ರೈತರ ರಟ್ಟೆಗೆ ಬಲ ತುಂಬಿದ ಉದ್ಯೋಗ ಖಾತ್ರಿ ಯೋಜನೆ :ಅಮರೇಶ ಕರಡಿ;

ತಾಲೂಕಿನ ಅಳವಂಡಿ ಗ್ರಾಮದಲ್ಲಿ ಗ್ರಾಪಂಯಿಂದ ನಡೆಯುತ್ತಿರುವ ಉದ್ಯೋಗ ಖಾತ್ರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ತಾವೇ ಸ್ವತಂಹ ಮಣ್ಣಿನ ಪುಟ್ಟಿ ಹೊರುವ ಮೂಲಕ ರೈತರಿಗೆ ಆತ್ಮವಿಶ್ವಾಸ ಮೂಡಿಸಿದ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಅಮರೇಶ ಕರಡಿ.

ಯೋಜನೆಯನ್ನು ಜಿಲ್ಲಾಯಾದ್ಯಂತ ಸಮರ್ಪಕ ಅನುಷ್ಠಾನಕ್ಕೆ ಆಗ್ರಹ
ಕೊಪ್ಪಳ: ಜಿಲ್ಲೆಯಲ್ಲಿ ಮಳೆ ಇಲ್ಲದೇ ರೈತರು ಕಂಗಾಲಾಗಿ ಹೋಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅನ್ನದಾತನ ರಟ್ಟೆಗೆ ಹೊಟ್ಟಗೆ ಬಲ ತುಂಬಿದೆ ಎಂದರು.
ತಾಲೂಕಿನ ಅಳವಂಡಿ ಗ್ರಾಮದಲ್ಲಿ ಬುಧವಾರ ಗ್ರಾಮ ಪಂಚಾಯಿತಿಯಿಂದ ನಡೆಯುತ್ತಿರುವ ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ನಿರೀಕ್ಷೆ ತಕ್ಕಹಾಗೇ ಮಳೆಯಾಗದೇ ರೈತ ಮತ್ತೇ ಸಾಲಗಾರರ ಬಾಯಿಗೆ ತುತ್ತಾಗುವಂತೆ ಮಾಡಿದೆ. ಅದರಲ್ಲೂ ಕೊಪ್ಪಳ ತಾಲೂಕಿನಲ್ಲಿ ಕಳೆದ ಮೂರು ತಿಂಗಳಿಂದಲೂ ಮಳೆಯಾಗದೇ ಬರಗಾಲ ಆವರಿಸಿಕೊಂಡತೆ ಭಾಸವಾಗಿದೆ. ಮಳೆಗಾಲದಲ್ಲಿ ರೈತರು ಬರಗಾಲವನ್ನು ಎದುರಿಸುತ್ತಿರುವುದು ದುರಾದುಷ್ಟಕರ ಸಂಗತಿ. ರೈತರನ್ನು ಹಿಮ್ಮಡಿಗೊಳಿಸಲು ಕೇಂದ್ರ ಸರಕಾರ ಜಾರಿಗೊಳಿಸಿದ ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ತಾಲೂಕಿನ ಎಲ್ಲಾ ರೈತರಿಗೂ ಒಂದು ಹೊತ್ತಿನ ಊಟ ಹಾಕುವಲ್ಲಿ ಯಶ ಕಂಡಿದೆ. ಹೀಗಾಗಿ ರೈತರು ತಾಲೂಕಿನಲ್ಲಿ ಮಳೆ ಇಲ್ಲ ಎಂದು ದ್ಯುತಿಗೆಡದೇ ಇತಂಹ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಅಳವಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಕಾಮಗಾರಿ ಇತರ ರೈತರಿಗೂ ಸ್ಪೂರ್ತಿದಾಯಕವಾಗಲಿದೆ. ರೈತರಿಗೆ ಆತ್ಮವಿಶ್ವಾಸ ಮೂಡಿಸುವಂತೆ ಕಾರ್ಯವನ್ನು ಇಂದೂ ಎಲ್ಲರೂ ಮಾಡಬೇಕಿದೆ. ಪ್ರತಿಯೊಬ್ಬರು ಸರಕಾರದ ಸೌಲಭ್ಯವನ್ನು ಸದುಪಯೋಗಪಡಿಸಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಮಳೆ ಇಲ್ಲದೇ ಬರಗಾಲ ಆವರಿಸಿಕೊಂಡಿದ್ದರಿಂದ ಉದ್ಯೋಗ ಖಾತ್ರಿ ಯೋಜನೆಯನ್ನು ಜಿಲ್ಲೆಯಾದ್ಯಂತ ಸಮರ್ಪಕವಾಗಿ ಜಾರಿಗೊಳಿಸಿ ರೈತರಿಗೆ ಆತ್ಮವಿಶ್ವಾಸ ಮೂಡಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಮಹಾಂತೇಶ ಪಾಡೀಲ್ ಮೈನಳ್ಳಿ, ಎಪಿಎಂಸಿ ಮಾಜಿ ಸದಸ್ಯ ಶ್ರೀನಿವಾಸ ಕಲಾದಗಿ, ಹನುಮಂತಪ್ಪ ವಂಕಿ ಇದ್ದರು.