ರೈತರು ಬೆಳೆ ವಿಮೆ ನೋಂದಾಯಿಸುವಂತೆ ಕ್ರಮವಹಿಸಿ : ಶಬನಾ ಎಂ. ಶೇಖ್

ಫಸಲು ಬೀಮಾ ಯೋಜನೆಯಡಿ ಜಾಗೃತಿ ಮೂಡಿಸಿ

ಕೊಪ್ಪಳ ಜು. : ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲು ಬೀಮಾ ಯೋಜನೆಯಡಿ ಬೆಳೆ ವಿಮೆ ನೋಂದಾವಣಿ ಪ್ರಗತಿಯು ತುಂಬಾ ಕುಂಠಿತವಾಗಿದ್ದು, ರೈತರಿಗೆ ಯೋಜನೆಯ ಕುರಿತು ಜಾಗೃತಿ ಮೂಡಿಸಿ ಬೆಳೆ ವಿಮೆ ನೋಂದಾಯಿಸುವಂತೆ ಕ್ರಮವಹಿಸುವಂತೆ ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ಶಬನಾ ಎಂ. ಶೇಖ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲು ಬೀಮಾ ಯೋಜನೆ ಕುರಿತು ಕೊಪ್ಪಳ ಕೃಷಿ ಇಲಾಖೆ ಸಭಾಂಗಣದಲ್ಲಿ ಶುಕ್ರವಾರದಂದು (ಜು.05ರಂದು) ಆಯೋಜಿಸಲಾದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಾಕ್ಷ ಪ್ರಧಾನಮಂತ್ರಿ ಫಸಲ ಬೀಮಾ ಯೋಜನೆ ಜಾರಿಯಲ್ಲಿದ್ದು, ಕೊಪ್ಪಳ ಜಿಲ್ಲೆಗೆ ಅಧಿಸೂಚಿತ ಬೆಳೆಗಳಾದ ಮಳೆಯಾಶ್ರಿತ ಹೆಸರು ಮತ್ತು ನೀರಾವರಿ ಹತ್ತಿಗೆ ಜುಲೈ. 16 ಹಾಗೂ ಇತರೆ ಅಧಿಸೂಚಿತ ಬೆಳೆಗಳಿಗೆ ಜುಲೈ. 31 ಬೆಳೆ ವಿಮೆ ನೋಂದಾಯಿಸಲು ಕೊನೆ ದಿನವಾಗಿರುತ್ತದೆ.  ಬೆಳೆ ವಿಮೆ ನೋಂದಾವಣಿ ಪ್ರಗತಿಯು ತುಂಬಾ ಕುಂಠಿತವಾಗಿದ್ದು, ರೈತರಿಗೆ ಫಸಲು ಬೀಮಾ ಯೋಜನೆ ಬಗ್ಗೆ ಹೆಚ್ಚಿನ ಪ್ರಚಾರ ಮಾಡಿ.  ಅಗ್ರಿಕಲ್ಚರ್ ಇನ್ಸೂರೆನ್ಸ ಕಂಪನಿ ಲಿಮಿಟೆಡ್ ಬೆಂಗಳೂರು ವತಿಯಿಂದ ಕೊಪ್ಪಳ ಜಿಲ್ಲಾ ಮಟ್ಟಕ್ಕೆ ಮತ್ತು ವಿವಿಧ ತಾಲೂಕುಗಳಿಗೆ ಪ್ರತಿನಿಧಿಯನ್ನು ನೇಮಿಸಲಾಗಿದೆ.  ನೇಮಿಸಲ್ಪಟ್ಟ ಪ್ರತಿನಿಧಿಗಳು ಜಂಟಿ ಕೃಷಿ ನಿರ್ದೇಶಕರ ಕಛೇರಿ ಹಾಗೂ ಸಂಬಂಧಿಸಿದ  ಸಹಾಯಕ ಕೃಷಿ ನಿರ್ದೇಶಕರ ಕಛೇರಿಗಳಲ್ಲಿದ್ದು ಬೆಳೆಯ ವಿಮೆ ಅರ್ಜಿಗಳು ರೈತರಿಗೆ, ಬ್ಯಾಂಕ್‌ಗಳಲ್ಲಿ ಮತ್ತು ಸಾಮನ್ಯ ಸೇವಾ ಕೇಂದ್ರಗಳಲ್ಲಿ ಲಭ್ಯವಾಗುವಂತೆ ನೋಡಿಕೊಂಡು ಯಾವುದೇ ರೀತಿಯ ಸಮಸ್ಯೆಗಳು ರೈತರಿಗೆ ಆಗದಂತೆ ನೋಡಿಕೊಳ್ಳಬೇಕು.  ಇನ್ಸೂರೆನ್ಸ್ ಕಂಪನಿಯವರು ಈ ಯೋಜನೆ ಕುರಿತು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡು ಜಿಲ್ಲೆಯ ರೈತರಲ್ಲಿ ಅರಿವು ಮೂಡಿಸಿ.  ಬೆಳೆ ವಿಮೆಗೆ ಸಂಬಂಧಿಸಿದಂತೆ ರೈತರಲ್ಲಿ ಸಮಸ್ಯೆ ಬಂದಾಗ ಇನ್ಸೂರೆನ್ಸ ಕಂಪನಿಯ ಪ್ರತಿನಿಧಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಇನ್ಸೂರೇನ್ಸ ಕಂಪನಿಯ ಪ್ರತಿನಿಧಿಗಳು ರೈತರ ಸಮಸ್ಯೆಗೆ ಸ್ಪಂದಿಸಬೇಕು.  ಬ್ಯಾಂಕ್ ಸಿಬ್ಬಂಧಿಗಳು ರೈತರ ಬೆಳೆ ವಿಮೆ ಅರ್ಜಿಗಳ ಮಾಹಿತಿಯನ್ನು ಸಂರಕ್ಷಣೆ ಪೋರ್ಟಲ್‌ನಲ್ಲಿ ನ್ಯೂನತೆಗಳಾಗದಂತೆ ನೊಂದಾಯಿಸಿ ಕ್ರಮವಹಿಸಬೇಕು ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ಶಬನಾ ಎಂ. ಶೇಖ್ ಅವರು ಹೇಳಿದರು.
ಇನ್ಸೂರೇನ್ಸ ಸಂಸ್ಥೆಯ ಪ್ರತಿನಿಧಿಗಳ ವಿವರ;
2019-20 ನೇ ಸಾಲಿನ ಬೆಳೆ ವಿಮೆಯ ಇನ್ಸೂರೇನ್ಸ ಸಂಸ್ಥೆಯ ಪ್ರತಿನಿಧಿಗಳ ವಿವರ ಇಂತಿದೆ.  ಇನ್ಸೂರೆನ್ಸ್ ಕಂಪನಿಯ ಜಿಲ್ಲಾ ಮಟ್ಟದ ಪ್ರತಿನಿಧಿ ಬಿ. ನಾಗೇಂದ್ರ ಮೊ.ಸಂ. 8884499562, ಹಾಗೂ ತಾಲೂಕು  ಪ್ರತಿನಿಧಿಗಳಾದ ಕೊಪ್ಪಳ; ಬಿ. ನಾಗೇಂದ್ರ ಮೊ.ಸಂ.  8884499562, ಕುಷ್ಟಗಿ; ಗೂರಪ್ಪ ಮೊ.ಸಂ. 9731970926, ಯಲಬುರ್ಗಾ; ಬಸವರಾಜ ಕೊಟಗಿ ಮೊ.ಸಂ. 9632105476, ಗಂಗಾವತಿ; ಕೆ.ಮಹೇಶ ಮೊ.ಸಂ. 9743855126, ಕಾರಟಗಿ; ವಿಠ್ಠಲ ಸ್ವಾಮಿ ಮೊ.ಸಂ. 8660643857.
ಲೀಡ್ ಬ್ಯಾಂಕ್ ಮ್ಯಾನೇಜರ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಬೆಳೆ ಸಾಲ ಪಡೆದ ರೈತರನ್ನು ಕಡ್ಡಾಯವಾಗಿ ಬೆಳೆ ವಿಮೆ ನೋಂದಣಿ ಮಾಡಲು ಈಗಾಗಲೇ ಜಿಲ್ಲೆಯ ಎಲ್ಲಾ ಸಂಬಂಧಿಸಿದ ಬ್ಯಾಂಕ್ ಶಾಖೆಗಳಿಗೆ ತಿಳಿಸಲಾಗಿದ್ದು, ಅದರಂತೆ ಕ್ರಮವಹಿಸಲಾಗುವುದೆಂದರು.
ಉಪ ಕೃಷಿ ನಿರ್ದೇಶಕ ವೀರೇಶ್ ಹುನಗುಂದರವರು ಮಾತನಾಡಿ, ಈ ಯೋಜನೆಯ ಲಾಭವನ್ನು ಜಿಲ್ಲೆಯ ಎಲ್ಲಾ ರೈತರು ಪಡೆಯಲು ಮತ್ತು ಕಾರ್ಯಕ್ರಮವನ್ನು ಯಶ್ವಸಿಯಾಗಿ ಅನುಷ್ಠಾನಗೊಳಿಸಲು ಎಲ್ಲರೂ ಸಕ್ರಿÃಯವಾಗಿ ಪಾಲ್ಗೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗಹ್ರಣಾಧಿಕಾರಿ ಕೃಷ್ನಮೂರ್ತಿ ದೇಸಾಯಿ ಸೇರಿದಂತೆ ತೋಟಗಾರಿಕೆ ಇಲಾಖೆ, ಸಹಕಾರ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಅಗ್ರಿಕಲ್ಚರ್ ಇನ್ಸೂರೆನ್ಸ್ಸ್ ಕಂಪನಿ ಲಿಮಿಟೆಡ್ ಬೆಂಗಳೂರು ಪ್ರತಿನಿಧಿಗಳು ಉಪಸ್ಥಿತರಿದ್ದರು.

Please follow and like us:
error