ರೈತರ ಮನವೊಲಿಸಿ ಕಾಮಗಾರಿಗೆ ಅಡ್ಡಿಪಡಿಸದಂತೆ ಕ್ರಮ ಕೈಗೊಳ್ಳಿ : ಪಿ.ಸುನೀಲ್ ಕುಮಾರ್

ಕೊಪ್ಪಳ, ಮಾ. : ಭೂ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಜಮೀನುಗಳಲ್ಲಿ ಕೆಲವು ಭೂ ಮಾಲೀಕರುಗಳು ಪರಿಹಾರ ಧನ ಪಾವತಿಸದೇ ಇರುವ ಕಾರಣ ರೈಲ್ವೆ ಕಾಮಗಾರಿಗಳಿಗೆ ಅಡ್ಡಿಪಡಿಸುತ್ತಿದ್ದು, ಸಂಬAಧಿಸಿದ ಅಧಿಕಾರಿಗಳು ಸಮಸ್ಯೆ ಇರುವ ಸ್ಥಳಕ್ಕೆ ಭೇಟಿ ನೀಡಿ ರೈತರ ಮನವೊಲಿಸಿ ಕಾಮಗಾರಿಗಳಿಗೆ ಅಡ್ಡಿಪಡಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಸೂಚನೆ ನೀಡಿದರು.
ರೈಲ್ವೆ ಯೋಜನೆಗಳು, ರಾಷ್ಟಿçÃಯ ಹೆದ್ದಾರಿ, ವಸತಿ ನಿಲಯಗಳು, ರೈಲ್ವೆ ಇಲಾಖೆಗಳ ಮೆಲ್ಸೇತುವೆ ಮತ್ತು ಕೆಳಸೇತುವೆ ನಿರ್ಮಾಣಕ್ಕಾಗಿ ಜಮೀನುಗಳನ್ನು ಗುರುತಿಸಿರುವ ಬಗ್ಗೆ ಹಾಗೂ ಭೂ ಮಾಲೀಕರುಗಳಿಗೆ ಪರಿಹಾರಧನ ಪಾವತಿಸುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು (ಮಾ.12) ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗದಗ-ವಾಡಿ ರೈಲ್ವೆ ಯೋಜನೆ;
ಗದಗ-ವಾಡಿ ರೈಲ್ವೆ ಯೋಜನೆಗಾಗಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಕನೂರು ಹಾಗೂ ಕುಷ್ಟಗಿ ತಾಲ್ಲೂಕಿನಲ್ಲಿ ಒಟ್ಟು 1213-05 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದು, ಅದರ ಪೈಕಿ 811-26 ಎಕರೆ ಜಮೀನನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ.  ಆದರೆ ಈ ಜಮೀನುಗಳಲ್ಲಿ ಕೆಲವು ಸ್ಥಳಗಳಲ್ಲಿ ಭೂ ಮಾಲೀಕರುಗಳು ಅದಲು-ಬದಲು ಪ್ರಕರಣಗಳು, ಮರ, ಮಾಲ್ಕಿ ಹಾಗೂ ಜಮೀನಿನ ಪರಿಹಾರ ಧನ ಪಾವತಿಸದೇ ಇರುವ ಕಾರಣ ರೈಲ್ವೆ ಕಾಮಗಾರಿಗಳಿಗೆ ಅಡ್ಡಿಪಡಿಸುತ್ತಿದ್ದಾರೆ.  ತಹಶೀಲ್ದಾರ, ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ಧಾರವಾಡದ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧೀಕಾರಿಗಳು ಸಮಸ್ಯೆಗಳ ಇರುವ ಜಾಗಗಳಿಗೆ ಭೇಟಿ ನೀಡಿ ರೈತರ ಮನವೊಲಿಸಿ ಕಾಮಗಾರಿಯನ್ನು ಅಡ್ಡಪಡಿಸದಂತೆ ನೋಡಿಕೊಳ್ಳಬೇಕು ಎಂದರು.
ಮುನಿರಾಬಾದ್- ಮೆಹಬೂಬನಗರ ರೈಲ್ವೆ ಯೋಜನೆ;
ಮುನಿರಾಬಾದ್- ಮೆಹಬೂಬನಗರ ರೈಲ್ವೆ ಯೋಜನೆಯಡಿ ಒಟ್ಟು 1085-37 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದ್ದು, ಅದರ ಪೈಕಿ ಸುಮಾರು 100 ಎಕರೆ ಜಮೀನಿನ ಪಹಣಿ ಪತ್ರಿಕೆಗಳಲ್ಲಿ ರೈಲ್ವೆ ಇಲಾಖೆಯ ಹೆಸರು ಕಾಲೋಚಿತಗೊಂಡಿರುವುದಿಲ್ಲ.  ಈ ಜಮೀನುಗಳ ವರ್ಗಮುಬಾದಿಲು ಕಾರ್ಯವನ್ನು 15 ದಿನಗಳೊಳಗಾಗಿ ಪೂರ್ಣಗೊಳಿಸಲು ಉಪವಿಭಾಗಾಧಿಕಾರಿಗಳು ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಆರ್.ಓ.ಬಿ ಮತ್ತು ಆರ್.ಯು.ಬಿ ಗಳ ನಿರ್ಮಾಣ;
ಆರ್.ಓ.ಬಿ ಮತ್ತು ಆರ್.ಯು.ಬಿ ಗಳ ನಿರ್ಮಾಣದಡಿ ಎಲ್.ಸಿ ಸಂಖ್ಯೆ-63 (ಸ್ವಾಮಿ ವಿವೇಕಾನಂದ ಶಾಲೆ) ರಲ್ಲಿ ರಸ್ತೆ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ಸಂಬAಧಿಸಿದAತೆ ಭೂಸ್ವಾಧೀನ ಪ್ರಕ್ರೀಯೆ ಪೂರ್ಣಗೊಂಡಿದೆ, ಕಾಮಗಾರಿ ಪ್ರಗತಿಯಲ್ಲಿದೆ.  ಎಲ್.ಸಿ.-65 (ಕೆ.ಇ.ಬಿ ಕಛೇರಿ) ರಲ್ಲಿ ರಸ್ತೆ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ಸಂಬAಧಿಸಿದAತೆ ಭೂಸ್ವಾಧೀನ ಪ್ರಕ್ರೀಯೆ ಪೂರ್ಣಗೊಂಡಿದ್ದು, ಕಾಮಗಾರಿ ನಿರ್ವಹಿಸಲು ರೈಲ್ವೆ ಇಲಾಖೆಯಿಂದ ಟೆಂಡರ್ ಕರೆಯಬೇಕಾಗಿದೆ.  ಕೊಪ್ಪಳ ನಗರದ ಕುಷ್ಟಗಿ ರಸ್ತೆಯ ಎಲ್.ಸಿ.-66 ರಲ್ಲಿ ರಸ್ತೆ ಮೇಲು ಸೇತುವೆ ನಿರ್ಮಾಣ ಕಾಮಗಾರಿಗೆ ಸಂಬAಧಿಸಿದAತೆ ಭೂಸ್ವಾಧೀನ ಪ್ರಕ್ರೀಯೆ ಪೂರ್ಣಗೊಂಡಿದ್ದು, ಕಾಮಗಾರಿ ನಿರ್ವಹಿಸಲು ರೈಲ್ವೆ ಇಲಾಖೆಯಿಂದ ಟೆಂಡರ್ ಕರೆಯಲಾಗಿದೆ ಎಂದರು.
ಕೊಪ್ಪಳ ನಗರ ಎಲ್.ಸಿ.-68 ಗಂಗಾವತಿ ರಸ್ತೆ ಹತ್ತಿರ ರಸ್ತೆ ಮೇಲು ಸೇತುವೆ ನಿರ್ಮಾಣ ಹಾಗೂ ಬನ್ನಿಕೊಪ್ಪ ಹಾಗೂ ಭಾನಾಪೂರ ನಡುವೆ ಬರುವ ಎಲ್.ಸಿ.-51 ರಲ್ಲಿ ರಸ್ತೆ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ಸಂಬAಧಿಸಿದAತೆ ಸರ್ಕಾರದ ಹಂತದಲ್ಲಿ ವೆಚ್ಚ ಹಂಚಿಕೆ ಯೋಜನೆಯಡಿ ಅನುಮೋದನೆಗಾಗಿ ಬಾಕಿ ಇದೆ.  ಎಲ್.ಸಿ.72 ಕೊಪ್ಪಳ ತಾಲ್ಲೂಕಿನ ಗಿಣಿಗೇರಾ ಗ್ರಾಮದಲ್ಲಿ ರಸ್ತೆ ಮೇಲು ಸೇತುವೆ ನಿರ್ಮಾಣ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರೀಯೆ ಪೂರ್ಣಗೊಂಡಿದ್ದು, ಕಾಮಗಾರಿ ನಿರ್ವಹಿಸಲು ರೈಲ್ವೆ ಇಲಾಖೆಯಿಂದ ಟೆಂಡರ್ ಕರೆಯಲಾಗಿದೆ.  ಮುನಿರಾಬಾದ್ ಗ್ರಾಮದ ಎಲ್.ಸಿ.-79 ರಲ್ಲಿ ರಸ್ತೆ ಮೇಲು ಸೇತುವೆ ನಿರ್ಮಾಣ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರೀಯೆಯು ಪ್ರಗತಿಯಲ್ಲಿದ್ದು, ಭೂ ಮಾಲೀಕರೊಂದಿಗೆ ಸಭೆಯನ್ನು ಜರುಗಿಸಲಾಗಿದೆ ಎಂದರು.
ರಾಷ್ಟಿçÃಯ ಹೆದ್ದಾರಿ 63;
ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರಾ.ಹೆ 63ರ ಅಗಲೀಕರಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳ ಭೂ ಮಾಲೀಕರಿಗೆ ಸುಮಾರು ರೂ. 27 ಕೋಟಿ ಗಳ ಪರಿಹಾರ ಧನ ಪಾವತಿಸಲು ಬಾಕಿ ಇರುತ್ತದೆ.  ಯಲಬುರ್ಗಾ ತಾಲ್ಲೂಕಿನ ವಿವಿಧ ಗ್ರಾಮಗಳ ಜಮೀನುಗಳ ಭೂ ಮಾಲೀಕರಿಗೆ ಒಟ್ಟು ರೂ. 5 ಕೋಟಿಗಳ ಪರಿಹಾರ ಧನ ಪಾವತಿಸುವುದು ಬಾಕಿ ಇರುತ್ತದೆ.  ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ರೂ. 34 ಕೋಟಿಗಳ ಪರಿಹಾರ ಧನ ಪಾವತಿಸಲು ಬಾಕಿ ಇದ್ದು, ಪ್ರತಿಯೊಂದು ಗ್ರಾಮವಾರು ಹಾಗೂ ಭೂ ಮಾಲೀಕರವಾರು ಪಟ್ಟಿಯನ್ನು ಪಡೆದು ಮನೆ ಮನೆಗೆ ಹೋಗಿ ದಾಖಲೆಗಳನ್ನು ಪಡೆದು ಕೂಡಲೇ ಬಾಕಿ ಇರುವ ಪರಿಹಾರ ಧನವನ್ನು ಪಾವತಿಸಲು ಕ್ರಮ ಕೈಗೊಳ್ಳುವಂತೆ ರಾ.ಹೆ-63 ಧಾರವಾಡದ ವಿಶೇಷ ಭೂಸ್ವಾಧೀನಾಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಮಾಂತರ ವಸತಿ ಯೋಜನೆಗಳು;
ಗ್ರಾಮಾಂತರ ವಸತಿ ಯೋಜನೆಗಳಡಿ ಸಂಬAಧಿಸಿದ ತಹಶೀಲ್ದಾರರು ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಆಶ್ರಯ ಯೋಜನೆಗಳಿಗೆ ಸರ್ಕಾರಿ ಜಮೀನುಗಳನು ಗುರುತಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ದರಾಮೇಶ್ವರ ಸೇರಿದಂತೆ ರೈಲ್ವೆ ಅಧಿಕಾರಿಗಳು ಹಾಗೂ ತಹಶೀಲ್ದಾರರು ಮತ್ತು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error