ರೈತನ ಸಹಾಯಕ್ಕೆ ಬಂದ ಕೊಪ್ಪಳ ಜೆಡಿಎಸ್ ನಾಯಕರು

Koppal – ರೈತರ ಬೆಳೆ ಸಾಲವನ್ನು 2 ಲಕ್ಷದವರೆಗೂ ಸಿಎಂ ಹೆಚ್.ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ರೂ, ಕೊಪ್ಪಳದಲ್ಲಿ ಮಾತ್ರ ಬ್ಯಾಂಕಿನವರು ರೈತರಿಗೆ ಕಿರಿಕಿರಿ ಮಾಡ್ತಾ ಇದ್ದಾರೆ. ಹೌದು ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ನಿಂಗಪ್ಪ ಪೂಜಾರ ಎನ್ನುವ ರೈತ, ಕೆನರಾ ಬ್ಯಾಂಕಿನಲ್ಲಿ 1 ಲಕ್ಷ 80 ಸಾವಿರ ಹಣವನ್ನು ಸಾಲ ಪಡೆದಿದ್ದ. ಇದಾದ ಬಳಿಕ ಸಿಎಂ ಹೆಚ್.ಟಿ ಕುಮಾರಸ್ವಾಮಿ 2 ಲಕ್ಷದವರೆಗೂ ಬೆಳೆ ಸಾಲಮನ್ನಾ ಮಾಡಿದ್ರು. ಇಷ್ಟೇಲ್ಲಾ ಘೋಷಣೆ ಆದ್ರೂ ರೈತನ ಗಮನಕ್ಕೆ ತಾರದೇ ಸುಗರ್ ಫ್ಯಾಕ್ಟರಿಯವರು ಗೊಬ್ಬರ ಖರೀದಿಗಾಗಿ ಹಾಕಿದ್ದ 24 ಸಾವಿರ ಹಣವನ್ನು ಬ್ಯಾಂಕಿನವರು ಸಾಲದ ಖಾತೆಗೆ ಹಾಕಿಕೊಂಡಿದ್ರು.

https://youtu.be/fhXJ4Sml2z4

ಇದ್ರಿಂದ ರೈತ ಏನು ಮಾಡಬೇಕು ಅಂತಾ ದಿಕ್ಕುತೋಚದಂತೆ ಕಂಗಲಾಗಿದ್ದ. ಇದ್ರಿಂದ ಎಚ್ಚೇತ್ತುಕೊಂಡು ಜೆಡಿಎಸ್ ಮುಖಂಡರು ನಮ್ಮ ಸಿಎಂ ಹೆಸರು ಹಾಳಾಗುತ್ತೆ ಅಂತಾ ರೈತನೊಂದಿಗೆ ಬ್ಯಾಂಕಿಗೆ ತೆರಳಿ ಮ್ಯಾನೇಜರ್ನ್ನು ತರಾಟೆಗೆ ತೆಗೆದುಕೊಂಡ್ರು. ತಕ್ಷಣ ಗೊಬ್ಬರಕ್ಕಾಗಿ ಹಾಕಿದ ಹಣವನ್ನು ಮ್ಯಾನೇಜರ್ ಕಡೆಯಿಂದ ರೈತನಿಗೆ ವಾಪಸ್ಸು ಮರಳುವಂತೆ ಮಾಡಿದ್ರು. https://youtu.be/fhXJ4Sml2z4

ಈ ಸಂದರ್ಭದಲ್ಲಿ ಕೊಪ್ಪಳ ಜೆಡಿಎಸ್ ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಪ್ರದೀಪಗೌಡ ಮಾಲೀಪಾಟಿಲ್, ಜಿಲ್ಲಾ ಕಾರ್ಯಾಧ್ಯಕ್ಷ ವಿರೇಶ ಮಹಾಂತಯ್ಯನಮಠ, ಜಿಲ್ಲಾ ವಕ್ತಾರ ಮೌನೇಶ ಎಸ್ ವಡ್ಡಟ್ಟಿ, ಪ್ರಧಾನಕಾರ್ಯದರ್ಶಿ ಜಿಲಾನ ಮೈಲೈಕ, ನಗರಸಭೆ ಸದಸ್ಯ ಚನ್ನಪ್ಪ ಕೊಟ್ಯಾಳ, ಮಲ್ಲಿಕಾರ್ಜುನಗೌಡ ವಕೀಲರು, ಹಾಗು ಅನೇಕ ರೈತರು ಪಾಲ್ಗೊಂಡಿದ್ದರು.