ರೈತರು ಜೇನು ಸಾಕಾಣಿಕೆಗೆ ಮುಂದಾಗಿ : ಯಂಕಣ್ಣ ಯರಾಶಿ

ಜೇನು ತಾಂತ್ರಿಕ ಕಾರ್ಯಾಗಾರ

ಕೊಪ್ಪಳ ನ. : ಸಸ್ಯ ಹಾಗೂ ಮರಗಳಲ್ಲಿ ಪರಾಗಸ್ಪರ್ಶಕ್ಕೆ ಜೇನು ಹುಳು ಅತ್ಯವ್ಯಶ್ಯಕವಾಗಿ ಬೇಕಾಗಿದ್ದು, ಜೇನು ಸಾಕಾಣಿಕೆಗೆ ಮುಂದಾಗುವಂತೆ ಎಂದು ಕೊಪ್ಪಳ ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷರಾದ ಯಂಕಣ್ಣ ಯರಾಶಿ ಅವರು ರೈತರಿಗೆ ಕರೆ ನೀಡಿದರು.
ಕೊಪ್ಪಳ ತೋಟಕಾರಿಕೆ ಇಲಾಖೆ ವತಿಯಿಂದ ಕೊಪ್ಪಳದಲ್ಲಿ ಆಯೋಜಿಸಲಾದ “ಮಧು ಮೇಳ” ಜೇನು ಪ್ರದರ್ಶನ ಮತ್ತು ಮಾರಾಟ ಮೇಳದ ಸಮಾರೋಪ ಹಾಗೂ ಜೇನು ಕೃಷಿ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತೋಟಗಳಲ್ಲಿ ಹಾಗೂ ಮನೆಯಲ್ಲಿಯೇ ಜೇನು ಹುಳುಗಳ ಸಾಕಾಣಿಕೆ ಮಾಡುವುದರ ಮೂಲಕ ಜೇನು ಕೃಷಿಯನ್ನು ನಡೆಸಬಹುದಾಗಿದೆ. ಪರಗಾರ್ಸ್ಪಶ ಇಲ್ಲದೆ ಯಾವುದೇ ಗಿಡ-ಮರಗಳಲ್ಲಿ ಸಂತಾನೋತ್ಪತ್ತಿ ಆಗಲು ಸಾಧ್ಯವಿಲ್ಲ. ಜೇನು ಹುಳುಗಳು ಹೂವಿನಲ್ಲಿ ರಸ ಹಿರುವ ಪ್ರಕ್ರೀಯಿಂದ ಸಸ್ಯ ಹಾಗೂ ಮರಗಳಲ್ಲಿ ಪರಾಗಸ್ಪರ್ಶ ಪ್ರಕ್ರೀಯೆ ಹೆಚ್ಚಾಗುತ್ತದೆ. ಜೇನು ನೋಣಗಳಿಂದ ಪರಗಾಸ್ಪರ್ಶ ಆದಾಗ ಮಾತ್ರ ಬೆಳೆ ಬೆಳೆಯಲು ಸಾಧ್ಯ. ಅಲ್ಲದೇ ಜೇನು ಕೃಷಿಯಿಂದ ಆದಾಯ ಹೆಚ್ಚಳದ ಜೊತೆಗೆ ಕೃಷಿಯಲ್ಲೂ ಕೂಟ ಮಹತ್ತರವಾದ ಬದಲಾವಣೆಗಳನ್ನು ಕಾಣ ಬಹುದಾಗಿದೆ. ಜೇನು ಅತ್ಯದ್ಬುತವಾದ ಪೌಷ್ಟಿಕಾಂಶ ಗುಣಗಳನ್ನು ಹೊಂದಿರುವ ನೈಸರ್ಗಿಕ ಆಹಾರವಾಗಿದ್ದು, ಇದಕ್ಕೆ ಮಾರುಕಟ್ಟೆಯಲ್ಲಿ ಸಹ ತುಂಬಾ ಬೇಡಿಕೆ ಇದೆ. ಜೇನು ಕೃಷಿಯೂ ಒಂದು ಕಡಿಮೆ ಬಂಡವಾಳ ಹೂಡಿಕೆಮಾಡಿ ಹೆಚ್ಚು ಅದಾಯಗಳಿಸುವ ಮತ್ತು ಲಾಭದಾಯಕ ಕೃಷಿ ಉದ್ಯಮವಾಗಿದೆ. ಈ ನಿಟ್ಟಿನಲ್ಲಿ ಕೊಪ್ಪಳ ತೋಟಗಾರಿಕೆ ಇಲಾಖೆಯು ರೈತರಿಗೆ ಪ್ರಾತ್ಯಕ್ಷಿಕವಾಗಿ ಜೇನು ಕೃಷಿ ಬಗ್ಗೆ ಆಕರ್ಷಿಸಲು ಮಧು ಮೇಳವನ್ನು ಆಯೋಜಿಸಿ, ಜೇನು ಕೃಷಿಕರು ತಯಾರಿಸಿದ ಜೇನು ತುಪ್ಪ ಮತ್ತು ಇನ್ನಿತರೆ ಔಷಧಿ ವಸ್ತುಗಳ ಮಾರಾಟಕ್ಕೆ ಅನುಕೂಲ ಮಾಡಿದ್ದು, ಸಾರ್ವಜನಿಕರಿಗೆ ಶುದ್ಧವಾದ ಜೇನು ತುಪ್ಪ ಹಾಗೂ ರೈತರಿಗೆ ಯೋಗ್ಯ ಬೆಲೆ ದೊರಕಿಸಿಕೊಟ್ಟಂತಾಗಿದೆ ಎಂದು ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷರಾದ ಯಂಕಣ್ಣ ಯರಾಶಿ ಅವರು ಹೇಳಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ಮಾತನಾಡಿ, ಜೇನು ಹುಳು ಇಲ್ಲದೇ ಆಹಾರ ಉತ್ಪತ್ತಿ ಇಲ್ಲ. ಒಂದು ಜೇನು ನೋಣ ಐದು ಸಾವಿರ ಹೂಗಳನ್ನು ಸ್ಪರ್ಶಿಸುತ್ತದೆ. ಜೇನಿನ ಸ್ಪರ್ಶದಿಂದ ಎಲ್ಲಾ ಬೆಳೆಗಳು ಉತ್ತಮವಾಗುತ್ತವೆ. ವರ್ಷ ಒಬ್ಬ ಮನುಷ್ಯ ಕನಿಷ್ಠ 250 ಗ್ರಾಂ. ಜೇನು ತುಪ್ಪವನ್ನು ಸೇವಿಸಬೇಕು. ಆದರೆ ಜೇನು ಉತ್ಪಾದನೆಯನ್ನು ಕೆಲವೇ ಕೆಲವು ರೈತರು ಮಾಡುತ್ತಿದ್ದಾರೆ. ರೈತರಿಗೆ ಜೇನು ಕೃಷಿಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸಲು ಇಲಾಖೆ ವತಿಯಿಂದ ಕಳೆದ ವರ್ಷ ಪ್ರಪ್ರಥಮಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ಮಧು ಮೇಳವನ್ನು ಆಯೋಜಿಸಲಾಗಿದ್ದು, 1.5 ಟನ್ ಜೇನು ತುಪ್ಪ ಮಾರಾಟವಾಗಿತ್ತು ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದರಿಂದ ರೈತರು ಜೇನು ಕೃಷಿಯತ್ತ ಮುಂದಾಗಿದ್ದಾರೆ. ಈ ವರ್ಷ ಆಯೋಜಿಸಿರುವ ಮಧು ಮೇಳದಲ್ಲಿ ಸುಮಾರು 2 ಟನ್ ಗಿಂತಲು ಅಧಿಕ ಜೇನು ತುಪ್ಪ ಮಾರಾಟವಾಗಿದೆ. ಮೇಳದಲ್ಲಿ ಶಿರಶಿ ಮತ್ತು ಬಳ್ಳಾರಿಯ ಜೇನು ಕೃಷಿಕರಿಂದ ಜೇನು ತುಂಪಾ ಮತ್ತು ಜೇನಿನಿಂದ ತಯಾರಿಸಲಾದ ಜೆಲ್ಲಿ, ಜ್ಯಾಮ್ ಇತ್ಯಾಧಿ ಸಾಮಾಗ್ರಿಗಳು ಮಾರಾಟವಾಗಿವೆ. ಅಲ್ಲದೇ ನಮ್ಮ ಕೊಪ್ಪಳ ಜಿಲ್ಲೆಯ ಜೇನು ಕೃಷಿಕ ನಿಂಗಪ್ಪ ಎಂಬುವವರು ತಯಾರಿಸಿದ ಜೇನು ಕ್ಯಾಂಡಿಗೆ ಜಿಲ್ಲೆಯ ಜನತೆಯು ಮನಸೊತಿದ್ದಾರೆ. ಜೇನು ಕ್ಯಾಂಡಿಯು ಸುಮಾರು 1.5 ಲಕ್ಷದವರೆಗೆ ವ್ಯಾಪಾರವಾಗಿದೆ. ಮೇಳದಲ್ಲಿ ಉತ್ತಮ ಗುಣಮಟ್ಟದ ಜೇನು ಸಿಗುತ್ತಿದ್ದು, ಜಿಲ್ಲೆಯ ಸಾರ್ವಜನಿಕರು ಇಲಾಖೆಗೆ ಬಂದು ಧನ್ಯವಾದಗಳನ್ನು ಹೇಳುತ್ತಿದ್ದಾರೆ. ಕೇವಲ ಎರಡೇ ಎರಡು ದಿನಗಳಲ್ಲಿ ಜೇನು ತುಪ್ಪ ಮತ್ತು ಅದರಿಂದ ತಯಾರಿಸಿದ ಔಷಧಿ ಸಾಮಾನುಗಳು ವ್ಯಾಪಾರವಾಗಿ, ಎಲ್ಲಾ ಸಾಮಾಗ್ರಿಗಳು ಖಾಲಿಯಾಗಿರುವುದರಿಂದ ಜೇನು ತುಪ್ಪವನ್ನು ತಂದುಕೊಡಬೇಕೆಂದು ಗ್ರಾಹಕರು ಇಲಾಖೆಗೆ ಒತ್ತಾಯಿಸುತ್ತಿದ್ದಾರೆ. ಜೇನು ಸಾಕಾಣಿಕೆಗಾಗಿ ಆಸಕ್ತರಿಗೆ ಇಲಾಖೆ ವತಿಯಿಂದ ಮಾಹಿತಿ ಹಾಗೂ ರೀಯಾಯಿತಿ ದರಗಳಲ್ಲಿ ಸಾಮಾಗ್ರಿಗಳನ್ನು ಒದಗಿಸಲಾಗುತ್ತದೆ. ಮಧು ವನ ಎಂಬ ಕಾರ್ಯಕ್ರಮದಡಿ ಜೇನು ಕೃಷಿಕರಿಗೆ ರೂ. 50 ಸಾವಿರ ಸಹಾಯಧನವನ್ನು ನೀಡಲಾಗುತ್ತದೆ. ಜೇನು ಕೃಷಿಗೆ ಉತ್ತೇಜಿಸುವಂತೆ ಒಂದು “ಮಧು ವನ” ಸ್ಥಾಪನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದರು.
ಸಮಾರಂಭದಲ್ಲಿ ಕೊಪ್ಪಳ ಕೃಷಿ ವಿಸ್ತರಣ ಶಿಕ್ಷಣ ಕೇಂದ್ರ ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ, ಕೊಪ್ಪಳ ಅಭಿನವಶ್ರೀ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಕೆ. ಶಿವರಾಮಮಪ್ಪ ಗಬ್ಬೂರು, ಜೇನು ಕೃಷಿಕರಾದ ಬಳ್ಳಾರಿ ಅರವಿಂದ ಮತ್ತು ಕೊಪ್ಪಳದ ನಿಂಗಪ್ಪ ಸೇರಿದಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಹನುಮನಟ್ಟಿ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ (ಕೀಟ ಶಾಸ್ತ್ರ ವಿಭಾಗ) ಡಾ. ಎಸ್.ಟಿ. ಪ್ರಭು, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿ (ಕೀಟ ಶಾಸ್ತ್ರ) ಡಾ. ಪಿ.ಆರ್. ಬದರಿಪ್ರಸಾದ್, ಶಿರಸಿ ತಾಲೂಕಿನ ತಾರಗೋಡದ ನಾಟಿ ವೈದ್ಯ, ಪ್ರಗತಿ ಪರ ರೈತ ಹಾಗೂ ಜೇನು ಕೃಷಿಕರಾದ ಮಧುಕೇಶ್ವರ್ ಜೆ. ಹೆಗಡಿ ಅವರಿಂದ ವಿಶೇಷ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮ ಜರುಗಿತು