕರೆಸುತ್ತೇನೆ.

ನನ್ನ ಆಡಳಿತದಲ್ಲಿ ಅಂಗವಿಕಲ ವಿಧವಾ ತಾಯಿಂದರಿಗೆ ೧೦೦ ರೂನ್ನು ೪೦೦ ರೂ ತಿಂಗಳಿಗೆ ನೀಡಿದ್ದೆ

೫೦೦೦ ಕಡಿಮೆ ಆದಾಯ ಇರುವವರಿಗೆ ೨೦೦೦ ರೂ ನೀಡುತ್ತೇನೆ

ಅಪೌಷ್ಟಿಕತೆಯಿಂದ ಬಳಲುವ ಗರ್ಭಿಣಿ ತಾಯಂದಿರಿಗೆ ತಿಂಗಳಿಗೆ ೬೦೦೦ ಕೊಡುತ್ತೇನೆ

ಲಂಚ ಕೇಳುವ ಪ್ರತಿಯೊಬ್ವ ಅಧಿಕಾರಿಯ ವಿರುದ್ಧ ಕಠಿಣ ನಿರ್ಧಾರ ಗಳನ್ನು ತೆಗೆದುಕೊಳ್ಳುತ್ತೇನೆ

ನಮ್ಮನ್ನು ಅಧಿಕಾರಕ್ಕೆ ತನ್ನಿ ಯುವಕರಿಗೆ ಉದ್ಯೋಗ ಕೊಡುತ್ತೇನೆ

ಪ್ರತಿ ಜೆಲ್ಲೆಯಲ್ಲಿ ನಿರುದ್ಯೋಗ ಯುವಕರಿಗೆ ಅಲ್ಲಿಯೇ ಉದ್ಯೋಗ ಕೊಡುತ್ತೇನೆ

ರಾಯರೆಡ್ಡಿ ಒಬ್ಬ ಹೈಟೆಕ್ ಶಾಸಕ ಇಂವರು ಬೇಡ

ಹಳ್ಳಿಗಾಡಿನಿಂದ ಬಂದ ಅಭ್ಯರ್ಥಿ ಆಯ್ಕೆ ನಿಮ್ಮದಾಗಲಿ

ಈ ಭಾಗದ ವೀರನಗೌಡ ಪಾಟೀಲ್ ಅವರಿಗೆ ನಿಮ್ಮ‌ ಮತ ನೀಡಿ ಆಶೀರ್ವದಿಸಿ ಹೆಚ್ ಡಿ ಕೆ ಹೇಳಿಕೆ. ಕೊಪ್ಪಳ ಜೆಡಿಎಸ್ ಅಭ್ಯರ್ಥಿ ಕೆ.ಎಂ.ಸಯ್ಯದ್, ಹೈ.ಕ.ಉಸ್ತುವಾರಿ ಹೆಚ್.ಆರ್.ಶ್ರೀನಾಥ ಸೇರಿದಂತೆ ಇತರರು ಉಪಸ್ತಿತರಿದ್ದರು.