ರೈತರ ಖಾತೆಗೆ ವಿಮಾ ಹಣ ಜಮಾ ಮಾಡುವಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ -ಸಂಸದ ಕರಡಿ ಸಂಗಣ್ಣ

ಫಸಲ್ ಭಿಮಾ ಯೋಜನೆಯ ಹಣ ನೀಡಿದ ಕೇಂದ್ರ ಸರ್ಕಾರ| ರೈತರ ಖಾತೆಗೆ ಜಮಾ ಮಾಡುವಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ||
೨೦೧೬, ೨೦೧೭ನೇ ಸಾಲಿನ ವಿಮಾ ಹಣ ಬಿಡುಗಡೆಗೆ ಸಂಸದ ಕರಡಿ ಸಂಗಣ್ಣ ಆಗ್ರಹ


ಕೇಂದ್ರ ಸರ್ಕಾರ ವಿಮಾ ಹಣವನ್ನು ಈಗಾಗಲೇ ರಾಜ್ಯ ಸರ್ಕಾರಕ್ಕೆ ನೀಡಿದೆ. ೨೦೧೬, ೨೦೧೭ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಬೆಳೆಯ ವಿಮಾ ಹಣವನ್ನು ಇದುವರೆಗೂ ರೈತರ ಖಾತೆಗೆ ಜಮಾ ಮಾಡಿಲ್ಲ. ರಾಜ್ಯ ಸರ್ಕಾರ ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಇದು ತರವಲ್ಲ, ಕೂಡಲೇ ವಿಮಾ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ರೈತರೊಂದಿಗೆ ಬಿದಿಗಿಳಿದು ಹೋರಾಟ ಮಾಡಲಾಗುವುದು.
– ಕರಡಿ ಸಂಗಣ್ಣ, ಬಿಜೆಪಿ ರಾಜ್ಯ ಕಾರ್ಯದರ್ಶಿ, ಹಾಗೂ ಕೊಪ್ಪಳ ಲೋಕಸಭಾ ಸದಸ್ಯರು.

ಕೊಪ್ಪಳ, ಜೂ.೧೪: ಫಸಲ್ ಭಿಮಾ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿದೆ. ಸಕಾಲಕ್ಕೆ ರೈತರ ಖಾತೆಗೆ ಹಣ ಬಿಡುಗಡೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡಿದೆ. ಕೂಡಲೇ ಜಿಲ್ಲೆಯ ಎಲ್ಲಾ ರೈತರ ವಿಮಾ ಹಣ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಹಾಗೂ ಸಂಸದ ಕರಡಿ ಸಂಗಣ್ಣ ಆಗ್ರಹಿಸಿದ್ದಾರೆ.
ಕಳೆದ ೨೦೧೬ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು ೩೮೫೩೦ ರೈತರು ವಿಮಾ ಯೋಜನೆಯಡಿಯಲ್ಲಿ ನೋಂದಣಿ ಮಾಡಿದ್ದಾರೆ. ಇದಕ್ಕಾಗಿ ೫೮.೫೨.೮೧.೦೦೦ ಕೋಟಿ ಫಸಲ್ ಭಿಮಾ ಯೋಜನೆಯ ಹಣವನ್ನು ಕೇಂದ್ರ ಸಕಾರ ಬಿಡುಗಡೆ ಮಾಡಿದೆ. ಈ ಪೈಕಿ ರಾಜ್ಯ ಸರ್ಕಾರ ೩೪.೪೩೩ ರೈತರಿಗೆ ಒಟ್ಟು ೫೩.೨೫.೨೧.೦೦೦ ಕೋಟಿ ಹಣ ಖಾತೆಗೆ ಜಮಾ ಮಾಡಿದೆ. ಆದರೆ ೪.೦೯೨ ರೈತರಿಗೆ ೫.೨೭ ಕೋಟಿ ಹಣ ಇನ್ನೂ ಜಮಾ ಮಾಡಬೇಕಿದೆ. ಈ ಸಾಲಿನ ಹಿಂಗಾರು ಬೆಳೆಯ ವಿಮಾ ಪೈಕಿ ೬೫.೫೨೦ ರೈತರ ೭೭.೫೧.೧೯.೦೦೦ ಕೋಟಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದರೂ ಕೂಡಾ ರಾಜ್ಯ ಸರ್ಕಾರ ಜಮಾ ಮಾಡಿಲ್ಲ.
ಇಂದರೊಂದಿಗೆ ೨೦೧೭ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ೭೨೫೮ ರೈತರ ೮.೭೦.೧೩.೦೦೦ ಕೋಟಿ ಹಣವನ್ನು ಇದುವರೆಗೂ ರಾಜ್ಯ ಸರ್ಕಾರ ನೀಡದಿರುವುದು ಖಂಡನೀಯ. ಯುಐಐ ಕಂ.ಲಿಮಿಟೆಡ್ ವಿಮಾ ಕಂಪನಿಗೆ ಕೊಪ್ಪಳ ಜಿಲ್ಲೆಯ ರೈತ ಪಲಾನುಭವಿಗಳನ್ನು ನೀಡಲಾಗಿದೆ. ಕೇಂದ್ರ ಸರ್ಕಾರ ತನ್ನ ಪಾಲಿನ ಎಲ್ಲಾ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದರೂ, ರಾಜ್ಯ ಸರ್ಕಾರ ಅದನ್ನು ತನ್ನಲ್ಲಿಯೇ ಇಟ್ಟುಕೊಂಡು ಕುಳಿತಿರುವುದು ನಾಚೀಕೆಗೇಡಿನ ಸಂಗತಿ. ಇದರಿಂದಾಗಿ ಜಿಲ್ಲೆಯ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ಕೂಡಲೇ ಈ ಎಲ್ಲಾ ವಿಮಾ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು. ಇಲ್ಲವಾದರೆ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲೆಯಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಹಾಗೂ ಸಂಸದ ಕರಡಿ ಸಂಗಣ್ಣ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಮುಂಗಾರು ಮಳೆ ಆರಂಭವಾಗಿದ್ದು, ಜಿಲ್ಲೆಯ ರೈತರು ಬಿತ್ತನೆ ಮಾಡಲು ತಯಾರಿ ನಡೆಸಿದ್ದಾರೆ. ಅವರಿಗೆ ವಿಮಾ ಹಣ ದೊರೆತರೆ ಸಕಾಲಕ್ಕೆ ಬಿತ್ತನೆ ಬೀಜ, ರಸಗೊಬ್ಬರ, ಕೂಲಿ ಹಣ ನೀಡಲು ಇತರ ಕೃಷಿ ಚಟುವಟಿಕೆ ಕೈಗೊಳ್ಳಲು ಸಹಾಯವಾಗುತ್ತದೆ. ಇಲ್ಲವಾದರೆ ಸಾಲ ಮಾಡಿ ಒಕ್ಕಲುತನ ಮಾಡಬೇಕಾದ ಅನಿವಾರ್ಯತೆ ಇದೆ. ರಾಜ್ಯ ಸರ್ಕಾರ ರೈತರನ್ನು ಸಾಲದ ಕೋಪಕ್ಕೆ ತಳ್ಳುವ ಬದಲು, ಕೂಡಲೇ ವಿಮಾ ಹಣ ಬಿಡುಗಡೆ ಮಾಡಿ ರೈತರಿಗೆ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.